Racist Attack In Texas: ಭಾರತೀಯರ ಮೇಲೆ ಜನಾಂಗೀಯ ನಿಂದನೆಯ ಪ್ರಕರಣಗಳು ಆಗಾಗ ನಡೆಯುತ್ತಲೇ ಇರುತ್ತವೆ.

ಕ್ರೀಡಾ(sports) ಕ್ಷೇತ್ರದ ಕೆಲವು ದಿಗ್ಗಜರೂ ಸಹ ಇಂತಹ ಜನಾಂಗೀಯ ನಿಂದನೆಗೆ ಒಳಗಾಗಿದ್ದ ಉದಾಹರಣೆಗಳಿವೆ.
- ಹೈಲೈಟ್ಸ್:
- ಅಮೆರಿಕದ ಟೆಕ್ಸಾಸ್‌ನಲ್ಲಿ ಭಾರತೀಯರಿಗೆ ಜನಾಂಗೀಯ ನಿಂದನೆ
- ನಾಲ್ವರು ಮಹಿಳೆಯರನ್ನು ನಿಂದಿಸಿ, ಹಲ್ಲೆ ನಡೆಸಿದ ಮಹಿಳೆ
- ಮೆಕ್ಸಿಕನ್- ಅಮೆರಿಕನ್ ಮಹಿಳೆಯಿಂದ ಅವಾಚ್ಯ ಪದ ಬಳಕೆ
- ಆರೋಪಿ ಮಹಿಳೆಯನ್ನು ಬಂಧಿಸಿದ ಪ್ಲ್ಯಾನೋ ಪೊಲೀಸರು
ಈಗ ವಿಶ್ವದ ದೊಡ್ಡಣ್ಣ ಅಮೇರಿಕಾದಲ್ಲಿ(America) ಕೂಡ ಇಂತದ್ದೇ ಘಟನೆಯೊಂದು ನಡೆದಿದೆ.
https://twitter.com/JohnnyAkzam/status/1562894329080954880
“ನಾನು ಭಾರತೀಯರನ್ನು ದ್ವೇಷಿಸುತ್ತೇನೆ. ಈ ಎಲ್ಲ ಭಾರತೀಯರು ಉತ್ತಮ ಜೀವನ ಬೇಕೆಂದು ಅಮೆರಿಕಕ್ಕೆ ಬರುತ್ತಾರೆ” ಎಂದಿರುವ ಆಕೆ, ಪದೇ ಪದೇ ಕೆಟ್ಟ ಪದಗಳನ್ನು ಬಳಸುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಹೌದು, ಅಮೆರಿಕದ(America) ಟೆಕ್ಸಾಸ್(Texas) ಪ್ರದೇಶದ ಡಲ್ಲಾಸ್‌ನಲ್ಲಿ ಭಾರತೀಯ ಮೂಲದ ನಾಲ್ವರು ಮಹಿಳೆಯರ ಮೇಲೆ ಹಲ್ಲೆ ನಡೆಸಿ, ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಪಾರ್ಕಿಂಗ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಅಮೆರಿಕದ ಮಹಿಳೆ, ಭಾರತೀಯರನ್ನು ಹೀಯಾಳಿಸಿದ್ದಾರೆ. ನಂತರ ಹಲ್ಲೆ ಕೂಡ ನಡೆಸಿ, ವಾಪಸ್ ಭಾರತಕ್ಕೆ ಹೋಗುವಂತೆ ಒತ್ತಾಯಿಸಿದ್ದಾರೆ.
ಭಾರತೀಯ ಮೂಲದವರಿಗೆ ನಿಂದಿಸಿ ಹಲ್ಲೆ ನಡೆಸಿದ ವಿಡಿಯೊ(Video) ವೈರಲ್(Viral) ಆದ ಬೆನ್ನಲ್ಲೇ, ಪೊಲೀಸರು ಕ್ರಮ ಕೈಗೊಂಡಿದ್ದು, ಮಹಿಳೆಯನ್ನು ಬಂಧಿಸಿದ್ದಾರೆ. ಅಷ್ಟಕ್ಕೂ ಈ ಘಟನೆಯ ಹಿನ್ನೆಲೆ ಏನು ಎಂದು ನೋಡುವುದಾದರೆ,
ಇದನ್ನೂ ಓದಿ : https://vijayatimes.com/anupam-kher-speaks-about-bollywood/
ಪ್ಲಾನೋ ಡೌನ್‌ಟೌನ್‌ನಲ್ಲಿರುವ ಸಿಕ್ಸ್ಟಿ ವೈನ್ಸ್ (60 wines) ರೆಸ್ಟೋರೆಂಟ್‌ನ ಹೊರಗೆ ನಾಲ್ಕು ಮಹಿಳೆಯರು ಇಂಡಿಯನ್ ಇಂಗ್ಲೀಷ್‌ನಲ್ಲಿ ಮಾತನಾಡುತ್ತಿದ್ದರು.
ಅದೇ ಸಮಯದಲ್ಲಿ, ಮೆಕ್ಸಿಕನ್-ಅಮೆರಿಕನ್ ಮೂಲದ ಮಹಿಳೆಯೊಬ್ಬರು ಇವರ ಮೇಲೆ ಜನಾಂಗೀಯ ಟೀಕೆಗಳನ್ನು ಮತ್ತು ನಿಂದನೆಗಳನ್ನು ಮಾಡಿದ್ದಾರೆ.
ಅಲ್ಲದೆ, ಭಾರತೀಯ ಮೂಲದ ಮಹಿಳೆಗೆ ಕಪಾಳಮೋಕ್ಷವನ್ನೂ ಮಾಡಿದ್ದಾರೆ. “ಭಾರತೀಯರನ್ನು ನಾನು ದ್ವೇಷಿಸುತ್ತೇನೆ“.
ನೀವೆಲ್ಲಾ ಉತ್ತಮ ಜೀವನ ನಡೆಸುವ ಸಲುವಾಗಿ ಅಮೆರಿಕಾಗೆ ಬಂದಿದ್ದೀರಿ” ಎಂದು ಮಾತು ಆರಂಭಿಸಿದ ಮಹಿಳೆ ಬಳಿಕ ನಿಂದಿಸಿ, ವಾಪಸ್ ಹೋಗಿ ಎಂದು ಒತ್ತಾಯಿಸಿದ್ದಾರೆ. ಜತೆಗೆ ಮಹಿಳೆಯ ಬಳಿ ಗನ್ ಕೂಡ ಇತ್ತು. https://twitter.com/PlanoPoliceDept/status/1562923795761045504?cxt=HHwWgIC9lau6z7ArAAAA
ಅವರು ಭಾರತೀಯರಿಗೆ ಗುಂಡು ಹಾರಿಸುವ ಉದ್ದೇಶ ಹೊಂದಿರಬಹುದು ಎಂದು ರೀಮಾ ರಸೂಲ್ ಎನ್ನುವವರು ಟ್ವೀಟ್(Tweet) ಮಾಡಿದ್ದಾರೆ. ಈ ವಿಡಿಯೋವನ್ನು ಟ್ವಿಟರ್‌ನಲ್ಲಿ(twiter) ಪೋಸ್ಟ್ ಮಾಡಿರುವ ರೀಮಾ ರಸೂಲ್, “ಈ ಘಟನೆ ನಡೆದಿರುವುದು ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ.
ನನ್ನ ತಾಯಿ ಹಾಗೂ ಆಕೆಯ ಮೂವರು ಸ್ನೇಹಿತೆಯರು ರೆಸ್ಟೋರೆಂಟ್‌ನಲ್ಲಿ ಭೋಜನಕ್ಕೆ ತೆರಳಿದ್ದರು” ಎಂದು ಬರೆದುಕೊಂಡಿದ್ದರು.
https://fb.watch/f75WCAZbHa/ ಸರ್ಕಾರಿ ವಾಹನ ದುರ್ಬಳಕೆ!
“ಮೆಕ್ಸಿಕನ್-ಅಮೆರಿಕನ್ ಮಹಿಳೆ ಮಾಡಿದ ವಾದಗಳನ್ನು ತಾಯಿ ವಿರೋಧಿಸುತ್ತಿದ್ದಾರೆ. ಜನಾಂಗೀಯ ನಿಂದನೆಗಳನ್ನು ಮಾಡದಂತೆ ದಾಳಿಕೋರರನ್ನು ವಿನಂತಿಸುತ್ತಿದ್ದಾರೆ. ಇದು ತುಂಬಾ ಭಯಾನಕವಾಗಿದೆ, ಅವರ ಬಳಿ ಗನ್ ಇತ್ತು, ಅದರಿಂದ ಶೂಟ್ ಮಾಡೋಕೆ ಪ್ರಯತ್ನಿಸುತ್ತಿದ್ದರು.

ಈ ಭಾರತೀಯ-ಅಮೆರಿಕನ್ ಮಹಿಳೆಯರು ಇಂಗ್ಲಿಷ್ ಮಾತನಾಡುವಾಗ ಉಚ್ಚಾರಣೆ ಅಸಹ್ಯಕರ ಎಂದು ನಿಂದಿಸಿದ್ದು, ಈ ಮಹಿಳೆಯ ದ್ವೇಷದ ಅಪರಾಧಕ್ಕಾಗಿ ಕಾನೂನು ಕ್ರಮ ಜರುಗಿಸಬೇಕಾಗಿದೆ” ಎಂದು ರೀಮಾ ರಸೂಲ್ ಟ್ವಿಟರ್‌ನಲ್ಲಿ ಹೇಳಿದ್ದಾರೆ.
ಈ ಘಟನೆ ಆಗಸ್ಟ್ 24 ರಂದು ನಡೆದಿದ್ದು, ಮಹಿಳೆಯನ್ನು ತಕ್ಷಣವೇ ಬಂದನ ಮಾಡಲಾಗಿದೆ. ಬಂಧಿತ ಮಹಿಳೆಯನ್ನು ಎಸ್ಮೆರಾಲ್ಡಾ ಅಪ್ಟನ್ ಎಂದು ಗುರುತಿಸಲಾಗಿದೆ.