ಮುನಿಸಿಕೊಂಡ ಗೆಳತಿಯನ್ನು ನಗಿಸುವ ವಿಧಾನಗಳಿವು

ಪ್ರೀತಿಯಲ್ಲಿ ಜಗಳ ಸಾಮಾನ್ಯ. ಆದರೆ ಅದೇ ಜಗಳ ನಿಮ್ಮ ಪ್ರೀತಿ ಮುರಿಯಲು ಕಾರಣವಾಗಬಾರದು. ಆ ಜಗಳದ ಹಿಂದಿನ ಕಾರಣವೇನು? ನಿಮ್ಮ ಸಂಗಾತಿ ಕೋಪಗೊಂಡಿರುವುದು ಏಕೆ ಎಂಬುದನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುವುದು ಉತ್ತಮ. ಇಲ್ಲವಾದಲ್ಲಿ ಕೋಪ ಮಿತಿಮೀರಿ, ಸಂಬಂಧಕ್ಕೆ ಮಾರಕವಾಗುವುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಹುಡುಗಿ ಅಥವಾ ಗೆಳತಿ ಕೋಪಗೊಂಡಿದ್ದರೆ, ಆಕೆಯನ್ನು ಶಾಂತಗೊಳಿಸಲು ಈ ಸಲಹೆಗಳನ್ನು ಅನುಸರಿಸಿ. ಇದರಿಂದ ಅವಳ ಮೊಗದಲ್ಲಿನ ಕೋಪ ಕಡಿಮೆಯಾಗಿ ನಗು ಮೂಡುವುದು.

ಕೋಪಗೊಂಡ ನಿಮ್ಮ ಗೆಳತಿಯನ್ನು ಸಮಾಧಾನಪಡಿಸುವ ಮಾರ್ಗಗಳು ಇಲ್ಲಿವೆ:

ಕೋಪದ ಕಾರಣವನ್ನು ಅರ್ಥಮಾಡಿಕೊಳ್ಳಿ:
ನಿಮ್ಮ ಸಂಗಾತಿಯ ಕೋಪವನ್ನು ಶಾಂತಗೊಳಿಸಲು, ಆಕೆ ನಿಮ್ಮ ಮೇಲೆ ಏಕೆ ಕೋಪಗೊಂಡಿದ್ದಾಳೆಂಬುದನ್ನು ಮೊದಲು ನೀವು ತಿಳಿದುಕೊಳ್ಳಬೇಕು. ಮೊದಲಿಗೆ ಅಸಮಾಧಾನದ ಕಾರಣವನ್ನು ತಿಳಿದುಕೊಳ್ಳುವ ಮೂಲಕ ಅದನ್ನು ದೂರಮಾಡಲು ಪ್ರಯತ್ನಿಸಿ. ಇದರಿಂದ ನಿಮ್ಮ ನಡುವಿದ್ದ ಭಿನ್ನಾಭಿಪ್ರಾಯಗಳು, ತಪ್ಪಾದ ತಿಳುವಳಿಕೆ ಎಲ್ಲವೂ ಕಡಿಮೆಯಾಗಿ ಆಕೆ ಸಮಾಧಾನ ಆಗಬಹುದು. ಜೊತೆಗೆ ಆ ಕೋಪಕ್ಕೆ ನೀವೇ ಕಾರಣವಾಗಿದ್ದರೆ ಆಕೆಯ ಬಳಿ ಕ್ಷಮೆ ಕೇಳಿ.

ಆಕೆಯ ಜೊತೆ ವಾದಿಸುವುದನ್ನು ತಪ್ಪಿಸಿ:
ಪ್ರೀತಿಯಾಗಲಿ ಅಥವಾ ಸ್ನೇಹವಾಗಲಿ, ಆಡುವ ಮಾತುಗಳು ವಾದಗಳಾಗಿ ಬದಲಾದಾಗ, ಸಂಬಂಧದ ಎಳೆ ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. ಆದ್ದರಿಂದ ನಿಮ್ಮ ಸ್ನೇಹಿತೆ ಅಥವಾ ಗೆಳತಿಯ ಜೊತೆಗೆ ವಾದ ಮಾಡುವುದನ್ನು ತಪ್ಪಿಸಿ. ಅದರಲ್ಲೂ ಆಕೆ ಕೋಪಗೊಂಡಿದ್ದಾಗ ವಾದ ಮಾಡುವುದರಿಂದ ಆಕೆಯ ಕೋಪ ಮತ್ತಷ್ಟು ಹೆಚ್ಚಾಗಬಹುದು. ಅದು ನಿಮ್ಮ ಸಂಬಂಧ ಮುರಿಯುವವರೆಗೂ ಮುಂದುವರಿಯಬಹುದು. ಆದ್ದರಿಂದ ವಿಚಾರಗಳನ್ನು ವಿವರಿಸಲು ಪ್ರಯತ್ನಿಸಿ ಮತ್ತು ವಾದಿಸಬೇಡಿ.

ನಗುವ ತಪ್ಪನ್ನು ಮಾಡಬೇಡಿ:
ನಿಮ್ಮ ಸಂಗಾತಿ ನಿಮ್ಮ ಮೇಲೆ ಕೋಪಗೊಂಡರೆ ಅಥವಾ ಆಕೆಯ ಸ್ವಭಾವವೇ ಆಗಾಗ ಕೋಪಗೊಳ್ಳುವುದಾಗಿದ್ದರೆ, ಅವಳ ಮುಂದೆ ನಗುವ ತಪ್ಪನ್ನು ಮಾಡಬೇಡಿ. ಹಾಗೆ ಮಾಡುವುದರಿಂದ ಅವಳ ಕೋಪವು ಮತ್ತಷ್ಟು ಹೆಚ್ಚಾಗುತ್ತದೆ. ಆಕೆ ಕೋಪಗೊಂಡಿದ್ದಾಗ ನೀವು ನಕ್ಕರೆ ಅದು ಅವಳಿಗೆ ಅಗೌರವವನ್ನು ಸೂಚಿಸುವುದು. ಆದ್ದರಿಂದ ಆಕೆಯ ಕೋಪಕ್ಕೆ ನಗುವಿನ ಮೂಲಕ ಪ್ರತಿಕ್ರಿಯಿಸಬೇಡಿ.

ಪ್ರೀತಿಯ ಅಪ್ಪುಗೆ ನೀಡಿ:
ಕೋಪಗೊಂಡ ನಿಮ್ಮ ಗೆಳತಿಯನ್ನು ತಬ್ಬಿಕೊಳ್ಳುವುದರ ಮೂಲಕ ಕೋಪವನ್ನು ವೇಗವಾಗಿ ಸಮಾಧಾನಗೊಳಿಸಬಹುದು ಎಂದು ನಂಬಲಾಗಿದೆ. ಆಕೆ ಕೋಪಗೊಂಡಿದ್ದಾಗ ಆಕೆಯನ್ನು ಮುದ್ದುಮಾಡಿ, ಪ್ರೀತಿಯಿಂದ ಮಾತನಾಡಿಸಿ, ಜೊತೆಗೆ ಮೆಲ್ಲನೆ ಅಪ್ಪಿಕೊಳ್ಳಿ. ಇದರಿಂದ ಅವಳ ಕೋಪ ಕರಗುವದರಲ್ಲಿ ಯಾವುದೇ ಸಂಶಯವಿಲ್ಲ. ನಿಮ್ಮ ಸಂಗಾತಿ ನಿಮ್ಮ ಮೇಲೆ ಕೋಪಗೊಂಡಾಗಲೆಲ್ಲಾ ಆಕೆಗೆ ಸಿಹಿ ಅಪ್ಪುಗೆ ನೀಡುತ್ತಿರಿ.

ಕೆಟ್ಟ ಅಭ್ಯಾಸಗಳನ್ನು ಬಿಡಲು ಪ್ರಯತ್ನಿಸಿ:
ಕೆಲವೊಮ್ಮೆ ನಿಮ್ಮ ತಪ್ಪು ಅಭ್ಯಾಸಗಳು ಸಹ ಗೆಳತಿಯ ಅಸಮಾಧಾನಕ್ಕೆ ಕಾರಣವಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಕೆಲವು ಕೆಟ್ಟ ಅಭ್ಯಾಸಗಳು ನಿಮ್ಮಿಬ್ಬರ ನಡುವೆ ಜಗಳಕ್ಕೆ ಕಾರಣವಾಗುವುದಿದ್ದರೆ, ಈ ಅಭ್ಯಾಸವನ್ನು ಸುಧಾರಿಸಲು ಅಥವಾ ಬಿಡಲು ಪ್ರಯತ್ನಿಸಿ. ಇದರಿಂದ ಆಕೆ ಕೋಪಮಾಡಿಕೊಳ್ಳುವುದು ತಪ್ಪುವುದು, ನಿಮ್ಮಿಬ್ಬರ ನಡುವೆ ಜಗಳವಾಗುವುದು ಕಡಿಮೆಯಾಗುವುದು.

Latest News

ದೇಶ-ವಿದೇಶ

ಒಡಿಶಾದಲ್ಲಿ ಆಘಾತಕಾರಿ ಘಟನೆ ; ಹಾಡಹಗಲೇ ವೃದ್ಧನನ್ನು ಕಂಬಕ್ಕೆ ಕಟ್ಟಿ, ಥಳಿಸಿ ಕೊಂದ ಕುಟುಂಬಸ್ಥರು!

ಕೊರಾಪುಟ್ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ಹಾಡಹಗಲೇ ವೃದ್ಧನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ತಮ್ಮ ಕುಟುಂಬಸ್ಥರೇ ಥಳಿಸಿ ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ!

ಮಾಹಿತಿ

ಕಿಡ್ನಿ ಸ್ಟೋನ್‌ ಸಮಸ್ಯೆಗೆ ಇಲ್ಲಿದೆ ನೈಸರ್ಗಿಕ ಪರಿಹಾರ ; ಈ ಸರಳ ಪರಿಹಾರ ಪಾಲಿಸಿ

ಕೆಲವು ಮನೆಮದ್ದುಗಳು(Home Remedies) ಆರಂಭಿಕ ಹಂತದ ಕಿಡ್ನಿಸ್ಟೋನ್ ಸಮಸ್ಯೆಗೆ ಪರಿಹಾರ ನೀಡುತ್ತವೆ. ಅಂತಹ ಮನೆಮದ್ದುಗಳ ವಿವರ ಇಲ್ಲಿದೆ ನೋಡಿ.

ಮಾಹಿತಿ

ದೇಹಕ್ಕೆ ಪ್ರೋಟಿನ್‌ ಕೊರತೆಯಾದ್ರೆ `ಈ’ 10 ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ

ಯುವಜನರ ದೈಹಿಕ ಬೆಳವಣಿಗೆಯಲ್ಲಿ ಪ್ರೋಟಿನ್‌ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿನ ಸ್ನಾಯುಗಳು, ಕಿಣ್ವಗಳು ಮತ್ತು ಹಾರ್ಮೋನುಗಳಿಗೆ ಪ್ರೋಟಿನ್ ಅತ್ಯಂತ ಅವಶ್ಯಕವಾಗಿದೆ.