ರಮಲ್ಲಾಹ್: ಕೋವಿಡ್ 19 ಸೃಷ್ಟಿಸಿರುವ ದುರಂತಗಳು ಅಷ್ಟಿಷ್ಟಲ್ಲ, ಸಧ್ಯ ಮನುಷ್ಯ ಬದುಕಿಗೆ ಸಾಕಷ್ಟು ಪಾಠಗಳನ್ನು ಕಲಿಸುತ್ತಿದೆ. ಈ ವೈರಸ್ ಜಗತ್ತಿಗೆ ಅಂಟಿದಾಗಿನಿಂದ ಸಾಕಷ್ಟು ಸಾವು ನೋವಿನ ಕಥೆಗಳನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಪೂರಕ ಎಂಬಂತೆ ಪ್ಯಾಲೆಸ್ತೈನ್‌ನ ವ್ಯಕ್ತಿಯೊಬ್ಬ ಹಾಸ್ಪಿಟಲ್ನ ಗೋಡೆ ಮೇಲೇರಿ ಕಿಟಕಿ ಬಳಿ ಕುಳಿತು ತನ್ನ ತಾಯಿಯನ್ನು ನೋಡುತ್ತಿವರುವ ಚಿತ್ರ ಕೂಡಾ ವೈರಲ್ ಆಗಿದೆ.
ವ್ಯಕ್ತಿಯೊಬ್ಬ ತನ್ನ ತಾಯಿ ಕೋವಿಡ್-19ನಿಂದ ಆಸ್ಪತ್ರೆಗೆ ದಾಖಲಾದ ದಿನದಿಂದ ಮೃತಪಡುವ ದಿನದವರೆಗೂ ನಿತ್ಯವೂ ನೋಡುತ್ತ ಕಣ್ತುಂಬಿಕೊಳ್ಳುತ್ತಿದ್ದ ದೃಶ್ಯ ಸಾಕಷ್ಟು ವೈರಲ್ ಆಗಿದೆ. ಸಾಮಾಜಿಕ ಬಳಕೆಗಾರ ಮೊಹಮ್ಮದ್ ಸಫಾ ಎಂಬುವವರು ಈ ಫೋಟೋವನ್ನು ಹಂಚಿಕೊಂಡಿದ್ದು ಇದರೊಂದಿಗೆ ಕ್ಯಾರಿಕೇಚರ್‌ನ್ನು ಕೂಡಾ ಚಿತ್ರಿಸಿದ್ದಾರೆ. ಈ ಟ್ವೀಟ್ ವೈರಲ್ ಆಗಿದೆ.
ಮಾಹಿತಿಗಳ ಪ್ರಕಾರ ಜಿಹಾದ್ ಅಲ್ ಸುವೈತಿ ಎಂಬ ಯುವಕ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದ ತನ್ನ ತಾಯಿಯನ್ನು ನೋಡಲು ಪ್ರತಿನಿತ್ಯ ಈ ರೀತಿ ಆಸ್ಪತ್ರೆಯ ಕಿಟಕಿಯಲ್ಲಿ ಬಂದು ಕುಳಿತಿರುತ್ತಿದ್ದ.