Visit Channel

ಬಾವಿ ಕಳ್ಳತನವಾಗಿದೆ ಎಂದು ಪೋಲಿಸ್‌ ಠಾಣೆ ಮೆಟ್ಟಿಲೇರಿದ ರೈತ

well-lost

ಬೆಳಗಾವಿ, ಜು. 05: ಸಾಮಾನ್ಯವಾಗಿ ಕಾರ್. ಬೈಕ್, ಮನೆಯಲ್ಲಿದ್ದ ವಸ್ತು ಹಾಗೂ ತುಂಬಾ ಬೇಕಾದ ವಸ್ತುಗಳು ಕಳೆದು ಹೋದ್ರೆ ಪೊಲೀಸ್ ಠಾಣೆ ಮೆಟ್ಟಿಲು ಏರಿ ಅದನ್ನ ಹುಡುಕಿಕೊಂಡುವಂತೆ ಮನವಿ ಮಾಡೋದನ್ನ ನಾವು ನೋಡಿದ್ದೇವೆ. ಆದ್ರೆ ಇಲ್ಲೋಬ್ಬ ರೈತ ತನ್ನ ಜಮೀನಿನಲ್ಲಿದ್ದ ಬಾವಿಯೆ ಕಳ್ಳತನವಾಗಿದೆ ಅದನ್ನ ಹುಡುಕಿ ಕೋಡಿ ಎಂದು ಈಗ ಪೋಲಿಸ್ ಠಾಣೆ ಮೇಟ್ಟಿಲೇರಿದ್ದು ಎಲ್ಲರ ಗಮನ ಸೇಳೆದಿದೆ. ಹೌದು ಇದು ವಿಚಿತ್ರ ಅನಿಸಿದ್ರು ಇದು ನಿಜ. ಬಾವಿ ಕಳ್ಳತನ ಆಗುತ್ತಾ ಅಂದರೆ ನಂಬಲೆ ಬೇಕಾದ ಪರಿಸ್ಥಿತಿ  ಇಲ್ಲಿ ನಿರ್ಮಾಣ ವಾಗಿದೆ. ಇಂತಹ ಘಟನೆ ನಡೆದಿದ್ದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮಾವಿನಹೊಂಡ ಗ್ರಾಮದಲ್ಲಿ. ಇಂತಹ ಒಂದು ಪ್ರಕರಣಕ್ಕೆ ಕಾರಣವಾಗಿದ್ದು ತಾಲೂಕು ಪಂಚಾಯತ ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳೆ. ಪಂಚಾಯತಿ ಅಧಿಕಾರಿಗಳ ಲಂಚಬಾಕತನಕ್ಕೆ ಸದ್ಯ ಈ ರೈತ ಸಿಡಿದೇದ್ದಿದ್ದಾನೆ.

ಹೀಗೆ ಕೈಯಲ್ಲಿ ಪೇಪರ್‌ ಹಿಡಿದು ನಿಂತಿರುವ ಈ ವ್ಯಕ್ತಿಯ ಹೆಸರು ರೈತ ಮಲ್ಲಪ್ಪ ಕುಲುಗಡೆ ಮಾವಿನಹೊಂಡ ಗ್ರಾಮದ ನಿವಾಸಿ ಸದ್ಯ ರಾಯಬಾಗ ಪೋಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ರೈತ ಮಲ್ಲಪ್ಪ ಅವರು ಜಮೀನು ಸರ್ವೆ ನಂಬರ 21/1. ಇದ್ದು ಇವರ ಎಕರೆ ಜಮೀನನ್ನ ಭೇಂಡವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾವಿನಹೊಂಡ ಗ್ರಾಮದಲ್ಲಿ ಹೋಂದಿದ್ದಾರೆ. ಮಲ್ಲಪ್ಪ ಅವರ ಜಮೀನಿನಲ್ಲಿ ಮಾಲಿಕನಿಗೆ ಗೊತ್ತಿಲ್ಲದೆ ಭೇಂಡವಾಡ ಗ್ರಾಮದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಮೇಲಾಧಿಕಾರಿಗಳು ಸೇರಿಕೊಂಡು ಗದ್ದೆಯಲ್ಲಿ ಭಾವಿ ತೋಡಿರುವುದಾಗಿ 77 ಸಾವಿರ ರೂಪಾಯಿ ಹಣ ಲಪಟಾಯಿಸಿದ್ದಾರೆ. ಕಳೆದ ಎಪ್ರೀಲ್ 2020 ರಿಂದ ಮೇ 2021 ರ ಅವಧಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಬಾವಿ ತೋಡಲಾಗಿದೆ ಎಂಬ ದಾಖಲೆಗಳನ್ನು ಸೃಷ್ಟಿಸಿ ಬಾವಿಯನ್ನು ತೋಡದೆ 77 ಸಾವಿರ ಹಣವನ್ನ ತೆಗೆದಿದ್ದಾರೆ.

ಇನ್ನು ಮಲ್ಲಪ್ಪ ಅವರ ಇಬ್ಬರು ಪುತ್ರರ ಹೆಸರಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಜಾಬ ಕಾರ್ಡ್ ಮಾಡಿಸಿ ಅವರ ಖಾತೆಗೆ ಹಣ ಜಮಾ ಮಾಡಿಸಿದ್ದಾರೆ ಬಳಿಕ  ಹಣ ಡ್ರಾ ಮಡಲು ರೈತ ಮಲ್ಲಪ್ಪ ಅವರ ಸಂಭಂದಿಕರನ್ನ ಬಳಸಿಕೊಂಡಿರುವ ಅಧಿಕಾರಿಗಳು ನಿಮ್ಮ ಸಹೋದರನ ಹೊಲದಲ್ಲಿ ಬಾವಿ ತೆಗೆಯಲಾಗಿದೆ. ಅದಕ್ಕೆ ನಿಮ್ಮ ಖಾತೆಗೆ ಹಣ ಜಮಾ ಮಾಡಿದ್ದೇವೆ ಅದನ್ನ ಮರಳಿ ನೀಡಬೇಕು ಎಂದು ಮನೆಗೆ ಬಂದು ಎಟಿಂಮ ಮೂಲಕ ಹಣ ಡ್ರಾ ಮಾಡಿಸಿಕೊಂಡಿದ್ದಾರೆ. ರೈತ ಮಲ್ಲಪ್ಪ ಈ ಕುರಿತು ವಿಚಾರಣೆ ನಡೆಸಿದಾಗ ಇಡಿ ಪ್ರಕರಣ ಬೆಳಕಿಗೆ ಬಂದಿದೆ. ತನ್ನ ಜಮೀನಿನಲ್ಲೆ ಬಾವಿ ತೋಡಿರುವುದಾಗಿ ದಾಖಲೆ ಸೃಷ್ಟಿಸಿ ಬಾವಿ ತೋಡದೆ ಹಣ ಲಪಟಾಯಿಸಿದ ಮಾಹಿತಿ ಸಿಗುತ್ತಿದ್ದಂತೆ  ಅಧಿಕಾರಿಗಳ ವಿರುದ್ದ ರೈತ ಸಿಡಿದೆದ್ದಿದ್ದಾನೆ. ಸದ್ಯ ರೈತ ತಾಲೂಕು ಪಂಚಾಯತಿ ಅಧಿಕಾರಿಗೆ ಹಾಗೂ ರಾಯಬಾಗ ಪೊಲೀಸ್ ಠಾಣೆಗೆ ದೂರು ನಿಡಿದ್ದು ತನ್ನ ಜಮೀನಿನಲ್ಲಿರುವ ಬಾವಿ ಹುಡುಕಿ ಕೋಡಬೇಕು ಇಲ್ಲವಾದಲ್ಲಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೋಳ್ಳ ಬೇಕು ಎಂದು ಒತ್ತಾಯಿಸಿದ್ದಾನೆ.

Latest News

bsy
ರಾಜಕೀಯ

ಬಿಜೆಪಿಯ ಸಂಸದೀಯ ಮಂಡಳಿಗೆ ಯಡಿಯೂರಪ್ಪ ; ರಾಜಕೀಯವಾಗಿ ಮತ್ತಷ್ಟು ಬಲಗೊಂಡ ಬಿಎಸ್‌ವೈ

ಇನ್ನು ಸಂಸದೀಯ ಮಂಡಳಿಯಲ್ಲಿ ಉತ್ತರಪ್ರದೇಶ(UttarPradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌(Yogi Adityanath) ಅವರಿಗೆ ಸ್ಥಾನ ನೀಡಲಾಗುತ್ತದೆ ಎನ್ನಲಾಗಿತ್ತು. ಆದರೆ ಅವರಿಗೆ ಸ್ಥಾನ ಲಭಿಸಿಲ್ಲ.

bjp
ರಾಜಕೀಯ

ಡಿಕೆಶಿ ಸ್ವಾತಂತ್ರ್ಯದ ನಡಿಗೆಯ ಉದ್ದೇಶ, ಸಿದ್ದರಾಮಯ್ಯ ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ? : ಬಿಜೆಪಿ

ಸಿದ್ದರಾಮಯ್ಯ(Siddaramaiah) ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ ಅಥವಾ ಕಾಂಗ್ರೆಸ್(Congress) ಹಿರಿಯ ನಾಯಕರು ಡಿಕೆಶಿ(DKS) ಸುತ್ತ ಹೆಣೆದಿರುವ ಜಾಲದಿಂದ ಸ್ವಾತಂತ್ರ್ಯ ಪಡೆಯುವುದೋ?

Ghee
ಆರೋಗ್ಯ

ತುಪ್ಪದ ಬಗ್ಗೆ ತಪ್ಪು ಕಲ್ಪನೆ ಬೇಡ! ; ತಪ್ಪದೇ ತುಪ್ಪ ಸೇವಿಸಿ, ಈ ಆರು ಪ್ರಯೋಜನಗಳನ್ನು ಪಡೆದುಕೊಳ್ಳಿ

ತುಪ್ಪವು ರೋಗನಿರೋಧಕ ಶಕ್ತಿಯನ್ನು ವೃದ್ದಿಸುತ್ತದೆ, ಮೂಳೆಯ ಆರೋಗ್ಯವನ್ನು ಉತ್ತೇಜಿಸುತ್ತದೆ, ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.

Assam
ದೇಶ-ವಿದೇಶ

500 ರೂ. ಬೆಟ್ಟಿಂಗ್ ಸೋಲಿಗೆ ಸ್ನೇಹಿತನ ಶಿರಚ್ಛೇದ ; 25 ಕಿ.ಮೀ ದೂರದ ಪೊಲೀಸ್ ಠಾಣೆಗೆ ಹೋಗಿ ಶರಣು!

ಆತನ ತಲೆಯನ್ನು ಹಿಡಿದುಕೊಂಡು ರಾತ್ರಿಯ ವೇಳೆ 25 ಕಿ.ಮೀ ದೂರವಿರುವ ಪೊಲೀಸ್ ಠಾಣೆಗೆ(Police Station) ನಡೆದು ಶರಣಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.