Health Tips: ಸಾಮಾನ್ಯವಾಗಿ ಚಹಾ ಅಥವಾ ಕಾಫಿ ಕುಡಿಯುವಾಗ ಅದರೊಂದಿಗೆ ಯಾವುದಾದರೂ ಸ್ನಾಕ್ಸ್ (Snacks) ತಿನ್ನುವುದು ನಮ್ಮೆಲ್ಲರ ರೂಢಿಯಾಗಿರುತ್ತದೆ. ಆದರೆ ಚಹಾ ಮತ್ತು ಕಾಫಿಯೊಂದಿಗೆ (Tea and Coffee) ಕೆಲವೊಂದು ಸ್ನಾಕ್ಸ್ ಳನ್ನು ತಿನ್ನಲೇ ಬಾರದು. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಚಹಾಯೊಂದಿಗೆ ಯಾವ ಸ್ನಾಕ್ಸ್ಗಳನ್ನು ತಿನ್ನಬಾರದು ಎನ್ನುವುದರ ವಿವರ ಇಲ್ಲಿದೆ.

ಪ್ರೋಟೀನ್ ಸ್ನಾಕ್ಸ್ (Protein snacks): ಚಹಾ ಅಥವಾ ಕಾಫಿಯೊಂದಿಗೆ ಪ್ರೋಟೀನ್ ಸ್ನಾಕ್ಸ್ (Protein snacks), ಸಿಟ್ರಸ್ ಹಣ್ಣುಗಳು (Citrus fruits) ಮತ್ತು ಡೈರಿ ಉತ್ಪನ್ನಗಳನ್ನು (Dairy products)ಸೇವಿಸಬಾರದು. ಏಕೆಂದರೆ ಇವುಗಳು ಅನೇಕ ರಾಸಾಯನಿಕಗಳನ್ನು (Chemicals) ಬಿಡುಗಡೆ ಮಾಡಿ ಆರೋಗ್ಯಕ್ಕೆ ಅಪಾಯಕಾರಿಯಾಗುತ್ತವೆ. ಇದರಿಂದ ಗ್ಯಾಸ್ಟ್ರಿಕ್ (Gastric), ಮಲಬದ್ಧತೆ (Constipation), ಅಜೀರ್ಣದಂತಹ (Indigestion) ಸಮಸ್ಯೆಗಳು ಉಂಟಾಗಬಹುದು.
ಕರಿದ ಪದಾರ್ಥಗಳು (Fried ingredients): ಸಾಮಾನ್ಯವಾಗಿ ಚಹಾದೊಂದಿಗೆ ಸೇವಿಸುವ ಕರಿದ ಪದಾರ್ಥಗಳನ್ನು (Fried ingredients) ಕಡಲೆ ಕಡಲೆ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಇದು ಆಮ್ಲೀಯತೆ (Acidity) ಸೃಷ್ಟಿಸುತ್ತದೆ. ಚಹಾದೊಂದಿಗೆ ಕರಿದ ಪದಾರ್ಥಗಳನ್ನು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆ (digestive system) ದುರ್ಬಲಗೊಳ್ಳುತ್ತದೆ. ಆದ್ದರಿಂದ ಚಹಾದೊಂದಿಗೆ ಉಪ್ಪು (Salt) ಅಥವಾ ಕಡಲೆ ಹಿಟ್ಟಿನಿಂದ ಮಾಡಿದ ಪದಾರ್ಥಗಳನ್ನು ಎಂದಿಗೂ ತಿನ್ನಬಾರದು.
ನಿಂಬೆಹಣ್ಣು (Lemon): ಸಿಟ್ರಿಕ್ ಅಂಶ (Citric factor) ಇರುವ ಲಿಂಬೆ ಹಣ್ಣು (Lemon fruit) ಸೇವಿಸುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ (Gastric) ಉತ್ಪತ್ತಿಯಾಗುತ್ತದೆ. ಹೀಗಾಗಿ ಯಾವುದೇ ಹುಳಿ ಆಹಾರವನ್ನು ಚಹಾದೊಂದಿಗೆ ತಿನ್ನಬಾರದು. ಇದರಿಂದಾಗಿ ಎದೆಯುರಿಯಂತಹ ಸಮಸ್ಯೆಗಳು ಉಂಟಾಗಬಹುದು.
ಮೊಟ್ಟೆ ಮತ್ತು ಮೊಳಕೆಯೊಡೆದ ಧಾನ್ಯಗಳು (Eggs and sprouted grains): ಮೊಟ್ಟೆ (Egg), ಸಲಾಡ್ (Salad) ಅಥವಾ ಮೊಳಕೆಯೊಡೆದ ಧಾನ್ಯಗಳನ್ನು (Sprouted grains) ಚಹಾ ಅಥವಾ ಕಾಫಿಯೊಂದಿಗೆ ತಿನ್ನುವುದರಿಂದ ಇದು ಪೋಷಕಾಂಶಗಳನ್ನು ನಾಶಪಡಿಸುತ್ತದೆ ಮತ್ತು ಹೊಟ್ಟೆಯ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
ಅರಿಶಿಣ (Turmeric): ಅರಿಶಿನ ಮತ್ತು ಚಹಾ ಎಲೆಗಳ ಸಂಯೋಜನೆಯು ದೇಹಕ್ಕೆ ಒಳ್ಳೆಯದಲ್ಲ. ಅರಿಶಿನವು ಅನಿಲ, ಆಮ್ಲೀಯತೆ (Acidity) ಅಥವಾ ಮಲಬದ್ಧತೆಯಂತಹ ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.