ಬೆಂಗಳೂರು,ಏ,04: ಕಳೆದ 2 ತಿಂಗಳಿನಲ್ಲಿ ರಾಜ್ಯದ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 6 ಪಟ್ಟು ಹೆಚ್ಚಾಗಿದೆ. ದೇಶದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ 50% ಪ್ರಕರಣಗಳು ಕೇವಲ 10 ಜಿಲ್ಲೆಗಳಲ್ಲಿದ್ದು, ಬೆಂಗಳೂರು ನಗರ ಜಿಲ್ಲೆ ಈ ಪೈಕಿ ಒಂದಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ದೇಶದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ 77% ಪ್ರಕರಣಗಳು 5 ರಾಜ್ಯಗಳಲ್ಲಿದ್ದು ಈ ರಾಜ್ಯಗಳ ಪೈಕಿ ಕರ್ನಾಟಕವೂ ಒಂದಾಗಿದೆ. ಕೊರೊನಾ ಎರಡನೇ ಅಲೆಯನ್ನು ನಿಯಂತ್ರಿಸಲು ಸಾರ್ವಜನಿಕರ ಸಹಕಾರ ಅತ್ಯಂತ ನಿರ್ಣಾಯಕ.
ಕಳೆದ 2 ತಿಂಗಳಿನಲ್ಲಿ ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 6 ಪಟ್ಟು ಹೆಚ್ಚಾಗಿದೆ.
— Dr Sudhakar K (@mla_sudhakar) April 3, 2021
ದೇಶದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ 50% ಪ್ರಕರಣಗಳು ಕೇವಲ 10 ಜಿಲ್ಲೆಗಳಲ್ಲಿದ್ದು ಬೆಂಗಳೂರು ನಗರ ಜಿಲ್ಲೆ ಈ ಪೈಕಿ ಒಂದಾಗಿದೆ.
ದೇಶದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ 77% ಪ್ರಕರಣಗಳು 5 ರಾಜ್ಯಗಳಲ್ಲಿದ್ದು ಈ ರಾಜ್ಯಗಳ ಪೈಕಿ ಕರ್ನಾಟಕವೂ ಒಂದಾಗಿದೆ.
1/2 pic.twitter.com/SOLBD6vdG2