ವಾಷಿಂಗ್ಟನ್, ಆ. 07: ಅಮೆರಿಕವು 75 ಲಕ್ಷ ಡೋಸ್ ಲಸಿಕೆಯಗಳನ್ನಷ್ಟೇ ಭಾರತಕ್ಕೆ ನೀಡಿದೆ. ಇಂತಹ ಸಮಯದಲ್ಲಿ ಬೈಡನ್ ಸರ್ಕಾರ ಜಾಗತಿಕ ಲಸಿಕಾ ಕಾರ್ಯಕ್ರಮವನ್ನು ಇನ್ನಷ್ಟು ವಿಸ್ತರಿಸಬೇಕು ಎಂದು ಭಾರತ–ಅಮೆರಿಕನ್ ಸಂಸದ ರಾಜಾ ಕೃಷ್ಣಮೂರ್ತಿ ಒತ್ತಾಯಿಸಿದ್ದಾರೆ.
ನಾವೆಲ್ಲ ಒಟ್ಟಾಗಿ ಸಾಂಕ್ರಾಮಿಕವನ್ನು ಅಂತ್ಯಗೊಳಿಸಲು ಶ್ರಮಿಸೋಣ. ಯಾವುದೇ ದೇಶದಲ್ಲಿ ಸೋಂಕು ಹೆಚ್ಚು ಸಮಯವಿದ್ದರೇ, ಇಡೀ ಜಗತ್ತಿಗೆ ಅಪಾಯ. ಹೊಸ ತಳಿಗಳು ಹುಟ್ಟಿಕೊಳ್ಳುವ ಸಾಧ್ಯತೆಗಳು ಹೆಚ್ಚು ಎಂದ ಅವರು, ‘ನೋವಿಡ್ ಕಾಯ್ದೆ’ (ಕೋವಿಡ್ನ ಹೊಸ ತಳಿ ಪ್ರಸರಣಕ್ಕೆ ಅವಕಾಶ ನೀಡದಿರುವುದು) ಜಾರಿಗೊಳಿಸಬೇಕಿದೆ ಎಂದರು.
ಭಾರತದ ಸ್ವಾತಂತ್ರ್ಯ ದಿನಾಚರಣೆಯಂದು ನಾವು ಕೋವಿಡ್ನಿಂದ ಸ್ವತಂತ್ರತೆಯನ್ನು ಘೋಷಿಸಬೇಕು. ಇದಕ್ಕಾಗಿ ಜಾಗತಿಕ ಪಾಲುದಾರಿಕೆಯೊಂದಿಗೆ ಕೋಟ್ಯಂತರ ಲಸಿಕೆ ಉತ್ಪಾದಿಸುವುದು ಅತ್ಯಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.