- ದೂರುದಾರ ಅಸ್ಥಿಪಂಜರ ಕೊಟ್ರೂ ನೋ ಯೂಸ್!
- 20 ವರ್ಷದ ಹಿಂದೆಯೇ UDR ರಿಪೋರ್ಟ್ ಸುಟ್ಟು ಭಸ್ಮ?
- ಬೆಳ್ತಂಗಡಿ ಪೊಲೀಸರಿಂದ ಅನಾಥ ಶ*ದ ದಾಖಲೆ ನಾಶ?
- ಮಾಹಿತಿ ಹಕ್ಕು ಕಾಯ್ದೆಯಡಿ ಕೊಟ್ಟ ದಾಖಲೆಯಲ್ಲಿದೆ ಉತ್ತರ
ಧರ್ಮ**: ದಾಖಲೆಗಳು ಭಸ್ಮ, ದೂರುದಾರ ಅಸ್ಥಿಪಂಜರ ಕೊಟ್ರೂ ನೋ ಯೂಸ್! 20 ವರ್ಷಗಳ ಹಿಂದೆಯೇ ದಾಖಲೆ ಸುಟ್ಟು ಹಾಕಿದ್ರಾ ಬೆಳ್ತಂಗಡಿ ಪೊಲೀಸರು?
ಹಾಗಾದ್ರೆ ಹ*ಯಾದವರಿಗೆ ನ್ಯಾಯ ಸಿಗಲ್ವಾ?
ಧರ್ಮ**ದಲ್ಲಿ ಶ* ಹೂತಿಟ್ಟ ಪ್ರಕರಣದಲ್ಲಿ ದೂರುದಾರ ಭೀಮ ಅಸ್ಥಿಪಂಜರ ಕೊಟ್ರೂ ಪ್ರಯೋಜನ ಇಲ್ಲ ಅನ್ನಲಾಗ್ತಿದೆ.
ಯಾಕಂದ್ರೆ 20 ವರ್ಷಗಳ ಹಿಂದೆಯೇ ಬೆಳ್ತಂಗಡಿ ಪೊಲೀಸರು ಅನಾಥ ಶ*ಗಳ ದಾಖಲೆಯನ್ನ ಸುಟ್ಟು ಭಸ್ಮ ಮಾಡಿದ್ದಾರೆ.
ಇದನ್ನೆಲ್ಲಾ ನೋಡ್ತಾ ಇದ್ರೆ ದರ್ಮ**ದಲ್ಲಿ ಹ*ಯಾದವರಿಗೆ ನ್ಯಾಯ ಸಿಗುತ್ತಾ ಎನ್ನುವ ಅನುಮಾನ ಶುರುವಾಗಿದೆ.
ಇಂಥಾ ಒಂದು ಜಿಜ್ಞಾಸೆ ಈಗ ಧರ್ಮ**ದಲ್ಲಿ ಶ* ಹೂತಿಟ್ಟ ಪ್ರಕರಣದಲ್ಲಿ ಉಂಟಾಗಿದೆ.
ಒಂದು ವೇಳೆ ಸಾಕ್ಷಿ ದೂರುದಾರ ಭೀಮ ಎಷ್ಷೇ ಅಸ್ಥಿಪಂಜರ ಸಾಕ್ಷಿ ನೀಡಿದ್ರೂ ಈ ತನಿಖೆಗೆ ಸಹಾಯವಾಗೋದಿಲ್ಲ.
ಯಾಕಂದ್ರೆ ಬೆಳ್ತಂಗಡಿ ಪೊಲೀಸರು 20 ವರ್ಷಗಳ ಹಿಂದೆಯೇ UDR ರಿಪೋರ್ಟ್ ಅಂದ್ರೆ ಅನಾಥ ಶ*ಗಳ ದಾಖಲೆಯನ್ನ ಸುಟ್ಟು ಭಸ್ಮ ಮಾಡಿ ಮಾಡಿದ್ದಾರೆ
ಅಂತ ಪೊಲೀಸರೇ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಅಧಿಕೃತವಾಗಿ ಕೊಟ್ಟ ಉತ್ತರದಲ್ಲಿಯೇ ಇದೆ.

ಹೀಗಾಗಿ ದೂರದಾರ ಭೀಮ ಎಷ್ಟೇ ಅಸ್ಥಿಪಂಜರಗಳನ್ನ ತಂದಿಟ್ರೂ ಪ್ರಯೋಜನವೇ ಇಲ್ಲಾ. ಅಲ್ಲದೆ ಈ ಪ್ರಕರಣದಲ್ಲಿ ಅಮಾಯಕರ ಸಾ*ಗೆ ನ್ಯಾಯ ಸಿಗೋದಿಲ್ವಾ ಅನ್ನೋದು ಹೋರಟಗಾರರ ಅನುಮಾನ.
ಈ ಮಧ್ಯೆ ಧರ್ಮ**ದ ಸರಣಿ ಸಾ*ನ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವವರು SIT ತನಿಖೆ ಆಮೆಗತಿಯಲ್ಲಿ ಸಾಗ್ತಿದೆ.
ಸಮಾಧಿ ಉತ್ಖನನ ಕಾರ್ಯದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನೇ ಬಳಸುತ್ತಿಲ್ಲ ಎಂದು ಆರೋಪಿಸಿರುವ ಹೋರಾಟಗಾರರು,
Ground Penetrating Radar ಜಿಪಿಆರ್ ಅಂದ್ರೆ ಭೂಗರ್ಭದೊಳಗೆ ಅಡಗಿರುವ ವಸ್ತುಗಳನ್ನು ರಾಡಾರ್ ಮೂಲಕ ಪತ್ತೆ ಹಚ್ಚುವ ತಂತ್ರಜ್ಞಾನವನ್ನು ಬಳಸದೆ,
SIT ಹಾರೆ ಪಿಕಾಸಿ ಹಿಡಿದುಕೊಂಡು ಅಸ್ತಿಪಂಜರ ಹುಡುಕುತ್ತಿದೆ. 20 ವರ್ಷಗಳ ಹಿಂದೆ ಹೂತಿರುವ ಹೆಣ, ಗುಡ್ಡ ಕುಸಿತ, ನೆರೆ
ಮುಂತಾದ ಪ್ರಕೃತಿಯ ಸಹಜ ಕ್ರಿಯೆಯಿಂದ ಸ್ಥಾನ ಪಲ್ಲಟವಾಗಿರಬಹುದು. ಒಂದು ವೇಳೆ GPR ತಂತ್ರಜ್ಞಾನ ಬಳಸಿದ್ರೆ ಅಸ್ತಿಪಂಜರಗಳು ಸಿಗಬಹುದಿತ್ತು.
ಇನ್ಮೇಲಾದ್ರೂ ಈ GPR ಬಳಸಿ ತನಿಖೆ ನಡೆಸಿ ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.
ಇತ್ತ ದೂರುದಾರ ಪರ ವಕೀಲರು ಧರ್ಮ**ದಲ್ಲಿ ಗುರುತಿಸಿದ ಸ್ಥಳದಲ್ಲಿ ಮಾತ್ರ ಅವಶೇಷ ಇಲ್ಲ, ಸೂಚಿಸಿದ ಸ್ಥಳವಲ್ಲದೆ ಧರ್ಮ**ದ ಅನೇಕ ಕಡೆಗಳಲ್ಲಿ ಶ* ಹೂತಿಟ್ಟಿದ್ದಾರೆ.
ಧರ್ಮ**ದ ಬೇರೆ ಬೇರೆ ಸ್ಥಳಗಳಲ್ಲೂ ಕೂಡ ಶೋಧಕಾರ್ಯ ನಡೆಸುವಂತೆ ಪುತ್ತೂರು ಎಸಿ ಸ್ಟೆಲ್ಲಾಗೆ ಮನವಿ ಮಾಡಿದ್ದಾರೆ.
ಇವರ ಮನವಿ ಆಲಿಸಿದ ಎಸಿ SIT ತಂಡ ಸೂಚಿಸಿದರೆ ಮಾತ್ರ ಶೋಧ ಕಾರ್ಯ ನಡೆಯುತ್ತೆ ಎಂದಿದ್ದಾರೆ.
ಹೌದು ಇಂದು 11 ನೇ ಪಾಯಿಂಟ್‌ನಲ್ಲಿ ಉತ್ಖನನ ಕಾರ್ಯ ನಡೆಯಬೇಕಿತ್ತು. ಆದ್ರೆ ದೂರುದಾರ 11ನೇ ಪಾಯಿಂಟ್ ಅಗೆಯಲು ಬಿಡದೆ
ಅದೇ ಜಾಗದಲ್ಲಿರುವ ಗುಡ್ಡದ ಮೇಲ್ಭಾಗಕ್ಕೆ SIT ಅಧಿಕಾರಿಗಳನ್ನ ಕರೆದುಕೊಂಡು ಹೋಗಿದ್ದಾನೆ.
ಇದ್ರಿಂದ SIT ಅಧಿಕಾರಿಗಳು ಒಂದು ಕ್ಷಣ ಗೊಂದಲಕ್ಕೊಳಗಾದ ಪ್ರಸಂಗ ನಡೆಯಿತು. ಮತ್ತೊಂದು ಕಡೆ ಮತ್ತೊಬ್ಬ ಹೊಸ ದೂರುದಾರ ಜಯನ್
ನಾನು ಕೂಡ 15 ವರ್ಷದ ಹಿಂದೆ ಶ* ಹೂತಿಟ್ಟಿದ್ದನ್ನ ನೋಡಿದ್ದೇನೆ, ಸ್ಥಳ ತೋರಿಸುತ್ತೇನೆ ಎಂದು ಹೇಳಿಕೆ ನೀಡುವ ಮೂಲಕ ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಕೊಟ್ಟಿದ್ದಾರೆ.
ಒಟ್ಟಾರೆ ಧರ್ಮ** ಶ* ಹೂತಿಟ್ಟ ಪ್ರಕರಣ ದಿನೇ ದಿನೇ ಕುತೂಹಲ ಕೆರಳಿಸುತ್ತಿದೆ. ದೂರುದಾರ ತೋರಿಸಿದ ಸ್ಥಳಗಳಲ್ಲಿ ಕೇವಲ 6 ನೇ ಪಾಯಿಂಟ್‌ನಲ್ಲಿ ಮಾತ್ರ ಮಾನವನ ಅವಶೇಷ ದೊರಕಿತೇ ವಿನಃ ಬೇರೆಲ್ಲೂ ಏನೂ ಸಿಕ್ಕಿಲ್ಲ.
ಒಂದು ಅವಶೇಷಗಳು ಸಿಕ್ಕಿದ್ರೂ, ಅನಾಥ ಶ*ಗಳ ದಾಖಲೆಯೇ ಇಲ್ಲದೆ ಇದು ಯಾರ ಅವಶೇಷ ಎಂದು ಪತ್ತೆ ಹಚ್ಚುವುದಾದ್ರೂ ಹೇಗೆ? ಅನ್ನೋ ಪ್ರಶ್ನೆ ಜನರನ್ನು ಕಾಡಲಾರಂಭಿಸಿದೆ.