ದೇಶಾದ್ಯಂತ ಕಳೆದ ಒಂದು ವರ್ಷದಿಂದ ಕೊರೊನಾ ಹಾವಳಿಯಿಂದ ಬೇಸತ್ತಿರುವ ಜನತೆಗೆ ಇದೀಗ ಡೆಲ್ಟಾ ಪ್ಲಸ್ ರೂಪಾಂತರಿ ವೈರೆಸ್ ದಾಳಿ ಇಟ್ಟಿದ್ದು ಕೊರೊನಾ ವೈರೆಸ್ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಕೊರೊನಾಗಿಂತ ಭಿನ್ನವಾಗಿರುವ ಡೆಲ್ಟಾ ಪ್ಲಸ್ ವೈರೆಸ್ ಕೇವಲ 2 -3 ದಿನಗಳಲ್ಲೇ ಇದರ ಸೋಂಕಿನ ತೀವ್ರತೆ ಹೆಚ್ಚುತ್ತದೆ. ಡೆಲ್ಟಾ ಪ್ಲಸ್ ಇಗಾಗಲೇ 35 ದೇಶಗಳಿಗೆ ದಾಳಿ ಇಟ್ಟಿದ್ದು, ಇದರಲ್ಲಿ 5 ದೇಶಗಳಲ್ಲಿ ಈ ಸೋಂಕಿನ ತೀವ್ರತೆ ಹೆಚ್ಚಿದೆ. ಜಾಗತಿಕವಾಗಿ ಮುಂದುವರಿದ ರಾಷ್ಟ್ರವಾದ ಅಮೆರಿಕಾದಲ್ಲಿ ಕಳೆದ 1 ವಾರದಿಂದ ಸರಾಸರಿ 1 ಲಕ್ಷ ಪ್ರಕರಣಗಳು ದಾಖಲಾಗುತ್ತಿದ್ದು, ಇದರಲ್ಲಿ ಶೇ 35%ರಷ್ಟು ಹೊಸ ಪ್ರಕರಣಗಳು ದಾಖಲಾಗಿವೆ. ಭಾರತ, ಅಮೆರಿಕಾ, ಆಸ್ಟ್ರೇಲಿಯಾ, ಫ್ರಾನ್ಸ್, ಚೀನಾ ದೇಶಗಳಲ್ಲಿ ಇಗಾಗಲೇ ಡೆಲ್ಟಾ ವೈರೆಸ್ ಕಾಣಿಸಿಕೊಂಡಿದ್ದು, ಭಾರತೀಯ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಏಪ್ರಿಲ್ 5ಕ್ಕೆ ಡೆಲ್ಟಾ ಭಾರತಕ್ಕೆ ಕಾಲಿಟ್ಟಿದೆ. ಭಾರತದಲ್ಲಿ ಇದುವರೆಗೂ 40 ಕ್ಕೂ ಅಧಿಕ ಜನರಲ್ಲಿ ಡೆಲ್ಟಾ ಪ್ಲಸ್ ವೈರೆಸ್ಗಳು ಪತ್ತೆಯಾಗಿದ್ದಾಗಿ ಆರೋಗ್ಯ ಸಚಿವಾಲಯ ತಿಳಿಸಿದೆ. ಮೊದಲಿಗೆ ಭಾರತದಲ್ಲಿ ಮಧ್ಯಪ್ರದೇಶ, ಕೇರಳ, ಮಹರಾಷ್ಟ್ರದಲ್ಲಿ ಡೆಲ್ಟಾ ಪತ್ತೆಯಾಗಿತ್ತಾದರೂ ನಂತರದ ದಿನಗಳಲ್ಲಿ ಇದು ದೇಶದಎಲ್ಲಾ ರಾಜ್ಯಗಳಿಗೂ ನಿಧಾನಗತಿಯಲ್ಲಿ ಹರಡುತ್ತಿದೆ.
ಡೆಲ್ಟಾ ಪ್ಲಸ್ ವೈರಾಣು ಬೇರೆ ವೈರಣುಗಳಿಗಿಂತ ವಿಭಿನ್ನವಾಗಿದ್ದು, ಈ ವೈರಸ್ ಸಾಕಷ್ಟ ವೇಗವಾಗಿ ಹರಡುವ ಸಾಧ್ಯತೆಯಿದೆ. ಆರೋಗ್ಯ ಇಲಾಖೆಯ ಪ್ರಕಾರ ಕೋವಿಶೀಲ್ದ್ ಮತ್ತು ಕೋವ್ಯಾಕ್ಸಿನ್ ಎರಡು ಕೂಡ ಡೆಲ್ಟಾ ಪ್ಲಸ್ ಗೆ ಪರಿಣಾಮ ಕಾರಿಯಾಗಲಿದೆ ಎಂದು ಸ್ಪಷ್ಟಪಡಿಸಿದೆ. ಆದರೂ ಕೂಡ ಡೆಲ್ಟಾ ವೈರೆಸ್ ಪ್ರಬಾವ ತೀವ್ರ ವಾಗಿರುವ ಕಾರಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂಜಾಗೃತ ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲವಾದಲಿ 2ನೇ ಅಲೆಗಿಂತ 3ನೇ ಡೆಲ್ಟಾ ಅಲೆ ತೀವ್ರಗತಿಯಲ್ಲಿ ಹರಡುವ ಸಾಧ್ಯತೆಯಿದೆ.