ಮುಲ್ತಾನಿ ಮಿಟ್ಟಿ ಎಂಬುದು ಹೆಚ್ಚಿನವರು ತ್ವಚೆ ರಕ್ಷಣೆಯಲ್ಲಿ ಬಳಸುವ ಒಂದು ಮನೆಮದ್ದು. ಅನೇಕ ಗುಣಗಳನ್ನು ಹೊಂದಿರುವ ಈ ಮಣ್ಣು ಚರ್ಮವನ್ನು ಶುದ್ಧೀಕರಿಸುವುದಲ್ಲದೆ, ಚರ್ಮವನ್ನು ಹೊಳೆಯುವಂತೆ ಮಾಡಲು, ಕಪ್ಪು ಕಲೆಗಳನ್ನು ತೆಗೆದುಹಾಕಲು ಮತ್ತು ತ್ವಚೆಯ ಟೋನ್ ಸುಧಾರಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ತ್ವಚೆಯಿಂದ ಎಣ್ಣೆ, ಧೂಳು ಮತ್ತು ಕೊಳೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಈ ವಿವಿಧೋದ್ದೇಶ ಮಲ್ಟಾನಿ ಮಿಟ್ಟಿಯ ನಾಲ್ಕು ಬಗೆಯ ಫೇಸ್ ಪ್ಯಾಕ್‌ಗಳನ್ನು ತಯಾರಿಸುವ ವಿಧಾನವನ್ನು ಇಂದು ನಾವು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ.
- ಮೃದು ಚರ್ಮಕ್ಕಾಗಿ ಹಸಿ ಹಾಲು ಮತ್ತು ಬಾದಾಮಿ ಜೊತೆ:
ನೀವು ಮಗುವಿನ ಮೃದು ಚರ್ಮವನ್ನು ಬಯಸಿದರೆ, ಈ ಫೇಸ್ ಪ್ಯಾಕ್ ನಿಮಗಾಗಿ. ಮುಲ್ತಾನಿ ಮಿಟ್ಟಿ ಮುಖವನ್ನು ಚೆನ್ನಾಗಿ ಸ್ವಚ್ಛಗೊಳಿಸುತ್ತದೆ. ಅದೇ ಸಮಯದಲ್ಲಿ, ಬಾದಾಮಿ ಮತ್ತು ಹಸಿ ಹಾಲನ್ನು ಬೆರೆಸಿವುದರಿಂದ ಮೃದುವಾದ ತ್ವಚೆಯನ್ನು ಪಡೆಯಲು ಸಹಾಯ ಆಗುತ್ತದೆ. ಹಚ್ಚಾ ಹಾಲು ನಮ್ಮ ಮುಖದ ಮೇಲೆ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ.
ಫೇಸ್ ಪ್ಯಾಕ್ ತಯಾರಿಸುವುದು ಹೇಗೆ?:
ಮುಲ್ತಾನಿ ಮಿಟ್ಟಿಯನ್ನು ನೀರಿನಲ್ಲಿ ನೆನೆಸಿ. ಬಾದಾಮಿ ನೆನೆಸಿ ಸಿಪ್ಪೆ ತೆಗೆದು ಹಾಲಿನೊಂದಿಗೆ ಪುಡಿಮಾಡಿ, ಮುಲ್ತಾನಿ ಮಿಟ್ಟಿಗೆ ಸೇರಿಸಿ, ಪೇಸ್ಟ್ ತಯಾರಿಸಿ. ಇದನ್ನು ಮುಖ ತೊಳೆದ ನಂತರ ಮುಖಕ್ಕೆ ಹಚ್ಚಿ. ಪೇಸ್ಟ್ ಅನ್ನು 15 ನಿಮಿಷಗಳ ಕಾಲ ಅಥವಾ ಒಣಗುವವರೆಗೆ ಮುಖದ ಮೇಲೆ ಬಿಡಿ. ತಣ್ಣೀರು ಮತ್ತು ಸ್ಪಂಜಿನಿಂದ ಉಜ್ಜುವ ಮೂಲಕ ತೆಗೆಯಿರಿ.
ಗಮನಿಸಿ – ಮೃದುವಾದ ಚರ್ಮವನ್ನು ಪಡೆಯಲು ನೀವು ವಾರಕ್ಕೆ ಎರಡು ಬಾರಿ ಈ ಫೇಸ್ ಪ್ಯಾಕ್ ಅನ್ನು ಹಾಕಬಹುದು. - ಮೊಡವೆಗಳಿಗೆ ಬೇವಿನ ಪುಡಿ ಜೊತೆ:
ಮುಲ್ತಾನಿ ಮಿಟ್ಟಿ ಚರ್ಮದ ಕಿರುಚೀಲಗಳ ಗಾತ್ರವನ್ನು ಕಡಿಮೆ ಮಾಡಲು, ಬ್ಲ್ಯಾಕ್‌ಹೆಡ್‌ಗಳು ಮತ್ತು ವೈಟ್‌ಹೆಡ್‌ಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಬೇವು ಉರಿಯೂತದ, ಉತ್ಕರ್ಷಣ ನಿರೋಧಕ ಮತ್ತು ನಂಜುನಿರೋಧಕ ಗುಣಗಳನ್ನು ಹೊಂದಿದೆ. ಈ ಪದಾರ್ಥ ಚರ್ಮದಿಂದ ಗುಳ್ಳೆಗಳನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿ.
ಪೇಸ್ ಪ್ಯಾಕ್ ತಯಾರಿಸುವುದು ಹೇಗೆ?:
2 ಚಮಚ ಮುಲ್ತಾನಿ ಮಿಟ್ಟಿ ಮತ್ತು ಒಂದು ಚಮಚ ಬೇವಿನ ಪುಡಿಯನ್ನು ಮಿಶ್ರಣ ಮಾಡಿ. ಇದಕ್ಕೆ ಒಂದು ಚಮಚ ರೋಸ್ ವಾಟರ್ ಹಾಗೂ ಅರ್ಧ ಚಮಚ ನಿಂಬೆ ರಸ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ, ಪೇಸ್ಟ್ ತಯಾರಿಸಿ. ಶದ್ಧ ನೀರಿನಿಂದ ತೊಳೆದ ಮುಖ ನಂತರ ಮುಖಕ್ಕೆ ಹಚ್ಚಿ. ಪೇಸ್ಟ್ ಅನ್ನು ಮುಖದ ಮೇಲೆ 20 ನಿಮಿಷಗಳ ಕಾಲ ಅಥವಾ ಒಣಗುವವರೆಗೆ ಬಿಡಿ. ತಣ್ಣೀರಿನಿಂದ ತೊಳೆಯಿರಿ.
ಗಮನಿಸಿ- ಮೊಡವೆ ಮುಕ್ತ ತ್ವಚೆ ಪಡೆಯಲು ನೀವು ವಾರಕ್ಕೆ ಎರಡು ಬಾರಿ ಈ ಫೇಸ್ ಪ್ಯಾಕ್ ಅನ್ನು ಅನ್ವಯಿಸಬಹುದು. - ಕಲೆಮುಕ್ತ ತ್ವಚೆಗಾಗಿ ಟೊಮಾಟೋ ಜ್ಯಾಸ್ ನೊಂದಿಗೆ :
ಟೊಮೆಟೊ ರಸ ಡೆಡ್ ಸೆಲ್ ಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಇದರ ಜೊತೆಗೆ, ಟೊಮೆಟೊದಲ್ಲಿ ಇರುವ ಉತ್ಕರ್ಷಣ ನಿರೋಧಕ ಗುಣಗಳು ಮುಖವನ್ನು ಬೆಳಗಿಸಲು ಕೆಲಸ ಮಾಡುತ್ತದೆ. ಇದನ್ನು ಮುಲ್ತಾನಿ ಮಿಟ್ಟಿಯೊಂದಿಗೆ ಬೆರೆಸಿದರೆ, ಚರ್ಮಕ್ಕೆ ಹೊಳಪು ತರುವ ಜೊತೆಗೆ ಚರ್ಮದ ಕಲೆಗಳನ್ನು ತೆಗೆದುಹಾಕಲು ಇದು ಸಹಾಯ ಮಾಡುತ್ತದೆ.
ಪೇಸ್ ಪ್ಯಾಕ್ ತಯಾರಿಸುವುದು ಹೇಗೆ?:
2 ಚಮಚ ಟೊಮೆಟೊ ರಸ, 2 ಚಮಚ ಮುಲ್ತಾನಿ ಮಣ್ಣು, 1 ಚಮಚ ಶ್ರೀಗಂಧದ ಪುಡಿ, 1 ಚಮಚ ಅರಿಶಿನ ಪುಡಿಯನ್ನು ನೀರು ಸೇರಿಸಿ ಮಿಶ್ರಣ ಮಾಡಿ, ಸ್ವಲ್ಪ ಸಮಯದ ಬಳಿಕ, ತೊಳೆದ ಮುಖಕ್ಕೆ ಪೇಸ್ಟ್ ಹಚ್ಚಿ. 15 ನಿಮಿಷಗಳ ಕಾಲ ಬಿಡಿ. ನಂತರ ನೀರಿನಿಂದ ತೊಳೆಯಿರಿ. ಇದನ್ನು ವಾರಕ್ಕೆ ಎರಡು ಬಾರಿ ಅನ್ವಯಿಸಬಹುದು.
ಗಮನಿಸಿ – ಟೊಮೆಟೊ ರಸ ಎಲ್ಲರಿಗೂ ಸರಿಹೊಂದುವುದಿಲ್ಲ. ಆದ್ದರಿಂದ ಈ ಫೇಸ್ ಪ್ಯಾಕ್ ಅನ್ನು ಅನ್ವಯಿಸುವ ಮೊದಲು, ಪ್ಯಾಚ್ ಪರೀಕ್ಷೆಯನ್ನು ಮಾಡಿ. - ಎಣ್ಣೆ ಮುಕ್ತ ತ್ವಚೆಗಾಗಿ ಶ್ರೀಗಂಧದ ಜೊತೆ:
ನೀವು ತೈಲ ಮುಕ್ತ ತ್ವಚೆಯನ್ನ ಬಯಸಿದರೆ, ಈ ಫೇಸ್ ಪ್ಯಾಕ್ ಅನ್ನು ಬಳಸಬಹುದು. ಈ ಫೇಸ್ ಪ್ಯಾಕ್ ನಿಂದ ಚರ್ಮದಿಂದ ಬಿಡುಗಡೆಯಾಗುವ ಹೆಚ್ಚುವರಿ ಎಣ್ಣೆಯನ್ನು ನಿಯಂತ್ರಿಸಬಹುದು.
ಫೇಸ್ ಪ್ಯಾಕ್ ತಯಾರಿಸುವುದು ಹೇಗೆ?
1 ಚಮಚ ಮುಲ್ತಾನಿ ಮಿಟ್ಟಿ, 1 ಚಮಚ ಶ್ರೀಗಂಧದ ಪುಡಿ, 2 ಚಮಚ ಹಸಿ ಹಾಲಿಗೆ ನೀರನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ, ಪೇಸ್ಟ್ ತಯಾರಿಸಿ. ಮುಖ ತೊಳೆದ ನಂತರ ಈ ಮಿಶ್ರಣ ಮುಖಕ್ಕೆ ಹಚ್ಚಿ, 20 ನಿಮಿಷಗಳ ಕಾಲ ಬಿಡಿ. ಒಣಗಿದ ನಂತರ, ತಣ್ಣೀರಿನಿಂದ ಮುಖವನ್ನು ತೊಳೆಯಿರಿ.
ಗಮನಿಸಿ- ತೈಲ ಮುಕ್ತ ಚರ್ಮವನ್ನು ಪಡೆಯಲು ನೀವು ವಾರಕ್ಕೆ ಎರಡು ಬಾರಿ ಈ ಫೇಸ್ ಪ್ಯಾಕ್ ಅನ್ನು ಅನ್ವಯಿಸಬಹುದು.