vijaya times advertisements
Visit Channel

ನಮ್ಮ ರಾಷ್ಟ್ರಧ್ವಜವನ್ನು ನಿರ್ಮಿಸಿದ ಪಿಂಗಳಿ ವೆಂಕಯ್ಯ, ಮೊದಲು ಬ್ರಿಟಿಷ್ ಸೈನ್ಯದಲ್ಲಿದ್ದರು ; ಇಲ್ಲಿದೆ ಓದಿ ಅಚ್ಚರಿಯ ಮಾಹಿತಿ

Pingali

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ(Amritha Mahotsav) ಶುಭ ಸಂದರ್ಭದಲ್ಲಿ ಹರ್ ಘರ್ ತಿರಂಗ(Har Ghar Thiranga) ಅಭಿಯಾನದ ಮೂಲಕ ಪ್ರತಿಯೊಬ್ಬರ ಮನೆಯಲ್ಲಿ ಹಾರಲಿರುವ ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳು ಒಳಗೊಂಡ ರಾಷ್ಟ್ರಧ್ವಜದ ಪರಿಕಲ್ಪಕರು ಹಾಗೂ ಅದನ್ನು ವಿನ್ಯಾಸಗೊಳಿಸಿದವರು ಪಿಂಗಳಿ ವೆಂಕಯ್ಯ(Pingali Venkaiah) ಅವರು.

Pingali Venkaiah

ಪತ್ತಿ ವೆಂಕಯ್ಯ ಎಂದೂ ಕರೆಯಲ್ಪಡುವ ವೆಂಕಯ್ಯ ಅವರು ಭಾರತದ ಸ್ವಾತಂತ್ರ್ಯ ಹೋರಾಟಗಾರರಾಗಿದ್ದಾರೆ. ದೇಶಕ್ಕೊಂದು ಧ್ವಜಕೊಟ್ಟು 100 ವರ್ಷ ಕಳೆದರೂ ಪಿಂಗಳಿ ಅವರ ನೆನಪು ಅಜರಾಮರವಾಗಿದೆ. ಪಿಂಗಳಿ ವೆಂಕಯ್ಯ ಅವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಮುಂದೆ ಓದಿ.


ಆಗಸ್ಟ್ 2, 1876 ರಂದು ಆಂಧ್ರಪ್ರದೇಶದ(AndraPradesh) ಮಚಲಿಪಟ್ಟಣಂ ಬಳಿ ಜನಿಸಿದ ಪಿಂಗಳಿ ವೆಂಕಯ್ಯ ಅವರು ಮೊದಲು ಬ್ರಿಟಿಷ್ ಸೈನ್ಯದಲ್ಲಿದ್ದರು(British Army) ಎನ್ನುವುದು ವಿಶೇಷ. ಬ್ರಿಟಿಷ್ ಸೇನೆಗೆ ಸೇರಿದ್ದ ಪಿಂಗಳಿ ಅವರು ಬ್ರಿಟನ್ ಪರ ಹೋರಾಡಲು ತಮ್ಮ 19ನೇ ವಯಸ್ಸಿಗೆ ದಕ್ಷಿಣ ಆಫ್ರಿಕಾಕ್ಕೆ(South Africa) ತೆರಳಿದ್ದರು. ಅಲ್ಲಿ ಬ್ರಿಟಿಷ್ ಸೇನಾಧಿಕಾರಿ ಬ್ರಿಟನ್ ಧ್ವಜಕ್ಕೆ ವಂದಿಸುವಂತೆ ಒತ್ತಾಯಿಸುತ್ತಿದ್ದ.

India

ಇದು ಪಿಂಗಳಿ ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗದೆ ದಕ್ಷಿಣ ಆಫ್ರಿಕ ಬಿಟ್ಟು ಭಾರತಕ್ಕೆ ವಾಪಸ್ಸಾದರು. ನಂತರ ಭಾರತಕ್ಕೊಂದು ಧ್ವಜ ರೂಪಿಸಬೇಕು ಎಂದು ತಮ್ಮ ಜೀವನವನ್ನು ಸ್ವಾತಂತ್ರ್ಯ ಹೋರಾಟಕ್ಕಾಗಿ ಮುಡಿಪಾಗಿಟ್ಟರು, ಉತ್ಸಾಹಭರಿತ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಗಾಂಧೀ ವಿಚಾರವಾದಿಯಾಗಿದ್ದ ಇವರು, ಭಾಷಾಶಾಸ್ತ್ರಜ್ಞ, ಭೂವಿಜ್ಞಾನಿ ಮತ್ತು ಬರಹಗಾರರಾಗಿದ್ದರು. ಪಿಂಗಳಿ ವೆಂಕಯ್ಯ ಅವರು ಅತ್ಯಾಸಕ್ತಿಯ ಧ್ವಜ ಉತ್ಸಾಹಿಯಾಗಿದ್ದು, 1916 ರಲ್ಲಿ ‘ಭಾರತಕ್ಕಾಗಿ ರಾಷ್ಟ್ರೀಯ ಧ್ವಜ’ ಎಂಬ ಕಿರುಪುಸ್ತಕವನ್ನು ಸಹ ತಂದರು.

ಅದರಲ್ಲಿ ಅವರು 24 ಧ್ವಜ ವಿನ್ಯಾಸಗಳನ್ನು ಪ್ರಸ್ತುತ ಪಡಿಸಿದರು. 1921ರ ಏಪ್ರಿಲ್(April) 1 ರಂದು ವಿಜಯವಾಡದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್(Congress) ಸಭೆಯಲ್ಲಿ ಮಹಾತ್ಮ ಗಾಂಧಿಯವರು(Mahatma Gandhi) ವೆಂಕಯ್ಯ ಅವರ ಧ್ವಜದ ವಿನ್ಯಾಸವನ್ನು ಅನುಮೋದಿಸಿದರು. ಆ ಧ್ವಜನವನ್ನೇ ಇಂದು ನಾವು ಹೆಮ್ಮೆಯಿಂದ ತಲೆ ಎತ್ತಿ ನೋಡಿ ಸೆಲ್ಯುಟ್ ಮಾಡುತ್ತಿರುವುದು.

Pingali


ಪಿಂಗಳಿ ವೆಂಕಯ್ಯ ಅವರು ಜುಲೈ 4, 1963 ರಂದು ಕೊನೆಯುಸಿರೆಳೆದರು. ಅವರ ಸಾವಿನ ದಿನಗಳಲ್ಲಿಯೂ ಅವರು ತಮ್ಮ ದೇಹದ ಮೇಲೆ ಧ್ವಜವನ್ನು ಮುಚ್ಚಲು ಬಯಸಿದ ನಿಸ್ವಾರ್ಥ ಮಠಾಧೀಶರಾಗಿದ್ದರು. ನಮ್ಮ ಮಹಾನ್ ರಾಷ್ಟ್ರದ ಎಲ್ಲಾ ವಿಜಯಗಳಲ್ಲಿ ಅವರನ್ನು ಸ್ಮರಿಸಲಾಗುವುದು.


ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆಗಾಗಿ 2009 ರಲ್ಲಿ ಪಿಂಗಳಿ ವೆಂಕಯ್ಯ ಅವರನ್ನು ಮರಣೋತ್ತರವಾಗಿ ಅಂಚೆ ಚೀಟಿಯೊಂದಿಗೆ ಗೌರವಿಸಲಾಯಿತು. 2014 ರಲ್ಲಿ ಅವರ ಹೆಸರನ್ನು ಭಾರತ ರತ್ನಕ್ಕೆ ಪ್ರಸ್ತಾಪಿಸಲಾಯಿತು. 2015 ರಲ್ಲಿ, ಆಗಿನ ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯ ನಾಯ್ಡು ಅವರು AIR ವಿಜಯವಾಡವನ್ನು ವೆಂಕಯ್ಯ ಅವರ ಹೆಸರಿನಿಂದ ಮರುನಾಮಕರಣ ಮಾಡಿದರು ಮತ್ತು ಅದರ ಆವರಣದಲ್ಲಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.

  • ಪವಿತ್ರ

Latest News

Paneer
ಆರೋಗ್ಯ

ರುಚಿಯಷ್ಟೇ ಅಲ್ಲ, ಆರೋಗ್ಯಕ್ಕೂ ವರದಾನ ನಾವು ಪ್ರತಿದಿನ ಬಳಸುವ ಪನೀರ್

ಪನೀರ್ ಕೇವಲ ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ, ನಮ್ಮ ಆರೋಗ್ಯದ ರಕ್ಷಣೆಯಲ್ಲಿ ಕೂಡ ಇದರ ಪ್ರಯೋಜನಗಳು ಅಪಾರ. ಆದರೆ ಹೆಚ್ಚಿನವರಿಗೆ ಇದರ ಬಗ್ಗೆ ಅರಿವೇ ಇಲ್ಲ.

ದೇಶ-ವಿದೇಶ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಬೆಂಗಾವಲಿಗೆ 42 ಕಾರುಗಳು‌ ; ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು

ಜನಸಾಮಾನ್ಯರ ಪಕ್ಷ ಎಂದೇ ಹೇಳಿಕೊಳ್ಳುವ ಆಮ್‌ ಆದ್ಮಿ ಪಕ್ಷದ ನಾಯಕರು ಈ ರೀತಿಯಾಗಿ ಸಾಮಾನ್ಯ ಜನರ ತೆರಿಗೆ(Tax) ಹಣವನ್ನು ದುಂದುವೆಚ್ಚ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Mallikarjun Kharge
ರಾಜಕೀಯ

ಮಲ್ಲಿಕಾರ್ಜುನ ಖರ್ಗೆ ಚಿತ್ತ ಕಾಂಗ್ರೆಸ್ ಅಧ್ಯಕ್ಷ ಸ್ಥಾನದತ್ತ ; ಅಧ್ಯಕ್ಷ ಸ್ಥಾನ ಬಹುತೇಕ ಖಚಿತ

ಈ ರಾಜೀನಾಮೆಯನ್ನು ಸೋನಿಯಾ ಗಾಂಧಿ ಅವರು ಅಂಗೀಕರಿಸುವ ಸಾಧ್ಯತೆ ಇದ್ದು, ಹೊಸ ರಾಜ್ಯಸಭಾ ವಿರೋಧ ಪಕ್ಷದ ನಾಯಕನ ಆಯ್ಕೆ ಸಂಬಂಧ ಮುಂದಿನ ದಿನಗಳಲ್ಲಿ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

PFI
ದೇಶ-ವಿದೇಶ

ಬಂಧಿತ PFI ಕಾರ್ಯಕರ್ತರನ್ನು 21 ದಿನಗಳ ಕಸ್ಟಡಿಗೆ ಕಳುಹಿಸಿದ NIA ಕೋರ್ಟ್!

ಬಂಧಿತರ ಮೇಲೆ ಭಯೋತ್ಪಾದನೆಗೆ ಹಣಕಾಸಿನ ನೆರವು ಒದಗಿಸಿರುವ ಮತ್ತು ಹಿಂದೂ ಕಾರ್ಯಕರ್ತರನ್ನು ಹತ್ಯೆ(Murder) ಮಾಡಿರುವ ಆರೋಪವನ್ನು ಹೊರಿಸಲಾಗಿದೆ.