- ನಾ ಕೊಡೆ, ನೀ ಬಿಡೆ ಆಟದಲ್ಲಿ ಹೆಚ್ಚಿದ ಜಗತ್ತಿನ ಆತಂಕ! (The tariff war between the US and China)
- ಚೀನಾ ಮೇಲೆ ಶೇ.54ರಷ್ಟಿದ್ದ ಸುಂಕವನ್ನು ಶೇ.104ಕ್ಕೆ ಏರಿಸಿದ ಅಮೆರಿಕ ಅಧ್ಯಕ್ಷ
- ಜಾಗತಿಕ ವಾಣಿಜ್ಯ ಸಮರವನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡ ಡೊನಾಲ್ಡ್ ಟ್ರಂಪ್
Washington: ಅಮೆರಿಕದ ಹೊಸ ಸುಂಕ ನೀತಿಯು (The new tariff policy) ಜಾಗತಿಕ ಆರ್ಥಿಕತೆ ಮೇಲೆ ಕಾರ್ಮೋಡ ಕವಿಯುವಂತೆ ಮಾಡಿದೆ. ಡೊನಾಲ್ಡ್ ಟ್ರಂಪ್ ಅವರ ಹಠಮಾರಿ ಧೋರಣೆ, ಜಾಗತಿಕ ಮಾರುಕಟ್ಟೆಗಳು ಕಂಪಿಸುವಂತೆ ಮಾಡಿದೆ.
ಜಾಗತಿಕ ವಾಣಿಜ್ಯ ಸಮರವನ್ನು (Trade war) ತಮ್ಮ ಪ್ರತಿಷ್ಠೆಯನ್ನಾಗಿ ಮಾಡಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump), ಹೇಗಾದರೂ ಸರಿ, ಈ ವಾಣಿಜ್ಯ ಯುದ್ಧವನ್ನು ಗೆಲ್ಲಲೇಬೇಕು ಎಂದು ಹಠ ತೊಟ್ಟಿದ್ದಾರೆ. ಇದಕ್ಕಾಗಿ ಜಗತ್ತು ಇದುವರೆಗೂ ಕಂಡು ಕೇಳರಿಯದ ಸುಂಕಗಳನ್ನು ಜಾರಿ ಮಾಡಿತ್ತಿರುವ ಟ್ರಂಪ್ ಅವರಿಗೆ, ವಾಣಿಜ್ಯ ಯುದ್ಧ ಅಸಲಿ ಯುದ್ಧವಾಗಿ ಬದಲಾದರೆ ಏನು ಎಂಬ ಆತಂಕವೇ ಇಲ್ಲವಾಗಿದೆ.
ಇನ್ನು ಅಮೆರಿಕದ ಹೊಸ ಸುಂಕ ನೀತಿಯು ಅನ್ಯ ರಾಷ್ಟ್ರಗಳಿಗಿಂತ ಚೀನಾವನ್ನು (China) ಹೆಚ್ಚು ಟಾರ್ಗೆಟ್ ಮಾಡಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಚೀನಾ ಮೇಲೆ ಹೊಸ ತೆರಿಗೆಯನ್ನು ಘೋಷಣೆ ಮಾಡಿದ್ದಾರೆ. ಚೀನಾ ಸರಕುಗಳ ಮೇಲೆ ಬರೋಬ್ಬರಿ ಶೇ.104ರಷ್ಟು ಸುಂಕಗಳನ್ನು ವಿಧಿಸಿ ಟ್ರಂಪ್ ಆದೇಶ ಹೊರಡಿಸಿದ್ದಾರೆ.

ಈಗಾಗಲೇ ಅಮೆರಿಕದ ಸುಂಕ ನೀತಿಗಳಿಗೆ ಸಡ್ಡು ಹೊಡೆದಿರುವ ಚೀನಾ, ಅಮೆರಿಕದ ಸುಂಕಗಳಿಗೆ ಪ್ರತಿಯಾಗಿ ಆ ದೇಶದ ವಸ್ತುಗಳ ಮೇಲೆ ಶೇ. 34ರಷ್ಟು ತೆರಿಗೆ (Tax) ವಿಧಿಸಿತ್ತು. ಇದನ್ನು ವಾಪಸ್ ಪಡೆಯಲು ಟ್ರಂಪ್ 24 ಗಂಟೆಗಳ ಗಡುವು ನೀಡಿದ್ದರು.
ಆದರೆ ಚೀನಾ ಇದಕ್ಕೆ ಒಪ್ಪಲಿಲ್ಲ. ಹೀಗಾಗಿ ಅಮೆರಿಕ ಇದೀಗ ಚೀನಾ ಮೇಲೆ ಒಟ್ಟು ಶೇ.104ರಷ್ಟು ತೆರಿಗೆ ವಿಧಿಸುವ ಘೋಷಣೆ ಮಾಡಿದೆ. ಇದು ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಸಮರವನ್ನು (Trade war) ಮತ್ತಷ್ಟು ತೀವ್ರಗೊಳಿಸಿದೆ.
ಕಳೆದ ತಿಂಗಳವರೆಗೆ ಅಮೆರಿಕ ಚೀನಾ ಮೇಲೆ ಶೇ. 10ರಷ್ಟು ತೆರಿಗೆ ವಿಧಿಸುತ್ತಿತ್ತು. ಆದರೆ ಚೀನಾ ಅಮೆರಿಕದ ವಸ್ತುಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುತ್ತಿದೆ ಎಂದು ಟ್ರಂಪ್ ಆರೋಪಿಸಿದ್ದರು. ಇದರಿಂದ ಅಮೆರಿಕದ ಆರ್ಥಿಕತೆಗೆ ನಷ್ಟವಾಗುತ್ತಿದೆ ಎಂದು ಆರೋಪಿಸಿದ್ದ ಅಧ್ಯಕ್ಷರು, ಚೀನಾ ಮೇಲೆ ಅಧಿಕ ತೆರಿಗೆ ವಿಧಿಸುವ ಮೂಲಕ ಡ್ರ್ಯಾಗನ್ ರಾಷ್ಟ್ರವನ್ನು (Dragon Nation) ವ್ಯಾಪಾರ ಯುದ್ಧದ ಮೈದಾನಕ್ಕೆ ತಳ್ಳಿದ್ದಾರೆ.
ಇದನ್ನೂ ಓದಿ:ಪ್ರತಿ ಸುಂಕ ವಿಧಿಸಲು ಟ್ರಂಪ್ ನಿರ್ಧಾರ :ಭಾರತ ಚೀನಾ ದೇಶಗಳಿಗೆ ಅಧಿಕ ಸುಂಕ
ಕಳೆದ ಏಪ್ರಿಲ್ 2ರಂದು ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ ಸುಂಕ ನೀತಿ ಅನ್ವಯ, ಚೀನಾ ಮೇಲೆ ಅಮೆರಿಕವು ಶೇ. 54ರಷ್ಟು ತೆರಿಗೆ ವಿಧಿಸಿತ್ತು. ಇದಕ್ಕೆ ಪ್ರತಿಯಾಗಿ ಚೀನಾ ಕೂಡ ಅಮೆರಿಕದ ವಸ್ತುಗಳ ಮೇಲೆ ಶೇ.34ರಷ್ಟು ತೆರಿಗೆ ವಿಧಿಸಿತು.
ಇದನ್ನು ಹಿಂಪಡೆಯುವಂತೆ ಚೀನಾಗೆ ಡೊನಾಲ್ಡ್ ಟ್ರಂಪ್ ಅವರು ನೀಡಿದ್ದ 24 ಗಂಟೆಗಳ ಗಡುವು ಮುಗಿದಿರುವುದರಿಂದ, ಚೀನಾ ಮೇಲೆ ಬರೋಬ್ಬರಿ ಶೇ.104ರಷ್ಟು ಅಂದರೆ ಹೆಚ್ಚುವರಿ ಶೇ.50 ತೆರಿಗೆ ವಿಧಿಸಲಾಗಿದೆ. ಇನ್ನು ಇನ್ನು ಚೀನಾ ಮೇಲಿನ ಅಧಿಕ ಸುಂಕ ಘೋಷಣೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡೊನಾಲ್ಡ್ ಟ್ರಂಪ್, ನಾನು ಚೀನಾಗೆ ಮತ್ತೊಂದು ಅವಕಾಶವನ್ನು ನೀಡಲು ಸಿದ್ಧನಿದ್ದೇನೆ.
ಅಸಲಿಗೆ ಚೀನಾ ನಮ್ಮೊಂದಿಗೆ ವ್ಯಾಪಾರ ಒಪ್ಪಂದ (Agreement) ಮಾಡಿಕೊಳ್ಳಲು ಬಯಸುತ್ತಿದೆ. (The tariff war between the US and China) ಆದರೆ ಮಾತುಕತೆಯನ್ನು ಹೇಗೆ ಆರಂಭಿಸಬೇಕು ಎಂಬುದು ತಿಳಿಯದೇ ಒದ್ದಾಡುತ್ತಿದೆ. ನಾವು ಅವರ ಕರೆಗಾಗಿ ಕಾಯುತ್ತಿದ್ದೇವೆ.ಎಂದು ಮಾರ್ಮಿಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.