“ದಿ ಕೇರಳ ಸ್ಟೋರಿ” (“The Kerala Story”) 36000 ಅಲ್ಲ 3 ಹೆಣ್ಣು ಮಕ್ಕಳ ಕಥೆ ಎಂದು ಹೇಳಿಕೆ ನೀಡಿ ಚಿತ್ರದ ನಿರ್ದೇಶಕ ಸುದೀಪ್ತೋ ಸೇನ್ (Sudipto Sen) ಉಲ್ಟಾ ಹೊಡೆದಿದ್ದಾರೆ. ಇದು ಚಿತ್ರವನ್ನು ಬೆಂಬಲಿಸಿ ಅದರ ಪರ ಬ್ಯಾಟಿಂಗ್ ಮಾಡಿದವರಿಗೆ ಶಾಕ್ ಆಗಿದೆ. ನಿರ್ದೇಶಕರ ಹೇಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿದ್ದು, ಇಂಥವರೂ ಇರ್ತಾರಾ ಅನ್ನೋ ಅಂತ ಅನೇಕರು ಚುಚ್ಚಿದ್ದಾರೆ.

ಮೇ 5ರಂದು ಬಿಡುಗಡೆ ಆಗಬೇಕಾಗಿರುವ, ವಿವಾದದ ಕಿಚ್ಚು ಹೊತ್ತಿಸಿರುವ ‘ಲವ್ ಜಿಹಾದ್’ ಕಥೆ ಆಧಾರಿತ ಸಿನಿಮಾ ಎಂಬ ಆಪಾದನೆಗೆ ಗುರಿಯಾಗಿರುವ ‘ದಿ ಕೇರಳ ಸ್ಟೋರಿ’ ಚಿತ್ರದ ಬಗ್ಗೆ ರಾಷ್ಟ್ರಮಟ್ಟದಲ್ಲಿ ಪರ-ವಿರೋಧ ಚರ್ಚೆಗಳು ಜೋರಾಗಿ ನಡೆಯುತ್ತಿದೆ. ಒಂದು ವರ್ಗ ಸಿನಿಮಾವನ್ನು ನಿಷೇಧಿಸಬೇಕು ಎಂದು ಆಗ್ರಹಿಸುತ್ತಿದ್ದರೆ , ಇನ್ನೊಂದು ವರ್ಗ ನಿಷೇಧವೇಕೆ ಎಂದು ಪ್ರಶ್ನಿಸುತ್ತಿದೆ.
ಈ ಸಿನಿಮಾದಲ್ಲಿರುವ ವಿಷಯಗಳು ತುಂಬಾ ವಿವಾದವನ್ನು ಹುಟ್ಟುಹಾಕಿವೆ. ಕೇರಳದಲ್ಲಿ ಸಾವಿರಾರು ಮಹಿಳೆಯರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ ನಂತರ ಅವರನ್ನು ಐಸಿಸ್ ಉಗ್ರ ಸಂಘಟನೆಗೆ ಸೇರಿಸಲಾಗಿದೆ ಎಂಬ ವಿಷಯವನ್ನು ಈ ಚಿತ್ರದ ಟ್ರೇಲರ್ (Trailer) ನಲ್ಲಿ ತೋರಿಸಲಾಗಿದೆ. ‘ದಿ ಕೇರಳ ಸ್ಟೋರಿ’ ಸಿನಿಮಾ ಬಿಡುಗಡೆಯಾಗಬಾರದು,
ಇದನ್ನೂ ಓದಿ : https://vijayatimes.com/yashavini-yojana-re-implemented/
ಚಿತ್ರ ಬಿಡುಗಡೆಗೆ ತಡೆ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್ಗೆ (Supreme Court) ಮೊದಲೇ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಆ ಅರ್ಜಿಯನ್ನು ಕೋರ್ಟ್ ಆಗಲೇ ತಿರಸ್ಕರಿಸಿದೆ. ಇಷ್ಟೆಲ್ಲ ವಿವಾದಗಳನ್ನು ಎಬ್ಬಿಸಿರುವ ‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ 32 ಸಾವಿರ ಹಿಂದೂ ಹುಡುಗಿಯರನ್ನು ಇಸ್ಲಾಂಗೆ ಮತಾಂತರ ಮಾಡಲಾಗಿದೆ,
ಅಲ್ಲದೆ ಬಳಿಕ ಐಸಿಸ್ ಸಂಘಟನೆ (ISIS organization) ಸೇರಿಸಲಾಗಿದೆ ಎಂಬ ಮಾಹಿತಿಯನ್ನು ಸಾಬೀತು ಮಾಡಿದರೆ ಅವರಿಗೆ ಮುಸ್ಲಿಂ ಯೂತ್ ಲೀಗ್ ಕೇರಳ ರಾಜ್ಯ ಕಮಿಟಿಯು ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಕೂಡ ಘೋಷಿಸಿತ್ತು.
ವರಸೆ ಬದಲಿಸಿದ ನಿರ್ದೇಶಕ:

ನಾವು ಈಗಾಗಲೇ “ಐಸಿಸ್ ಸಂಘಟನೆಯಿಂದ ಹೊರ ಬಂದ ಅನೇಕ ಸಂತ್ರಸ್ತರ ಜತೆ ಮಾತುಕತೆ ನಡೆಸಿ, ಅವರ ಬದುಕಿನ ಬಗ್ಗೆ ಸುದೀರ್ಘವಾದ ಸಂಶೋಧನೆ ನಡೆಸಿ ಈ ಸಿನಿಮಾ ಮಾದಿದ್ದೇವೆ,ಇದರಲ್ಲಿ ವಾಸ್ತವಾಂಶಗಳು ಅಡಗಿವೆ” ‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ 32 ಸಾವಿರ ಹಿಂದೂ ಹುಡುಗಿಯರನ್ನು ಇಸ್ಲಾಂಗೆ ಮತಾಂತರ ಮಾಡಲಾಗಿದೆ, ಅಲ್ಲದೆ ಬಳಿಕ ಐಸಿಸ್ ಸಂಘಟನೆ ಸೇರಿಸಲಾಗಿದೆ ಎಂದು ಹೇಳಿರುವ ನಿರ್ದೇಶಕ ಸುದೀಪ್ತೋ ಸೇನ್ (Sudeepto Sen) ಅವರು ಈಗ ಉಲ್ಟಾ ಹೊಡೆದಿದ್ದಾರೆ.
ಅದೇನೆಂದರೆ, ದಿ ಕೇರಳ ಸ್ಟೋರಿ ಸಿನಿಮಾದ ಒನ್ ಲೈನ್ ಸ್ಟೋರಿ ಹೇಳುವಾಗ, ಮತ್ತು ಬುಕ್ ಮೈ ಶೋ (Book My Show) ವಿವರಣೆಯಲ್ಲಿ ಕೂಡ 32,000 ಹೆಣ್ಣುಮಕ್ಕಳ ಕಥೆ ಎಂದು ವಿವರಿಸಲಾಗಿತ್ತು.ಆದರೆ ಈಗ ಇದನ್ನು 3 ಹೆಣ್ಣುಮಕ್ಕಳ ಕಥೆ ಎಂದು ಬದಲಾಯಿಸಲಾಗಿದೆ. ಇದನ್ನು ನೋಡಿ ಜನರು ಶಾಕ್ ಆಗಿದ್ದು, ನಿಜವನ್ನೇ ಹೇಳುತ್ತಿರುವುದಾಗ ಈ ರೀತಿ ಯಾಕೆ ಮಾಡುತ್ತಿದ್ದೀರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇಂತಹ ನಿರ್ದೇಶಕರು ಕೂಡ ಇರ್ತಾರ ಎಂದು ಶಾಕ್ ಆಗಿದ್ದಾರೆ.
ಇದನ್ನೂ ಓದಿ : https://vijayatimes.com/kedarjadhav-entry-for-rcb/
ಮುಸ್ಲಿಮರು ಈ ಚಿತ್ರದ ಟಾರ್ಗೆಟ್ ಅಲ್ಲ
“ದಿ ಕೇರಳ ಸ್ಟೋರಿ” ‘‘ಸಿನಿಮಾದಲ್ಲಿ ನಾವು ಯಾವುದೇ ಒಂದು ನಿರ್ದಿಷ್ಟ ಸಮುದಾಯವನ್ನಾಗಲಿ ಅಥವಾ ಮುಸ್ಲಿಮರನ್ನು ಗುರಿ ಮಾಡಿಕೊಂಡು ನಾವು ಈ ಸಿನಿಮಾ ಮಾಡಿಲ್ಲ. ಭಯೋತ್ಪಾದನೆ ಎನ್ನುವುದು ನಮ್ಮ ಯುವ ಜನರನ್ನು ಹೇಗೆ ದಾರಿ ತಪ್ಪಿಸುತ್ತಿದೆ, ಹೇಗೆಲ್ಲಾ ಯುವ ಜನರ ಬ್ರೈನ್ ವಾಶ್ ಮಾಡಿ ಅವರನ್ನು ಹೇಗೆ ಉಗ್ರರನ್ನಾಗಿ ಮಾಡಲಾಗುತ್ತಿದೆ ಮತ್ತು ಹೆಣ್ಣು ಮಕ್ಕಳನ್ನು ಹೇಗೆಲ್ಲಾ ಬಳಸಿಕೊಳ್ಳಲಾಗುತ್ತಿದೆ ಎಂಬುದನ್ನು ಮಾತ್ರ ನಾವು ಸಿನಿಮಾದಲ್ಲಿ ತೋರಿಸಲಾಗಿದೆ’’ ಎಂದು ‘ದಿ ಕೇರಳ ಸ್ಟೋರಿ’ ಚಿತ್ರ ತಂಡ ಈಗಾಗಲೇ ಸ್ಪಷ್ಟನೆ ನೀಡಿದೆ.
- ರಶ್ಮಿತಾ ಅನೀಶ್