68 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು(National Film Awards) ಶುಕ್ರವಾರ ನವದೆಹಲಿಯಲ್ಲಿ(NewDelhi) ನಡೆದ ಕಾರ್ಯಕ್ರಮದಲ್ಲಿ ಘೋಷಿಸಲಾಯಿತು. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್(Anurag Takur) ಅವರು ಶುಕ್ರವಾರ ಬೆಳಿಗ್ಗೆ ಟ್ವೀಟ್ (Tweet) ಮಾಡಿ, ತೀರ್ಪುಗಾರರು ತಮ್ಮ ವರದಿಗಳನ್ನು ಸಚಿವಾಲಯಕ್ಕೆ ಹಸ್ತಾಂತರಿಸಿದ ನಂತರ ಶುಕ್ರವಾರ ಸಂಜೆ ಪ್ರಶಸ್ತಿಗಳನ್ನು ಘೋಷಿಸಲಾಗುವುದು ಎಂದು ಮಾಹಿತಿ ನೀಡಿದರು.

68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಈ ಬಾರಿ ಒಟ್ಟು 400 ಸಿನಿಮಾಗಳು ಸ್ಪರ್ಧೆ ಮಾಡಿದ್ದವು. 30 ವಿವಿಧ ಭಾಷೆಯ ಸಿನಿಮಾಗಳು ಸ್ಪರ್ಧೆಯಲ್ಲಿ ಭಾಗಿಯಾಗಿದ್ದವು. ಒಟ್ಟು 50 ವಿಭಾಗದಲ್ಲಿ ಸಿನಿಮಾಗಳು ಸ್ಪರ್ಧೆ ಮಾಡಿದ್ದವು. 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಕನ್ನಡದ ಚಲನಚಿತ್ರಗಳು ತಲೆದಂಡ(Thaledanda), ಡೊಳ್ಳು(Dollu). ಹಾಗೇ, ಈ ಬಾರಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಇಬ್ಬರು ಹಂಚಿಕೊಂಡಿದ್ದಾರೆ. ಅತ್ಯುತ್ತಮ ನಟ ಪ್ರಶಸ್ತಿಯನ್ನು ಅಜಯ್ ದೇವಗನ್(Ajay Devagn) ಮತ್ತು ಸೂರ್ಯ(Suriya) ಪಡೆದಿದ್ದಾರೆ.
ಅಪರ್ಣಾ ಬಾಲಮುರಳಿ ಅತ್ಯುತ್ತಮ ನಟಿಯಾಗಿ ಹೊರಹೊಮ್ಮಿದ್ದಾರೆ. ಅತ್ಯುತ್ತಮ ಕನ್ನಡ ಸಿನಿಮಾವಾಗಿ ಡೊಳ್ಳು ಮತ್ತು ಅತ್ಯುತ್ತಮ ಕಥಾಚಿತ್ರವಾಗಿ ಸೂರರೈ ಪೋಟ್ರು ಹೊರಹೊಮ್ಮಿದೆ. ತಮಿಳು ಸಿನಿಮಾ ಸೂರರೈ ಪೋಟ್ರು ಚಲನಚಿತ್ರದಲ್ಲಿನ ಅತ್ಯುತ್ತಮ ನಟನೆಗಾಗಿ ಸೂರ್ಯ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರಕಿದೆ. National Film Awards 2022 ರ ಪ್ರಮುಖ ವಿನ್ನರ್ ಇವರೇ. ಇನ್ನು, ಸೂರರೈ ಪೋಟ್ರುನ ಅನನ್ಯ ನಟನೆಗೆ ಅಪರ್ಣಾ ಬಾಲಮುರಳಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ .

ಈ ತಮಿಳು ಸಿನಿಮಾಕ್ಕೆ ಅತ್ಯುತ್ತಮ ಫೀಚರ್ ಫಿಲ್ಮ್ ಅವಾರ್ಡ್ ಕೂಡ ದೊರಕಿದೆ. ಹಾಗೇ, ಹಿಂದಿ ಸಿನಿಮಾ ತಾನಾಜಿಯಲ್ಲಿನ ನಟನೆಗಾಗಿ ಅಜಯ್ ದೇವಗನ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರಕಿದೆ. ಈ ಸಿನಿಮಾವನ್ನು ಅಜಯ್ ದೇವಗನ್ ಅವರೇ ನಿರ್ಮಾಣ ಮಾಡಿರುವುದು ವಿಶೇಷ. ಇನ್ನು, ತಮಿಳು ನಟಿ ಲಕ್ಷ್ಮೀ ಪ್ರಿಯಾ ಚಂದ್ರಮೌಳಿ ಅವರಿಗೆ ‘ಅತ್ಯುತ್ತಮ ಪೋಷಕ ನಟಿ’ ಪ್ರಶಸ್ತಿ ನೀಡಲಾಗಿದೆ. ಶಿವರಾಜನಿಯಂ ಇನ್ನುಂ ಸಿಲ್ಲಾ ಪೆಂಗುಲುಮ್ ಚಿತ್ರಕ್ಕೆ ಪ್ರಶಸ್ತಿ ದೊರಕಿದೆ. ನಟ ರಾಜೀವ್ ಕಪೂರ್ ಅವರ ಕೊನೆಯ ಸಿನಿಮಾ ತುಳಸಿದಾಸ್ ಜೂನಿಯರ್‌ಗೆ ಅತ್ಯುತ್ತಮ ಹಾಸ್ಯ ಚಿತ್ರ ಪ್ರಶಸ್ತಿ ದೊರಕಿದೆ.
ಈ ಸಿನಿಮಾದಲ್ಲಿ ಬಾಲನಟನಾಗಿ ನಟಿಸಿದ ವರುಣ್ ಬುದ್ಧದೇವ್‌ಗೆ ಜ್ಯೂರಿ ಮೆಚ್ಚಿದ ಅತ್ಯುತ್ತಮ ಬಾಲನಟ ಪ್ರಶಸ್ತಿ ದೊರಕಿದೆ.