ಮೊದಲ ಬಾರಿಗೆ ತಾಯಿಯಾಗುವ ಭಾವನೆ ಬಹಳ ವಿಶೇಷ. ತಾಯಿಗೆ ಎಲ್ಲವೂ ಹೊಸತು, ಸ್ವಲ್ಪ ಭಯ ಹಾಗೂ ಹೆಚ್ಚು ಸಂತೋಷ ಆಕೆಯ ಮನಸ್ಸಲ್ಲಿ. ಗರ್ಭಧಾರಣೆಯ ಒಂಬತ್ತು ತಿಂಗಳುಗಳು ಬಹಳ ಮುಖ್ಯವಾಗಿದ್ದರೂ, ವೈದ್ಯರ ಪ್ರಕಾರ, ಗರ್ಭಧಾರಣೆಯ ಮೊದಲ ಮೂರು ತಿಂಗಳು ಪ್ರತಿ ಮಹಿಳೆಗೆ ವಿಶೇಷವಾಗಿದೆ. ಈ ಸಮಯದಲ್ಲಿ ಸ್ವಲ್ಪ ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳಬೇಕು. ಆದ್ದರಿಂದ ಇಲ್ಲಿ ಮೊದಲ ಬಾರಿಗೆ ತಾಯಿಯಾಗುವ ಮಹಿಳೆ ಮೂರು ತಿಂಗಳವರೆಗೆ ಆಹಾರದಿಂದ ದಿನನಿತ್ಯದ ತಪಾಸಣೆಯವರೆಗೆ ಹೇಗಿರಬೇಕು ಎಂಬುದನ್ನು ವಿವರಿಸಿದ್ದೇವೆ.
ಗರ್ಭಧಾರಣೆಯ ಮೊದಲ ತ್ರೈಮಾಸಿಕ:
ಗರ್ಭಧಾರಣೆಯ ಮೊದಲ 3 ತಿಂಗಳಳಿನ ಸಮಯದಲ್ಲಿ ಭ್ರೂಣದ ಬೆಳವಣಿಗೆ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಮಹಿಳೆಯ ದೇಹವು ಹಲವಾರು ದೈಹಿಕ ಮತ್ತು ಹಾರ್ಮೋನುಗಳ ಬದಲಾವಣೆಗಳನ್ನು ಎದುರಿಸುತ್ತದೆ. ಇದು ಅತ್ಯಂತ ಸವಾಲಿನ ದಿನಗಲಾಗಿದ್ದು, ಈ ತಿಂಗಳುಗಳಲ್ಲಿ ಗರ್ಭಪಾತದ ಸಾಧ್ಯತೆಯು ಹೆಚ್ಚು ಇರುತ್ತದೆ. ವೈದ್ಯರನ್ನು ಸಂಪರ್ಕಿಸದೇ ಈ ಸಮಯದಲ್ಲಿ ಯಾವುದೇ ಔಷಧಿ ತೆಗೆದುಕೊಳ್ಳಬೇಡಿ. ವೈದ್ಯರನ್ನು ಸಂಪರ್ಕಿಸದೆ ತೆಗೆದುಕೊಳ್ಳುವ ಔಷಧಿಗಳು ನಿಮ್ಮ ಮತ್ತು ಮಗುವಿನ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಜನ್ಮಜಾತ ಅಸ್ವಸ್ಥತೆಗಳು ಮಗುವಿನಲ್ಲಿ ಉದ್ಭವಿಸಬಹುದು. ಈ ಸಮಯದಲ್ಲಿ ಮಹಿಳೆಯರಿಗೆ ಫೋಲಿಕ್ ಆಮ್ಲವನ್ನು ತೆಗೆದುಕೊಳ್ಳುವಂತೆ ವೈದ್ಯರು ಸಲಹೆ ನೀಡುತ್ತಾರೆ.
ಈ ವಿಷಯಗಳನ್ನು ನೆನಪಿನಲ್ಲಿಡಿ:
ವೈದ್ಯರ ಪ್ರಕಾರ , ಗರ್ಭಧಾರಣೆಯ ಆರಂಭಿಕ ತಿಂಗಳುಗಳಲ್ಲಿ, ಯಾವುದೇ ಮಹಿಳೆ ಜನದಟ್ಟಣೆ, ಮಾಲಿನ್ಯ ಮತ್ತು ವಿಕಿರಣದ ತೆರೆದುಕೊಳ್ಳುವುದನ್ನು ತಪ್ಪಿಸಬೇಕು. ಇದಲ್ಲದೆ, ಹಂಪ್ ಇರುವ ರಸ್ತೆಗಳಲ್ಲಿ ಪ್ರಯಾಣಿಸುವುದು, ಖಾಲಿ ಹೊಟ್ಟೆಯಲ್ಲಿ ದೀರ್ಘಕಾಲ ಇರುವುದು ಮತ್ತು ಹೆಚ್ಚು ಮೆಣಸಿನಕಾಯಿ ಸೇವಿಸುವುದನ್ನು ಸಹ ತಪ್ಪಿಸಬೇಕು. ಮಹಿಳೆಯರು ಆಗಾಗ ಹಣ್ಣುಗಳು, ತೆಂಗಿನ ನೀರು ಅಥವಾ ಗ್ಲೂಕೋಸ್ ಮಿಶ್ರ ನೀರು ಇತ್ಯಾದಿಗಳನ್ನು ತೆಗೆದುಕೊಳ್ಳಬೇಕು.
ಆಹಾರದ ಬಗ್ಗೆಯೂ ಕಾಳಜಿ ಅಗತ್ಯ:
ಗರ್ಭಿಣಿಯರನ್ನು ಕಾಡುವ ಮಾರ್ನಿಂಗ್ ಸಿಕ್ ನೆಸ್ ತಪ್ಪಿಸಲು ನಿಂಬೆ-ನೀರು ಅಥವಾ ಶುಂಠಿ ಚಹಾವನ್ನು ಕುಡಿಯಬಹುದು. ಮಜ್ಜಿಗೆ, ನಿಂಬೆ ಪಾನಕ, ತೆಂಗಿನ ನೀರು, ಹಣ್ಣಿನ ರಸಗಳನ್ನು ದಿನಕ್ಕೆ ಕನಿಷ್ಠ 3-4 ಬಾರಿ ಕುಡಿಯಿರಿ. ಇದನ್ನು ಮಾಡುವುದರಿಂದ ದೇಹದಲ್ಲಿ ನೀರಿನ ಉಂಟಾಗುವುದಿಲ್ಲ. ಈ ಮೂರು ತಿಂಗಳುಗಳಲ್ಲಿ, ಮಗುವಿನ ಅಂಗಗಳು ರೂಪುಗೊಳ್ಳಲು ಪ್ರಾರಂಭಿಸುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಆಹಾರದಲ್ಲಿ ಸಾಧ್ಯವಾದಷ್ಟು ಪೌಷ್ಟಿಕಾಂಶವನ್ನು ಸೇರಿಸಲು ಪ್ರಯತ್ನಿಸಿ.
ದಿನನಿತ್ಯದ ತಪಾಸಣೆ:
ಪ್ರಸವಪೂರ್ವ ಪರೀಕ್ಷೆಗಳಾದ ರಕ್ತ ಗುಂಪು ಮತ್ತು ಆರ್ಎಚ್, ಹಿಮೋಗ್ಲೋಬಿನ್, ರಕ್ತದಲ್ಲಿನ ಸಕ್ಕರೆ, ಸೋಂಕುಗಳಿಗೆ ತಪಾಸಣೆ – ಎಚ್ಐವಿ, ಸಿಫಿಲಿಸ್, ರುಬೆಲ್ಲಾ, ಹೆಪಟೈಟಿಸ್ ಸಿ, ಹಿಮೋಗ್ಲೋಬಿನೋಪಥಿಗಳನ್ನು ನಿಯಮಿತವಾಗಿ ಮಾಡಿಕೊಳ್ಳಿ. ಪ್ರತಿ 15 ದಿನಗಳಿಗೊಮ್ಮೆ ನಿಮ್ಮ ವೈದ್ಯರಿಂದ ನಿಮ್ಮ ತಪಾಸಣೆ ನಡೆಯುವಂತೆ ನೋಡಿಕೊಳ್ಳಿ. ಇದರಿಂದ ನಿಮ್ಮ ಡೆಲಿವರಿ ದಿನಾಂಕ ಹಾಗೂ ಗರ್ಭದಲ್ಲಿ ಒಂದು ಅಥವಾ ಹೆಚ್ಚಿನ ಶಿಶುಗಳಿವೆಯೇ ಎಂದು ನಿಮಗೆ ತಿಳಿಯುವುದು. ಹುಟ್ಟುವ ಮಗುವಿನಲ್ಲಿ ಏನಾದರೂ ಅಸ್ವಸ್ಥತೆ ಇದೆಯೇ ಎಂದು ನೋಡಲು ಏಳನೇ ಮತ್ತು ಹನ್ನೆರಡನೇ ವಾರದಲ್ಲಿ ಅಲ್ಟ್ರಾಸೌಂಡ್ ಮಾಡಲಾಗುತ್ತದೆ. ಹನ್ನೆರಡನೇ ವಾರದಲ್ಲಿ ಡಬಲ್ ಮಾರ್ಕರ್ ರಕ್ತ ಪರೀಕ್ಷೆ ಮಾಡಲಾಗುತ್ತದೆ.