India : ‘ದಿ ಕಾಶ್ಮೀರ್ ಫೈಲ್ಸ್’(The Vaccine War ಸಿನಿಮಾದ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿದವರು ವಿವೇಕ್ ಅಗ್ನಿಹೋತ್ರಿ.
32 ವರ್ಷಗಳ ಹಿಂದೆ ಕಾಶ್ಮೀರದಲ್ಲಿ ನಡೆದ ಪಂಡಿತರ ವಲಸೆ ಹಾಗೂ ಅವರ ಮೇಲಿನ ದಾಳಿ ಕುರಿತು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತಯಾರಿಸಿದ್ದ ‘ದಿ ಕಾಶ್ಮೀರ್ ಫೈಲ್ಸ್’(The Vaccine War) ಬಾಕ್ಸ್ ಆಫೀಸ್‌ನಲ್ಲಿ 340 ಕೋಟಿ ರೂ.ಗೂ ಅಧಿಕ ಹಣ ಗಳಿಸಿತ್ತು.

ಈ ಸಿನಿಮಾ ಯಶಸ್ವಿಯಾದ ನಂತರ, ಎಲ್ಲರ ಗಮನವೂ ವಿವೇಕ್ ಅಗ್ನಿಹೋತ್ರಿ ಅವರ ಮುಂದಿನ ಸಿನಿಮಾದ ಮೇಲೆ ಬಿದ್ದಿತ್ತು.
ಇದೀಗ ಆ ಪ್ರಶ್ನೆಗೂ ಉತ್ತರ ಸಿಕ್ಕಿದ್ದು, ಈ ಬಾರಿ ಅವರು ವ್ಯಾಕ್ಸಿನ್(Vaccine) ಕುರಿತ ಸಿನಿಮಾ ಹೊರತರಲಿದ್ದಾರೆ.
ಕೊರೊನಾ ವ್ಯಾಕ್ಸಿನ್ ಕುರಿತು ವಿವೇಕ್ ಅಗ್ನಿಹೋತ್ರಿ ಸಿನಿಮಾ ಮಾಡಲಿದ್ದು, ಅದಕ್ಕೆ ‘ದಿ ವ್ಯಾಕ್ಸಿನ್ ವಾರ್’(The Vaccine War) ಎಂದು ಹೆಸರಿಟ್ಟಿದ್ದಾರೆ.
ಹೌದು, ನಿರ್ದೇಶಕ ವಿವೇಕ್ ಅಹ್ನಿಹೋತ್ರಿ ಗುರುವಾರದಂದು ತಮ್ಮ ಮುಂದಿನ ಚಿತ್ರ ‘ದಿ ವ್ಯಾಕ್ಸಿನ್ ವಾರ್’ ಎಂದು ಘೋಷಿಸಿದ್ದಾರೆ.
ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಮೂಲಕ ಕಮರ್ಷಿಯಲ್ ಯಶಸ್ಸನ್ನು ಗಳಿಸಿದ ನಿರ್ದೇಶಕರು ಇದೀಗ ತಮ್ಮ ಹೊಸ ಯೋಜನೆಯ ವಿವರಗಳನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : https://vijayatimes.com/pm-to-bengaluru/
“ದಿ ವ್ಯಾಕ್ಸಿನ್ ವಾರ್ ಸಿನಿಮಾವನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸಲಾಗುತ್ತಿದೆ.
ಇದು ಭಾರತವು ಈ ಬಗ್ಗೆ ಹೋರಾಡಿದೆ ಎಂದು ನಿಮಗೆ ಅರಿವೇ ಇಲ್ಲದ, ಒಂದು ಹೋರಾಟದ ನಂಬಲಾಗದ ನೈಜ ಕಥೆ.
ವಿಜ್ಞಾನ, ಧೈರ್ಯ ಮತ್ತು ಶ್ರೇಷ್ಠ ಭಾರತೀಯ ಮೌಲ್ಯಗಳಿಂದ ತುಂಬಿದೆ” ಎಂದು ಅವರು ಬರೆದುಕೊಂಡಿದ್ದಾರೆ.

ಅಲ್ಲದೆ, ಹಿಂದಿ, ಇಂಗ್ಲಿಷ್, ಗುಜರಾತಿ, ಪಂಜಾಬಿ, ಭೋಜ್‌ಪುರಿ, ಬೆಂಗಾಲಿ, ಮರಾಠಿ, ತೆಲುಗು, ತಮಿಳು, ಕನ್ನಡ, ಉರ್ದು ಮತ್ತು ಅಸ್ಸಾಮಿ ಎಂಬ 11 ಭಾಷೆಗಳಲ್ಲಿ ಮುಂದಿನ ವರ್ಷ ಆಗಸ್ಟ್ 15 ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಅಗ್ನಿಹೋತ್ರಿ ಹೇಳಿದ್ದಾರೆ.
ಈ ಸಿನಿಮಾ 11 ಭಾಷೆಗಳಲ್ಲಿ 2023ರ ಸ್ವಾತಂತ್ರ್ಯ ದಿನದಂದು ಬಿಡುಗಡೆಯಾಗಲಿದೆ. ದಯವಿಟ್ಟು ನಮ್ಮನ್ನು ಆಶೀರ್ವದಿಸಿ.
#TheVaccineWar ಎಂದು ಅವರು ಹೇಳಿದ್ದಾರೆ. ಈ ಸಂದರ್ಭದಲ್ಲಿ, ಚಿತ್ರದ ಪೋಸ್ಟರ್ ಅನ್ನು ಸಹ ನಿರ್ದೇಶಕರು ಅನಾವರಣಗೊಳಿಸಿದ್ದಾರೆ.
ಈ ಸಿನಿಮಾವನ್ನು ಅಗ್ನಿಹೋತ್ರಿ ಅವರ ಪತ್ನಿ, ನಟಿ ಪಲ್ಲವಿ ಜೋಶಿ ಅವರ ‘ಐ ಆಮ್ ಬುದ್ಧ ಪ್ರೊಡಕ್ಷನ್ಸ್’ ಮತ್ತು ಅಭಿಷೇಕ್ ಅಗರ್ವಾಲ್ ಅವರ ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಬ್ಯಾನರ್ ಮೂಲಕ ನಿರ್ಮಿಸಲಾಗಿದೆ.
- ಪವಿತ್ರ