ಮೈಸೂರು, ಮಾ. 24: ರಾಜ್ಯದಲ್ಲಿ ಕೊರೊನಾ ಸೋಂಕಿನ ಆರ್ಭಟ ಜೋರಾಗಿರುವ ಬೆನ್ನಲ್ಲೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಕ್ಕಿಜ್ವರದ ಆತಂಕ ಸಹ ಶುರುವಾಗಿದೆ. ಮೈಸೂರಿನ ವಿಜಯನಗರದ ಕೊಡವ ಸಮಾಜ ಬಳಿಯ ಬಸವ ಭವನ ಎದುರಿನ ಪಾರ್ಕ್‌ನಲ್ಲಿ ಪಕ್ಷಿಗಳು ನಿಗೂಢವಾಗಿ ಸಾವನ್ನಪ್ಪಿವೆ.
ಒಂದು ವಾರ ಅವಧಿಯಲ್ಲಿ ಪಾರ್ಕ್ ಒಳಗೆ ಎರಡು ಹಾಗೂ ಪಾರ್ಕ್ ಪಕ್ಕದ ಒಳ ಚರಂಡಿ ಸಮೀಪ ಮರದ ತೋಪಿನ ಕೆಳಗೆ ನಾಲ್ಕು ಪಕ್ಷಿಗಳ ಮರಣ ಅನುಮಾನ ಹುಟ್ಟಿಸಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಹಕ್ಕಿ ಜ್ವರ ಆರಂಭವಾಗಿತು. ಈಗ ಅದೇ ಸಮಯಕ್ಕೆ ಪಕ್ಷಿಗಳ ಸಾವು ಉಂಟಾಗಿರುವುದು ಆತಂಕ ಸೃಷ್ಟಿಸಿದೆ. ಸತ್ತಿರುವ ಪಕ್ಷಿಗಳನ್ನು ಬಕ ಪ್ರಬೇಧಕ್ಕೆ ಸೇರುವ ಕೊಳದ ಬಕ(ಪಾಂಡ್ ಹೆರಾನ್) ಮತ್ತು ಬೆಳ್ಳಕ್ಕಿ ಎಂದು ಗುರುತಿಸಲಾಗಿದೆ. ಪಾರ್ಕ್ ಒಳಗೆ ಎರಡು, ಪಾರ್ಕ್ ಹೊರ ಭಾಗದ ಮರದ ತೋಪಿನ ಕೆಳಗಿನ ನಾಲ್ಕು ಪಕ್ಷಿ ಸೇರಿ ಒಟ್ಟು ಆರು ಪಕ್ಷಿಗಳು ಸತ್ತಿವೆ.
ಪಾರ್ಕ್‌ನ ಒಳ ಚರಂಡಿ ಸಮೀಪ ಇರುವ ಮರದ ತೋಪು ಬಳಿ ಒಂದು ಪಕ್ಷಿ ಸತ್ತು ಅಸ್ತಿಪಂಜರ ಉಳಿದಿದೆ. ಇದರ ಸಮೀಪದಲ್ಲೇ ಮತ್ತೊಂದು ಪಕ್ಷಿ ಸತ್ತಿದೆ. ಪಾರ್ಕ್‌ನ ಇನ್ನೊಂದು ಮೂಲೆಯಲ್ಲಿ ಪಾಂಡ್ ಹೆರಾನ್ ಪಕ್ಷಿ ಜೀವನ್ಮರಣ ನಡುವೆ ಹೋರಾಟ ನಡೆಸುತ್ತಿದೆ. ಪಾರ್ಕ್ ಹೊರ ಭಾಗದ ಒಳಚರಂಡಿ ಸಮೀಪದ ಜಾಗದಲ್ಲಿ ಎರಡು ಪಾಂಡ್ ಹೆರಾನ್ ಪಕ್ಷಿ ಹಾಗೂ ಎರಡು ಬೆಳ್ಳಕ್ಕಿ ಮರಣ ಹೊಂದಿವೆ. ವಾಯು ವಿಹಾರಕ್ಕೆ ತೆರಳಿದ್ದ ಸಮಯದಲ್ಲಿ ಮೊದಲ ದಿನ ಒಂದು ಪಕ್ಷಿ ಸತ್ತಿತು. ಆನಂತರ ಎರಡು ಮತು ಮೂರು ದಿನದ ಅಂತರದಲ್ಲಿ ಮೂರ್ನಾಲ್ಕು ಪಕ್ಷಿಗಳು ಸತ್ತಿವೆ. ಇದು ನಮಗೆ ಆತಂಕ ತರಿಸಿದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.
ಶೀಘ್ರವೇ ಪಕ್ಷಿಗಳ ಸಾವಿಗೆ ಕಾರಣ ತಿಳಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.
ಒಳಚರಂಡಿ ಬಳಿ ಇರುವ ಮರಗಳ ಪಕ್ಷಿಗಳ ವಾಸಸ್ಥಾನ(ರೋಸ್ಟಿಂಗ್). ಒಳಚರಂಡಿ ನೀರು ಅವಲಂಬಿಸಿವೆ. ಪಕ್ಷಿಗಳು ಒಳ ಚರಂಡಿ ನೀರು ಸೇವಿಸಿ ಸತ್ತಿರಬಹುದು ಎಂದು ಅರಣ್ಯ ಇಲಾಖೆ ಹಾಗೂ ಪೀಪಲ್ ಾರ್ ಎನಿಮಲ್ ಪಕ್ಷಿಗಳ ನಿಗೂಡ ಸಾವಿಗೆ ಕಾರಣ ಹೇಳಿದೆ. ಪಾರ್ಕ್‌ನ ಪಕ್ಷಿಗಳ ವಾಸಸ್ಥಾನವಾದ ಮರದ ಪಕ್ಷಿಗಳ ಸಾವು ಅನುಮಾನ ತರಿಸಿದೆ. ಶೀಘ್ರವೇ ಕಾರಣ ಬಹಿರಂಗ ಪಡಿಸಿ, ಪಕ್ಷಿಗಳ ಅನುಕೂಲಕರ ವಾತವರಣ ನಿರ್ಮಿಸಿ ಎಂದು ಪಕ್ಷಿ ಪ್ರೇಮಿಗಳು ಒತ್ತಾಯಿಸಿದ್ದಾರೆ.
ಈ ನಡುವೆ ಹಕ್ಕಿಜ್ವರದ ಆತಂಕ ತಳ್ಳಿಹಾಕಿರುವ ಸ್ಥಳೀಯರು ಪಕ್ಷಿಗಳು ವಾಸಿಸುವ ಮರದ ಕೆಳಗೆ ಒಳಚರಂಡಿ ಇರುವ ಕಾರಣ ಕಲುಷಿತ ನೀರು ಸೇವಿಸಿರುವುದು ಸಾವಿಗೆ ಕಾರಣ ಆಗಿರಬಹುದು.
ನೈರ್ಸಗಿಕ ಸಾವು ಮತ್ತು ವಯೋ ಸಹಜ ಸಾವು ಆಗಿರುಬುಹುದು. ನಾಲ್ಕು ಪಕ್ಷಿಗಳು ಸತ್ತಿವೆ ಎಂದಾಕ್ಷಣ ಅದು ಹಕ್ಕಿ ಜ್ವರವೇ ಎಂದು ಭೀತಿ ಪಡೆಯುವ ಅಗತ್ಯವಿಲ್ಲ. ಹೀಗಾಗಿ ಜನರು ಆತಂಕಕ್ಕೆ ಒಳಗಾಗಬಾರದು. ಪಕ್ಷಿಗಳ ಕಳೇಬರವನ್ನು ಪರೀಕ್ಷೆ ಒಳಪಡಿಸಲಾಗುವುದು ಎಂದು ಡಿಸಿಎಫ್ ಡಾ.ಕೆ.ಸಿ. ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
ಈ ನಡುವೆ ಪಕ್ಷಗಳ ಸಾವಿಗೆ ಕಾರಣ ಕಲುಷಿತಗೊಂಡ ಒಳಚರಂಡು ನೀರು. ಇದರ ಸೇವಿಸಿ ಸತ್ತಿವೆ. ಶೀಘ್ರವೇ ಒಳ ಚರಂಡಿ ಸ್ವಚ್ಛಗೊಳಿಸಬೇಕು. ಪಾರ್ಕ್‌ನಲ್ಲಿ ಪಕ್ಷಿಗಳು ನೀರು ಕುಡಿಯಲು ಕೊಳ ನಿರ್ಮಿಸಬೇಕೆಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದು, ಇದರ ಬೆನ್ನಲ್ಲೇ ಒಳ ಚರಂಡಿ ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆ ಕಳುಹಿಸಿದ್ದಾರೆ.