ನವದೆಹಲಿ ಆ 27 : ರಾಜ್ಯದ ರೈತರ ಪರ ಕೇಂದ್ರ ಸರ್ಕಾರ ನಿಂತಿದ್ದು ರಾಜ್ಯದ ರೈತರಿಂದ ಹಸಿರು ಮತ್ತು ಕರಿ ಮೆಣಸುಗಳನ್ನು ಖರೀದಿಸಲು ಕೇಂದ್ರ ಕೃಷಿ ಸಚಿವಾಲಯವು ಅನುಮೋದನೆ ನೀಡಿದೆ.
ಕೇಂದ್ರದ ಅನುಮೋದನೆಯ ಬಳಿಕ ರಾಜ್ಯ ಸರ್ಕಾರವು ಮುಂದಿನ 90 ದಿನಗಳ ವರೆಗೆ ಖರೀದಿ ನಡೆಸಲು ಆದೇಶದಲ್ಲಿ ತಿಳಿಸಿದೆ. ಹಸಿರು ಮೆಣಸು ಪ್ರತಿ ಕ್ವಿಂಟಾಲ್‌ಗೆ 7275 ರೂ. ಕರಿಮೆಣಸು ಪ್ರತಿ ಕ್ವಿಂಟಾಲ್‌ಗೆ 6300 ರೂ. ಗೆ ಖರೀದಿಸಲಾಗುವುದು ಎಂದು ಆದೇಶದಲ್ಲಿ ಸರ್ಕಾರ ತಿಳಿಸಿದೆ. ಈ ಸಂಬಂಧ ಸಚಿವಾಲಯವು ಹೊರಡಿಸಿದ ಆದೇಶದಲ್ಲಿ ಕೇಂದ್ರ ಸರ್ಕಾರ ಗರಿಷ್ಟ 30 ಸಾವಿರ ಮೆಟ್ರಿಕ್ ಟನ್ ಹಸಿರು ಮೆಣಸು, 10 ಸಾವಿರ ಮೆಟ್ರಿಕ್ ಟನ್ ಕರಿಮೆಣಸು ಖರೀದಿಸಲು ಅನುಮೋದನೆ ನೀಡಿದೆ. ಈ ಹಿನ್ನೆಲೆಯಲ್ಲಿ. ಮುಂದಿನ 45 ದಿನಗಳ ವರೆಗೆ ಮಾರಾಟಕ್ಕಾಗಿ ನೋಂದಣಿ ಮಾಡಿಕೊಳ್ಳಬಹುದು. ಹಣವನ್ನು ರೈತರ ಖಾತೆಗಳಿಗೆ ನೇರ ಪಾವತಿ ಮಾಡಲಾಗುತ್ತದೆ ಎಂದು ಸರ್ಕಾರ ಹೇಳಿದೆ. ಇದರಿಂದಾಗಿ ಮಧ್ಯವರ್ತಿಗಳ ಹಾವಳಿ ತಪ್ಪಿದ್ದು ರೈತ ಮತ್ತು ಸರ್ಕಾರದ ನಡುವೆ ನೇರ ಒಪ್ಪಂದವಾದಂತಿದೆ