Breaking News
ದೆಹಲಿ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ‌ಕಪ್ಪು ಚುಕ್ಕೆ: ಸೌಹಾರ್ದ ಮಾರ್ಗವೇ ಇದಕ್ಕೆ ಮದ್ದು: ಎಚ್.‌ ಡಿ. ಕುಮಾರಸ್ವಾಮಿಶಶಿಕಲಾ‌ ಸೆರೆವಾಸ ಅಂತ್ಯ: ಜೈಲಿನಿಂದ ಬಿಡುಗಡೆಯಾದ ಜಯಲಲಿತಾ ಆಪ್ತೆರೈತರ ಹೆಸರಲ್ಲಿ ರಾಜಕೀಯ ಪುಂಡಾಟ,ದಾಂಧಲೆ ಮಾಡುವುದು ಸರಿಯಲ್ಲ: ನಳಿನ್ ಕುಮಾರ್ ಕಟೀಲ್ರೈತ ವಿರೋಧಿ ಕಾನೂನುಗಳನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು: ಸಿದ್ದರಾಮಯ್ಯ72ನೇ ಗಣರಾಜ್ಯೋತ್ಸವ – ರಾಜ್​ಪಥ್‌ನಲ್ಲಿ ಧ್ವಜಾರೋಹಣ ನೆರವೇರಿಸಿದ ರಾಷ್ಟ್ರಪತಿ ಕೋವಿಂದ್ರಾಷ್ಟ್ರ ರಾಜಧಾನಿಯಲ್ಲಿ ರೈತರ ಪ್ರೊಟೆಸ್ಟ್: ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಟ್ರ್ಯಾಕ್ಟರ್ ಪೆರೇಡ್2021ನೇ ಸಾಲಿನ “ಪದ್ಮ‌ ಪ್ರಶಸ್ತಿ” ಪ್ರಕಟ: ಕರ್ನಾಟಕದ ಐವರು ಸೇರಿದಂತೆ 119 ಮಂದಿಗೆ ಗೌರವ`ಡೆನ್ವರ್‌’ಗೆ ಈಗ ಸುದೀಪ್ ರಾಯಭಾರಿಬೆಂಗಳೂರಿನಲ್ಲಿ ಟ್ರ್ಯಾಕ್ಟರ್ ಪರೇಡ್ ಗೆ ಅನುಮತಿ ಇಲ್ಲ: ಕಮಲ್ ಪಂತ್ಮತ್ತೆ ಕೆ ಸುಧಾಕರ್ ಗೆ ಆರೋಗ್ಯ ಇಲಾಖೆ ಹೊಣೆ

ತೆರೆಗೆ ಬರಲಿದೆ ‘ಲಡ್ಡು’

Share on facebook
Share on google
Share on twitter
Share on linkedin
Share on print

ಲಡ್ಡು ಎಂದೊಡನೆ ಸಿಹಿ ನೆನಪಾಗುತ್ತದೆ. ಸಿಹಿ ಮುತ್ತನಿಡಬೇಕೆನಿಸುವ ಕೆನ್ನೆಗೂ ಲಡ್ಡು ಎನ್ನುತ್ತಾರೆ. ಈ ಚಿತ್ರದಲ್ಲಿ ಲಡ್ಡು ಯಾವ ಅವತಾರದಲ್ಲಿದೆ ಎಂದು ನಿರ್ದೇಶಕರು ಬಿಟ್ಟುಕೊಟ್ಟಿಲ್ಲ. ಅಂಥದೊಂದು ನಿರೀಕ್ಷೆಯಲ್ಲಿ ಇರುವಾಗಲೇ ತೆರೆಗೆ ಬರಲು ಸಿದ್ಧವಾಗಿದೆ ‘ಲಡ್ಡು’ ಸಿನಿಮಾ.

ಚಂದನವನದಲ್ಲಿ ವರ್ಷಗಳಿಂದ ಕೆ. ರಾಮ್‍ನಾರಾಯಣ್, ಮದನ್, ಕಿಶನ್ ಮೊದಲಾದ ನಿರ್ದೇಶಕರೊಡನೆ
ಕೆಲಸ ಮಾಡಿರುವ ರಮಾನಂದ್ ಆರ್ ಲಡ್ಡು ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಚಿತ್ರದಲ್ಲಿ ರೊಮ್ಯಾಂಟಿಕ್ ಕಾಮಿಡಿ ಹಾಗೂ ಸಸ್ಪೆನ್ಸ್ ಕಥಾಹಂದರ ಇದೆ ಎನ್ನಲಾಗಿದೆ. ಬಹುತೇಕ ಹೊಸಬರೇ ತುಂಬಿರುವ ಈ ಚಿತ್ರದಲ್ಲಿ ಐದು ಮಂದಿ ಯುವಕರು ಮತ್ತು ಒಬ್ಬ ಯುವತಿಯ ಸುತ್ತ ನಡೆಯುವ ಘಟನೆಗಳೇ ಕತೆಯಂತೆ.
ಚಿತ್ರದ ಟ್ರೇಲರ್ ಕಳೆದ ವಾರವಷ್ಟೇ ಬಿಡುಗಡೆಯಾಗಿದ್ದು, ಈಗಾಗಲೇ
ಎರಡು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಎನಿಸಿದೆ.

ಮೊದಲ ಬಾರಿಗೆ ಚಿತ್ರ ನಿರ್ಮಾಣರಂಗಕ್ಕೆ ಕಾಲಿಟ್ಟಿರುವ ಮೇಘನಾ ವಿ.ಯವರು ವಿದ್ಯಾಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಹರ್ಷಿತ್, ನವೀನ್, ಸಮೀರ್ ನಗರದ್, ಮಧು ಮತ್ತು ವಿಶಾಲ್ ಈ ಚಿತ್ರದ ಐವರು
ನಾಯಕರಾಗಿದ್ದು, ಬಿಂದುಶ್ರೀ ನಾಯಕಿಯಾಗಿ ನಟಿಸಿದ್ದಾರೆ.

ಪಾರು ಖ್ಯಾತಿಯ ಪವಿತ್ರಾ ಬಿ. ನಾಯಕ್, ಮಂಜುಳಾ ರೆಡ್ಡಿ, ರಾಕ್‍ಲೈನ್
ಸುಧಾಕರ್ ಬಣ್ಣ ಹಚ್ಚಿದ್ದಾರೆ. ಬೆಂಗಳೂರು, ಶನಿವಾರಸಂತೆ, ಭಟ್ಕಳ
ಸುತ್ತಮುತ್ತ ಸುಮಾರು 52 ದಿನಗಳ ಕಾಲ ಈ ಚಿತ್ರದ ಹಾಡು
ಹಾಗೂ ಮಾತಿನ ಭಾಗದ ಶೂಟಿಂಗ್ ನಡೆಸಲಾಗಿದೆ. ಚಿತ್ರದ 3
ಹಾಡುಗಳಿಗೆ ನಂದು ತಿಪ್ಪು ಸಂಗೀತ ಸಂಯೋಜನೆ ಮಾಡಿದ್ದು,
ಪುರುಷೋತ್ತಮ್ ಕ್ಯಾಮೆರಾವರ್ಕ್ ನಿಭಾಯಿಸಿದ್ದಾರೆ. ನಿಖಿಲ್ ಸಂಭಾಷಣೆ ರಚಿಸಿದ್ದಾರೆ. ಚಿತ್ರಕಥೆಯಲ್ಲಿ ನಿರ್ದೇಶಕರ ಜೊತೆ ರುದ್ರೇಶ್ ಸಹಕಾರ ನೀಡಿದ್ದು, ವೆಂಕಿ ಸಂಕಲನ ಮಾಡಿದ್ದಾರೆ.

Submit Your Article