• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಬಿಜೆಪಿ ದೇಶವೇ ನಿರುದ್ಯೋಗಿ, ಇದಕ್ಕೆ ಪ್ರತಿಪಕ್ಷ ಹೊರತಲ್ಲ; ಡಿಕೆಶಿ ಟಾಂಗ್

Sharadhi by Sharadhi
in ಪ್ರಮುಖ ಸುದ್ದಿ, ರಾಜಕೀಯ
ಬಿಜೆಪಿ ದೇಶವೇ ನಿರುದ್ಯೋಗಿ, ಇದಕ್ಕೆ ಪ್ರತಿಪಕ್ಷ ಹೊರತಲ್ಲ; ಡಿಕೆಶಿ ಟಾಂಗ್
0
SHARES
0
VIEWS
Share on FacebookShare on Twitter

ಬೆಂಗಳೂರು, ಜ. 23: ನಾವು ರಾಜ್ಯ ಹಾಗೂ ದೇಶದ ರೈತರ ಪರ ಧ್ವನಿ ಎತ್ತಿದ್ದೇವೆ. ಕೆಲವು ಸಚಿವರು ನಾವು ಅಸ್ತಿತ್ವ ಉಳಿಸಿಕೊಳ್ಳಲು ಮಾಡಿದ್ದೇವೆ, ನಾವು ನಿರುದ್ಯೋಗಿಗಳು ಎಂದಿದ್ದಾರೆ. ಆದರೆ ಬಿಜೆಪಿ ಆಡಳಿತದಲ್ಲಿ ಇಡೀ ದೇಶವೇ ನಿರುದ್ಯೋಗಿಯಾಗಿದ್ದು, ವಿರೋಧ ಪಕ್ಷವಾದ ನಾವೂ ನಿರುದ್ಯೋಗಿಗಳೇ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಮುಖ್ಯಮಂತ್ರಿಗಳಿಗೆ, ಅವರ ಪದವಿಗೆ, ಹಿರಿತನಕ್ಕೆ ಗೌರವ ನೀಡುತ್ತೇವೆ. ಇವತ್ತೂ ಗೌರವಿಸುತ್ತೇವೆ, ನಾಳೆಯೂ ಗೌರವಿಸುತ್ತೇವೆ. ಅವರ ಪ್ರಕಾರ ನಾವೆಲ್ಲ ಸತ್ತ ಕುದುರೆಗಳಂತೆ, ನಮ್ಮ ಪಕ್ಷವೇ ಇಲ್ಲ. ಇನ್ನು ಸಾಮ್ರಾಟ್ ಅಶೋಕರ ಪ್ರಕಾರ ನಾವು ನಿರುದ್ಯೋಗಿಗಳು. ಅದು ನಿಜ, ಬಿಜೆಪಿ ಆಡಳಿತದಲ್ಲಿ ದೇಶದ ಎಲ್ಲೆಡೆ ನಿರುದ್ಯೋಗ ಹೆಚ್ಚಾಗಿದ್ದು, ನಾವು ಕೂಡ ನಿರುದ್ಯೋಗಿಗಳಾಗಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ದೇಶಕ್ಕೆ ಕೊಟ್ಟ ಬಹುದೊಡ್ಡ ಬಳುವಳಿ ನಿರುದ್ಯೋಗ ಸಮಸ್ಯೆ. ಗೃಹ ಸಚಿವರು ಟ್ರಾಫಿಕ್ ಜಾಮ್ ಅಂತಾರೆ. ನಾವು ಪ್ರತಿಭಟನೆ ಮಾಡಿದ್ದು ಅಸ್ತಿತ್ವಕ್ಕೆ ಅಲ್ಲ, ರಾಜ್ಯ ಹಾಗೂ ದೇಶದ ರೈತರ ಧ್ವನಿ ಪ್ರತಿಬಿಂಬಿಸಲು.

ರಾಜಕಾರಣದಲ್ಲಿ ಏನು ಬೇಕಾದರೂ ಸಾಧ್ಯ. ಸಾಧ್ಯತೆಗಳ ಕಲೆ ರಾಜಕಾರಣ. ವಿಧಾನ ಪರಿಷತ್ ನಲ್ಲಿ ಸಭಾಪತಿಗಳು ಬರುವ ಮುನ್ನ ಬಾಗಿಲು ಹಾಕಿಕೊಂಡು ಕಲಾಪ ನಡೆಸುತ್ತಾರೆ ಎಂದು ನಾವು ನಿರೀಕ್ಷಿಸಿದ್ದೆವೆ? ಕಿಡಿಕಾರಿದರು.

ಶಾಸಕಿ ಸೌಮ್ಯ ರೆಡ್ಡಿ ಅವರು ತಮ್ಮ ವೈಯಕ್ತಿಕ ರಕ್ಷಣೆಗಾಗಿ ತಮ್ಮನ್ನು ಎಳೆದಾಡುತ್ತಿದ್ದ ಪೊಲೀಸರಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಪೊಲೀಸರು ಎಲ್ಲ ಮಹಿಳಾ ನಾಯಕಿಯರನ್ನು ಎಳೆದಾಡುತ್ತಿದ್ದನ್ನು ನಾವೇ ನೋಡಿದ್ದೇವೆ. ಇನ್ನು ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆಯಾಗಿದೆ. ಅವರ ಬಟ್ಟೆ ಬಿಚ್ಚಿಸಿ ದೌರ್ಜನ್ಯ ಎಸಗಿದ್ದಾರೆ. ನಾವು ಎಷ್ಟೇ ಸಹಕಾರ ಕೊಟ್ಟರೂ ವ್ಯವಸ್ಥಿತ ಸಂಚಿನಿಂದಾಗಿ ಪೊಲೀಸರು ನಮ್ಮ ನಾಯಕರು ಹಾಗೂ ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸಗಿದ್ದಾರೆ.

ಸೌಮ್ಯ ರೆಡ್ಡಿ ಮೇಲೆ ಎಫ್ ಐಆರ್ ದಾಖಲಿಸುವ ಪೊಲೀಸರು, ಬಿಜೆಪಿ ನಾಯಕರು ಪ್ರಚೋದನಕಾರಿ ಹೇಳಿಕೆ ಕೊಟ್ಟು ಗಲಭೆಗೆ ಕಾರಣವಾದಾಗ ಸುಮೋಟೋ ಪ್ರಕರಣ ಯಾಕೆ ದಾಖಲಿಸಲಿಲ್ಲ? ಅವರ ವಿಚಾರದಲ್ಲಿ ಪೊಲೀಸರು ಹೇಡಿಗಳಂತೆ ವರ್ತಿಸಿದ್ದಾರೆ.

ಆರ್.ಆರ್. ನಗರ ಚುನಾವಣೆ ಸಮಯದಲ್ಲಿ ನನ್ನ ಮೇಲೆ ಸಿದ್ದರಾಮಯ್ಯ ಅವರ ಮೇಲೆ ಯಾಕೆ ಪ್ರಕರಣ ಹಾಕಲಿಲ್ಲ. ಕೇವಲ ಆ ಹೆಣ್ಣು ಮಗಳ ಮೇಲೆ ಕೇಸ್ ಹಾಕಿದರು? ನೀವು ಬೇಕಾದರೆ ಸಂಪೂರ್ಣ ವಿಡಿಯೋ ನೋಡಿ. ಸೌಮ್ಯಾ ರೆಡ್ಡಿ ಅವರನ್ನು ಬಂಧಿಸಿದರೂ ನಾವು ಅವರ ಪರ ನಿಲ್ಲುತ್ತೇವೆ. ನಮ್ಮ ಬಳಿಯೂ ಸಾಕ್ಷ್ಯಗಳಿವೆ. ನಾವು ಅದನ್ನು ಮುಂದಿಡುತ್ತೇವೆ. ಆಕೆ ಕೆಳಗೆ ಬಿದ್ದಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ, ನನಗೆ ಬೇರೆ ಯಾರ ಸಾಕ್ಷಿಯೂ ಬೇಡ.

ಈ ಕೃತ್ಯದ ಹಿಂದೆ ಸರ್ಕಾರದ ಕೈವಾಡ ಇದೆ. ಸರ್ಕಾರ ಹೇಳದೆ ಯಾವ ಎಫ್ ಐಆರ್ ಹಾಕಲು ಸಾಧ್ಯವಿಲ್ಲ. ಪೊಲೀಸರ ದಬ್ಬಾಳಿಕೆ ವೇಳೆ ಸ್ವಯಂ ರಕ್ಷಣೆ ಮಾಡಿಕೊಳ್ಳುವುದು ಆಕೆಯ ಹಕ್ಕು. ಈ ಕೇಸ್ ಬರಲಿ ನಾವು ಎದುರಿಸಲು ಸಿದ್ಧ.

ನಾವು ರಾಜ್ಯದ ಎಲ್ಲ ವಿದ್ಯಮಾನ ಗಮನಿಸುತ್ತಿದ್ದೇವೆ. ನಮ್ಮ ಧರ್ಮೇಗೌಡರು ಆ ರೀತಿ ತೀರ್ಮಾನಕ್ಕೆ ಬರಬಾರದಿತ್ತು. ಇದರಿಂದ ಎಲ್ಲರಿಗೂ ನೋವಾಗಿದೆ. ನಾವು ಶಾಸಕಾಂಗ ಪಕ್ಷದ ಸಭೆಯಲ್ಲಿ ಆ ಸ್ಥಾನದ ಗೌರವ, ಪಕ್ಷದ ಹಿತದೃಷ್ಟಿ, ಸಮಿತಿ ನೀಡಿರುವ ವರದಿ ಗಮನದಲ್ಲಿಟ್ಟುಕೊಂಡು ಈ ಪಕ್ಷದ ತೀರ್ಮಾನ ಮಾಡುತ್ತೇವೆ ಎಂದರು.

Related News

ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್-ಜೆಡಿಎಸ್‌ಗೆ ಆತಂಕ ತಂದ ಬಿಜೆಪಿ ತಂತ್ರಗಾರಿಕೆ‌
ರಾಜಕೀಯ

ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್-ಜೆಡಿಎಸ್‌ಗೆ ಆತಂಕ ತಂದ ಬಿಜೆಪಿ ತಂತ್ರಗಾರಿಕೆ‌

March 30, 2023
300 ಯೂನಿಟ್ ಉಚಿತ ವಿದ್ಯುತ್, 2 ಲಕ್ಷ ಉದ್ಯೋಗ ಸೃಷ್ಟಿ ; ಪ್ರಣಾಳಿಕೆ ಬಿಡುಗಡೆ ಮಾಡಿದ ಆಪ್
ರಾಜಕೀಯ

300 ಯೂನಿಟ್ ಉಚಿತ ವಿದ್ಯುತ್, 2 ಲಕ್ಷ ಉದ್ಯೋಗ ಸೃಷ್ಟಿ ; ಪ್ರಣಾಳಿಕೆ ಬಿಡುಗಡೆ ಮಾಡಿದ ಆಪ್

March 30, 2023
ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಕಣಕ್ಕೆ;   ಸುಳಿವು ನೀಡಿದ ಯಡಿಯೂರಪ್ಪ..!
ರಾಜಕೀಯ

ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಕಣಕ್ಕೆ; ಸುಳಿವು ನೀಡಿದ ಯಡಿಯೂರಪ್ಪ..!

March 30, 2023
ಹೆಬ್ಬಾಳದಲ್ಲಿ ಗದ್ದುಗೆ ಗುದ್ದಾಟ! ದಿಗ್ಗಜರ ನಡುವಿನ ಗುದ್ದಾಟದಲ್ಲಿ ಯಾರಿಗೆ ಸಿಗುತ್ತೆ ಗದ್ದುಗೆ?
ರಾಜಕೀಯ

ಹೆಬ್ಬಾಳದಲ್ಲಿ ಗದ್ದುಗೆ ಗುದ್ದಾಟ! ದಿಗ್ಗಜರ ನಡುವಿನ ಗುದ್ದಾಟದಲ್ಲಿ ಯಾರಿಗೆ ಸಿಗುತ್ತೆ ಗದ್ದುಗೆ?

March 30, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.