ನಾವು ತಯಾರಿಸುವ ಬಗೆ ಬಗೆಯ ಆಹಾರ ಪದಾರ್ಥಗಳಲ್ಲಿ ಎಳ್ಳನ್ನು (Sesame) ಬಳಕೆ ಮಾಡುತ್ತೇವೆ. ಸಿಹಿ (Sweet) ಆಗಲಿ ಖಾರದ ಆಹಾರ ಪದಾರ್ಥಗಳಾಗಲಿ (Food items) ಅದಕ್ಕೊಂದು ಚೂರು ಎಳ್ಳು ಹಾಕಿದರೆ ಸಾಕು ಅದರ ರುಚಿನೇ ಬೇರೆ. ಹೆಚ್ಚಾಗಿ ನಾವು ಎಳ್ಳು ಬಳಕೆ ಮಾಡುತ್ತೇವೆಯಾದರೂ ಇದರ ಆರೋಗ್ಯಕರ ಪ್ರಯೋಜನಗಳನ್ನು (Healthy benefits) ಅಷ್ಟಾಗಿ ತಿಳಿದಿಲ್ಲ.ಎಳ್ಳಿನಲ್ಲಿ ಅಗತ್ಯವಾದ ಜೀವಸತ್ವಗಳು (Vitamins) ಮತ್ತು ಖನಿಜಗಳಿಂದ (Minerals) ತುಂಬಿದ ಪೌಷ್ಟಿಕಾಂಶದ ಶಕ್ತಿ (Nutritional power) ಕೇಂದ್ರವಾಗಿದೆ. ಅವು ಕ್ಯಾಲ್ಸಿಯಂ (Calcium), ಕಬ್ಬಿಣ (iron), ಮೆಗ್ನೀಸಿಯಮ್ (Magnesium) ಮತ್ತು ಸತುವುಗಳ (zinc) ಸಮೃದ್ಧ ಮೂಲವಾಗಿದ್ದು, ಚಳಿಗಾಲದ ತಿಂಗಳುಗಳಲ್ಲಿ ಮೂಳೆಯ ಆರೋಗ್ಯವನ್ನು (Bone health) ಕಾಪಾಡಿಕೊಳ್ಳಲು ಮತ್ತು ರೋಗನಿರೋಧಕ ಶಕ್ತಿಯನ್ನು (Immunity) ಹೆಚ್ಚಿಸಲು ನೆರವಾಗುತ್ತದೆ.

ಎಳ್ಳು ಸೇವನೆ ಮಾಡುವುದರಿಂದ ದೇಹದ ಮೇಲೆ ಬೆಚ್ಚಗಾಗುವ ಪರಿಣಾಮವನ್ನು ಬೀರುತ್ತವೆ ಎಂದು ನಂಬಲಾಗಿದೆ. ಬೆಚ್ಚಗಾಗುವ ಗುಣಲಕ್ಷಣಗಳನ್ನು ಹೊಂದಿರುವ ಆಹಾರವನ್ನು ಸೇವಿಸುವುದರಿಂದ ದೇಹದ ಉಷ್ಣತೆಯನ್ನು (Body temperature) ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಚಳಿಗಾಲದಲ್ಲಿ ಚಳಿಯನ್ನು ಎದುರಿಸಲು ಸೂಕ್ತ ಆಹಾರವಾಗಿದೆ (Suitable food).ಎಳ್ಳಿನಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳನ್ನು (Omega-3 fatty acids) ಒಳಗೊಂಡಂತೆ ಆರೋಗ್ಯಕರ ಕೊಬ್ಬಿನ (Healthy fats) ಉತ್ತಮ ಮೂಲವಾಗಿದೆ. ಈ ಕೊಬ್ಬುಗಳು ಹೃದಯದ ಆರೋಗ್ಯಕ್ಕೆ (Heart health) ಅತ್ಯಗತ್ಯವಾಗಿದೆ. ಹಾಗೆಯೇ ಚರ್ಮವನ್ನು ತೇವಗೊಳಿಸಲು ಮತ್ತು ಕಾಂತಿಯುತವಾಗಿರಿಸಲು (Radiant) ಸಹಾಯ ಮಾಡುತ್ತದೆ.

ಅಷ್ಟೇ ಅಲ್ಲದೆ ಎಳ್ಳು ಆಂಟಿಆಕ್ಸಿಡೆಂಟ್‌ಗಳಿಂದ (Antioxidants) ತುಂಬಿರುತ್ತವೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು (immune system) ಬಲಪಡಿಸಲು ಸಹಾಯ ಮಾಡುತ್ತದೆ. ದೃಢವಾದ ಪ್ರತಿರಕ್ಷಣಾ ವ್ಯವಸ್ಥೆಯು ಚಳಿಗಾಲದ ಶೀತ ಮತ್ತು ಜ್ವರದ (Cold and flu) ವಿರುದ್ಧ ಹೋರಾಡುತ್ತವೆ. ಇದು ಚಳಿಗಾಲದ ಉದ್ದಕ್ಕೂ ಆರೋಗ್ಯಕರವಾಗಿಡಲು ಸಹಕಾರಿಯಾಗಿದೆ. ಅಷ್ಟೇ ಅಲ್ಲ ಚರ್ಮದ ಆರೋಗ್ಯವನ್ನೂ (Skin health) ಸುಧಾರಿಸಲು ಸಹಕಾರಿಯಾಗಿದೆ. ಇನ್ನು ದೈನಂದಿನ ಆಹಾರದಲ್ಲಿ ಎಳ್ಳನ್ನು ಸುಲಭವಾಗಿ ಸೇರಿಸಿಕೊಳ್ಳಬಹುದು. ಅವುಗಳನ್ನು ಸಲಾಡ್‌ಗಳು (Salads), ಎಳ್ಳು ಉಂಡೆ (Sesame lump), ಎಳ್ಳು ಜ್ಯೂಸ್ (Sesame juice) ಮಾಡುವುದು ಅಥವಾ ಓಟ್‌ಮೀಲ್‌ನಲ್ಲಿ ಹಾಕಿ ಸೇವಿಸಬಹುದು. ಚಳಿಗಾಲದ ಆಹಾರದಲ್ಲಿ ಎಳ್ಳು ಬೀಜಗಳನ್ನು (Sesame seeds) ಸೇರಿಸುವುದರಿಂದ ಆಹಾರಕ್ಕೂ ಎಳ್ಳಿನ ಉತ್ತಮ ಪರಿಮಳ ನೀಡುತ್ತದೆ. ಜತೆಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಹೀಗಾಗಿ, ಈ ಚಳಿಗಾಲದಲ್ಲಿ ಆಹಾರದಲ್ಲಿ ಎಳ್ಳನ್ನು ಸೇವಿಸುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.