ಇಡೀ ಪಠ್ಯ ಪುಸ್ತಕಗಳನ್ನು ಮರುಮುದ್ರಣ ಮಾಡಿದರೆ ಸರ್ಕಾರದ ಬೊಕ್ಕಸಕ್ಕೆ 158.21 ಕೋಟಿ ರೂ. ಅನಗತ್ಯ ಖರ್ಚು . ಇದರ ಹೊರೆ ಸರ್ಕಾರ ಮತ್ತು ರೋಹಿತ್ ಚಕ್ರತೀರ್ಥ ಸಮಿತಿಯೇ ಹೊರಬೇಕಿದೆ.
ಆರರಿಂದ ಹತ್ತನೇ ತರಗತಿ ಪಠ್ಯಪುಸ್ತಕಗಳಲ್ಲಿನ ಪರಿಷ್ಕರಣೆ ವಿವಾದಕ್ಕೀಡಾಗಿರುವ ಹಿನ್ನೆಲೆಯಲ್ಲಿ. ಸಮಾಜ ವಿಜ್ಞಾನ, ಭಾಷಾ ಪಠ್ಯ ಪುಸ್ತಕಗಳು ಮತ್ತು ಇನ್ನಿತರ ಪಠ್ಯಪುಸ್ತಕಗಳನ್ನು ‘ಸರಿಪಡಿಸಿ ಮರು ಮುದ್ರಣ ಮಾಡಲು ನಾವು ತಯಾರಿದ್ದೇವೆ’ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರವರು ತಿಳಿಸಿದ್ದಾರೆ.

ಇಡೀ ಪಠ್ಯ ಪುಸ್ತಕಗಳನ್ನು ಮರುಮುದ್ರಣ ಮಾಡಿದರೆ ಸರ್ಕಾರದ ಬೊಕ್ಕಸಕ್ಕೆ 158.21 ಕೋಟಿ ರೂ. ಅನಗತ್ಯ ಖರ್ಚು . ಇದರ ಹೊರೆ ಸರ್ಕಾರ ಮತ್ತು ರೋಹಿತ್ ಚಕ್ರತೀರ್ಥ ಸಮಿತಿಯೇ ಹೊರಬೇಕಿದೆ. ಈಗಾಗಲೇ ಶಾಲಾ ವಿದ್ಯಾರ್ಥಿಗಳಿಗೆ ಉಚ್ಚಿತ ಸೈಕಲ್ ಮತ್ತು ಮೊಟ್ಟೆ ನೀಡಲು ಬೊಕ್ಕಸದಲ್ಲಿ ಅನುದಾನವಿಲ್ಲವೆಂದು ಕೈಚೆಲ್ಲಿರುವ ಸರ್ಕಾರಕ್ಕೆ ರೋಹಿತ್ ಚಕ್ರತೀರ್ಥ ರವರು ಮಾಡಿರುವ ಎಡವಟ್ಟಿನಿಂದ ಸರ್ಕಾರ ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ಬೀಳಲಿದೆ. ಈಗಾಗಲೇ ಮುದ್ರಣವಾಗಿರುವ ಪಠ್ಯ ಪುಸ್ತಕಗಳನ್ನು ಮರುಮುದ್ರಣ ಮಾಡುವುದು ಸರ್ಕಾರಕ್ಕೆ ಅನಗತ್ಯ ಖರ್ಚು.
ಸಮಿತಿ ಪರಿಷ್ಕರಿಸಿರುವ ಅಂಶಗಳಿಗೆ ಈಗಾಗಲೇ ಬಿ.ಸಿ ನಾಗೇಶ್ ರವರು ಒಪ್ಪಿಕೊಂಡಿದ್ದಾರೆ . ಮತ್ತು ಮರುಮುದ್ರಣಕ್ಕೆ ಒಪ್ಪಿ ಮುಂದಿನ ಕ್ರಮ ಕೈಗೊಳ್ಳಲಿ ಎಂದು ತಿಳಿಸಿದ್ದಾರೆ . ಅಷ್ಟೇ ಅಲ್ಲದೆ ಈ ಮರು ಮುದ್ರಣ ಅನಗತ್ಯ ವೆಚ್ಚಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಹೇಳಿದ್ದಾರೆ. ಈಗಾಗಲೇ ಮರು ಪರಿಷ್ಕರಿಸಿರುವ ಪಠ್ಯಪುಸ್ತಕಗಳು ಶೇಕಡಾ 50 ರಷ್ಟು ರಾಜ್ಯದ ಶಾಲೆಗಳಿಗೆ ಮಾತ್ರ ತಲುಪಿದೆ ಎಂದು ತಿಳಿದುಬಂದಿದೆ.
ಕುವೆಂಪು, ಬಸವಣ್ಣ, ಅಂಬೇಡ್ಕರ್ ರಂತಹ ಪ್ರಮುಖ ವ್ಯಕ್ತಿಗಳ ಮಾಯಿತಿಯನ್ನು ಪಠ್ಯಗಳಲ್ಲಿ ಕೈಬಿಟ್ಟು ತಪ್ಪು ಮಾಹಿತಿಗಳನ್ನು ಸೇರಿಸಿರುವ ಅಂಶಗಳನ್ನು ತೆಗೆದು ಪರಿಷ್ಕರಿಸಿರುವ ಪಠ್ಯಪುಸ್ತಕಗಳಲ್ಲಿದ್ದ ಕೆಲವು ಪುಟಗಳನ್ನು ಮಾತ್ರ ಮರು ಮುದ್ರಣ ಮಾಡುವ ಕ್ರಮ ಕೈಗೊಂಡಿದ್ದಾರೆ