ವಿಕ್ರಮ್ ರವಿಚಂದ್ರನ್ ನಾಯಕರಾಗಿ ನಟಿಸುತ್ತಿರುವ ‘ತ್ರಿವಿಕ್ರಮ’ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಎರಡು ಹಾಡುಗಳ ಚಿತ್ರೀಕರಣ ಬಾಕಿಯಿದೆ. ದೀಪಾವಳಿ ಹಬ್ಬಕ್ಕೆ ತ್ರಿವಿಕ್ರಮ ಚಿತ್ರದ ಮಮ್ಮಿ ಪ್ಲೀಸ್ ಮಮ್ಮಿ ಹಾಡು ಎ2 ಮ್ಯೂಸಿಕ್ ಮೂಲಕ ಬಿಡುಗಡೆಯಾಗಿತ್ತು.
ಈ ಹಾಡು ಬಿಡುಗಡೆಯಾದ ಮೂರು ದಿನಗಳಲ್ಲಿ 7 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ವೀಕ್ಚಣೆಯಾಗಿದ್ದು, ರ್ಜರಿ ಯಶಸ್ಸನ್ನು ತಂದುಕೊಟ್ಟಿದೆ. ಅಮ್ಮ – ಮಗನ ಸೆಂಟಿಮೆಂಟ್ ಹಾಡುಗಳು ರ್ವೇ ಸಾಮಾನ್ಯ. ಮಗ ತನ್ನ ಪ್ರೀತಿಯ ಬಗ್ಗೆ ತಾಯಿಯ ಬಳಿ ವಿನೂತನ ಶೈಲಿಯಲ್ಲಿ ಹೇಳಿಕೊಳ್ಳುತ್ತಾನೆ, ಇದು ಈ ಹಾಡಿನ ವೈಶಿಷ್ಟ್ಯವಾಗಿದೆ. ಆದ್ದರಿಂದ ಈ ಹಾಡು ಅಪಾರ ಜನಮನ್ನಣೆಗೆ ಪಾತ್ರವಾಗಿದೆ.
ಇನ್ನು ಡಾ||ವಿ.ನಾಗೇಂದ್ರ ಪ್ರಸಾದ್ ಬರೆದಿರುವ ಈ ಹಾಡನ್ನು ವಿಜಯ್ ಪ್ರಕಾಶ್ ಇಂಪಾಗಿ ಹಾಡಿದ್ದಾರೆ. ರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಗೌರಿ ಎಂಟಟೈನರ್ ಲಾಂಛನದಲ್ಲಿ ಸೋಮಣ್ಣ ರಾಮ್ಕೋ ಅವರು ನರ್ಮಿಸುತ್ತಿರುವ ಈ ಚಿತ್ರವನ್ನು ಸಹನಾ ಮರ್ತಿ ನರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ಸಹನಾ ಮರ್ತಿ ಅವರದಾಗಿದೆ.
ಸಂತೋಷ್ ರೈ ಪಾತಾಜೆ, ಗುರು ಪ್ರಶಾಂತ್ ರೈ ಛಾಯಾಗ್ರಹಣದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಕೆ.ಎಂ.ಪ್ರಕಾಶ್ ಸಂಕಲನವಿದೆ.
ವಿಕ್ರಮ್ ರವಿಚಂದ್ರನ್ ಅವರಿಗೆ ನಾಯಕಿಯಾಗಿ ಅಕಾಂಕ್ಷಾ ರ್ಮ ನಟಿಸುತ್ತಿದ್ದಾರೆ. ತುಳಸಿ ಶಿವಮಣಿ, ಸುಚೇಂದ್ರ ಪ್ರಸಾದ್, ಸಾಧುಕೋಕಿಲ, ಚಿಕ್ಕಣ್ಣ, ರೋಹಿತ್ ರಾಯ್, ಆದಿಲೋಕೇಶ್, ಶಿವಮಣಿ, ಅಕ್ಷರ ಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಹಾಡು ಹಾಗೂ ಟ್ರೇಲರ್ ಮೂಲಕ ಸಾಕಷ್ಟು ಸದ್ದು ಮಾಡಿರುವ ಈ ಚಿತ್ರದ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.