Bay of Bengal : ಫೆಂಗಲ್ ಚಂಡಮಾರುತ (Cyclone Fengal) ಅಬ್ಬರದಿಂದ ರಾಜ್ಯದಲ್ಲಿ ಸಾಕಷ್ಟು ಮಳೆ (Lot of rain in the state) ಹಾಗು ಚಳಿಯಿಂದ ರಾಜ್ಯದ ಜನತೆ ತತ್ತರಿಸಿ ಹೋಗಿದ್ದಾರೆ. ಮುಂದಿನ 2 ವಾರಗಳಲ್ಲಿ (2 weeks) ವಾಯುಭಾರ ಕುಸಿತವಾಗಿ ಭಾರೀ ಮಳೆಯಾಗುವ (Heavy rain) ಸಂಭವ ಇದೆ ಎಂದು ಹವಾಮಾನ ಇಲಾಖೆ (Meteorological Department) ಎಚ್ಚರಿಕೆ ನೀಡಿದೆ.ಹವಾಮಾನ ತಜ್ಞ ಶ್ರೀನಿವಾಸ್ ರೆಡ್ಡಿ (Srinivas Reddy) ಮಾಹಿತಿ ನೀಡಿ ಮುಂದಿನ 10 ದಿನದಲ್ಲಿ ಬಂಗಾಳಕೊಲ್ಲಿಯಲ್ಲಿ 2 ವಾಯುಭಾರ ಕುಸಿತ (Air pressure drop) ಉಂಟಾಗುವ ಸಾಧ್ಯತೆ ಇದ್ದು,ಇದರ ಪರಿಣಾಮ ರಾಜ್ಯದಲ್ಲೂ ಭರ್ಜರಿ ಮಳೆಯಾಗಲಿದೆ (Heavy rain in the state as well) ಎಂದಿದ್ದಾರೆ.
ತಮಿಳುನಾಡಿನಿಂದ (Tamil Nadu) ಕರ್ನಾಟಕಕ್ಕೆ ಎಂಟ್ರಿ ಕೊಟ್ಟ ಫೆಂಗಲ್ ಚಂಡಮಾರುತ (Cyclone Fengal) ಅರಬ್ಬಿ ಸಮುದ್ರದತ್ತ ಸಾಗಿದೆ.ಫೆಂಗಲ್ ಚಂಡಮಾರುತದ ಆರ್ಭಟದಿಂದ ರಾಜ್ಯದ ಜನತೆ ಚಳಿ,ಮಳೆ,ಗಾಳಿಗೆ (Cold, rain, wind) ನಲುಗಿ ಹೋಗಿದ್ದಾರೆ.ಈ ಫೆಂಗಲ್ ಚಂಡಮಾರುತದದಿಂದ ಸುಧಾರಿಸಿಕೊಳ್ಳುತ್ತಿರೋ ಹೊತ್ತಲ್ಲೇ ಮತ್ತೆರಡು ಸೈಕ್ಲೋನ್ ಸಂಭವಿಸುವ ಲಕ್ಷಣ ಕಂಡುಬಂದಿದೆ.
ಬಂಗಾಳಕೊಲ್ಲಿಯಲ್ಲಿ ಮೊದಲ ವಾಯುಭಾರ ಕುಸಿತ ಉಂಟಾಗಲಿದೆ.ಇದರಿಂದ ದಕ್ಷಿಣ ಒಳನಾಡಿನ (South Inland) ಬಹುತೇಕ ಎಲ್ಲಾ ಜಿಲ್ಲೆಗಳು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಡಿಸೆಂಬರ್ 14 ಮತ್ತು 15 ರಂದು ಮಳೆಯಾಗುವ ಸಾಧ್ಯತೆ ಇದೆ. 2ನೇ ವಾಯುಭಾರ ಕುಸಿತ ಡಿಸೆಂಬರ್ 16ಕ್ಕೆ ಉಂಟಾಗಲಿದ್ದು, ಡಿಸೆಂಬರ್ 17 ಮತ್ತು 18ಕ್ಕೆ ಜೋರು ಮಳೆಯಾಗಲಿದೆ ಎಂದು ಹವಾಮಾನ ತಜ್ಞರು (Meteorologists) ಮಾಹಿತಿ ನೀಡಿದ್ದಾರೆ.