ಕೂದಲು ಉದುರುವಿಕೆ ಸಾಮಾನ್ಯವಾಗಿದ್ದರೂ, ಕೆಲವೊಮ್ಮೆ ಅತಿಯಾಗಿರುವುದು. ಇದಕ್ಕೆ ನಾನಾ ಕಾರಣಗಳಿರಬಹುದು, ಹಾರ್ಮೋನ್ ಬದಲಾವಣೆ, ಮಾಲಿನ್ಯ ಹೀಗೆ. ಪರಿಸ್ಥಿತಿ ಹೀಗಿರುವಾಘ ಕೂದಲು ಉದುರುವುದನ್ನು ತಡೆಯುವುದು ಬಹಳ ಮುಖ್ಯ. ಆದ್ದರಿಂದ ಈ ಸಮಸ್ಯೆಗೆ ಕೆಲವೊಂದು ಮನೆಮದ್ದುಗಳನ್ನು ಪ್ರಯತ್ನಿಸಬಹುದು. ಆ ಮನೆಮದ್ದುಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.
ಬೇಸಿಗೆಯಲ್ಲಿ ಕೂದಲುದುರುವುದನ್ನು ತಡೆಯಲು ಮನೆಮದ್ದುಗಳನ್ನು ಈ ಕೆಳಗೆ ನೀಡಲಾಗಿದೆ:
ತ್ರಿಫಲ: ತ್ರಿಫಲ ಮುಖ್ಯವಾಗಿ ಮೂರು ಪ್ರಮುಖ ಘಟಕಗಳ (ಅಮಲಾಕಿ, ಹರಿಟಾಕಿ ಮತ್ತು ಬಿಭಿತಾಕಿ) ಮಿಶ್ರಣವಾಗಿದೆ. ಆ ಮಿಶ್ರಣವನ್ನು ನೀರಿನೊಂದಿಗೆ ಬೆರೆಸಿ ಕೂದಲಿನ ಬೇರುಗಳಿಗೆ ಹಚ್ಚಿದಾಗ, ಅದು ನಿಮ್ಮ ಕೂದಲಿನ ಮೇಲೆ ಬಹಳ ಬೇಗನೆ ಪರಿಣಾಮ ಬೀರುತ್ತದೆ ಮತ್ತು ನಿಮ್ಮ ಕೂದಲು ಉದುರುವುದು ತ್ವರಿತವಾಗಿ ನಿಲ್ಲುವಂತೆ ಮಾಡುತ್ತದೆ. ಆದ್ದರಿಂದ ನಿಮ್ಮ ಕೂದಲು ಉದುರುತ್ತಿದ್ದರೆ ಈ ಕೂಡಲೇ ಇದನ್ನು ಪ್ರಯತ್ನಿಸಿ.
ಪಾಲಕ್: ನಿಮ್ಮ ಕೂದಲು ಉದುರುವಿಕೆಗೆ ಮುಖ್ಯ ಕಾರಣ ನಿಮ್ಮ ದೇಹದಲ್ಲಿನ ಕಬ್ಬಿಣದ ಕೊರತೆ. ಆದ್ದರಿಂದ ಆಹಾರದಲ್ಲಿ ವಿಟಮಿನ್ ಸಿ ಮತ್ತು ಕಬ್ಬಿಣ ಇರುವ ಆಹಾರ ವಸ್ತುಗಳನ್ನು ತಿನ್ನಲು ಪ್ರಾರಂಭಿಸಿ. ಇದಕ್ಕಾಗಿ ನೀವು ಪಾಲಕ್ ಸೊಪ್ಪನ್ನು ತಿನ್ನಬಹುದು. ಇದು ವಿಟಮಿನ್ ಸಿ ಮತ್ತು ಕಬ್ಬಿಣದ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ. ಇವುಗಳ ಜೊತೆಗೆ ಹಸಿರು ತರಕಾರಗಳು, ವಿಟಮಿನ್ ಸಿ ಸಮೃದ್ಧವಾಗಿರುವ ಹಣ್ಣನ್ನು ಸಹ ಸೇವಿಸಬಹುದು.
ಈರುಳ್ಳಿ: ಕೂದಲ ಸಮಸ್ಯೆಗೆ ಈರುಳ್ಳಿ ಹಲವಾರು ಯುಗಗಳಿಂದ ಬಳಸಿಕೊಂಡು ಬಂದಿರುವ ಆಹಾರ ವಸ್ತು. ಈರುಳ್ಳಿಯನ್ನು ಆಹಾರ ತಯಾರಿಕೆಗಾಗಿ ಮಾತ್ರ ಬಳಸಲಾಗುವುದಿಲ್ಲ, ಜೊತೆಗೆ ಅದರ ರಸವನ್ನು ಕೂದಲಿನ ಬೇರುಗಳಿಗೆ ಹಚ್ಚಿದಾಗ ಅದು ಕೂದಲು ಉದುರುವುದನ್ನು ನಿಲ್ಲಿಸುತ್ತದೆ. ಇದು ಕೂದಲಿನ ಬೆಳವಣಿಗೆಗೆ ಕಾರಣವಾಗುವ ಕ್ಯಾಟಲೇಸ್ ಎಂಬ ಕಿಣ್ವವನ್ನು ಹೊಂದಿರುತ್ತದೆ. ಇದು ನಿಮ್ಮ ಕೂದಲುದುರುವ ಸಮಸ್ಯೆ, ತಲೆಹೊಟ್ಟು ಮುಂತಾದ ಕೂದಲಿನ ಸಮಸ್ಯೆಯನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ.
ಜೇನುತುಪ್ಪ: ಜೇನುತುಪ್ಪವು ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ, ಆದ್ದರಿಂದ ನೀರು ಮತ್ತು ಜೇನುತುಪ್ಪವನ್ನು 9: 1 ಅನುಪಾತದಲ್ಲಿ ಬೆರಸಿ, ಆ ಮಿಶ್ರಣವನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದು ದೊಡ್ಡ ಪ್ರಮಾಣದಲ್ಲಿ ಕಡಿಮೆ ಆಗುತ್ತದೆ. ಆದರೆ ಜೇನುತುಪ್ಪ ಹಚ್ಚಿದ ಬಳಿಕ ಅದನ್ನು ಚೆನ್ನಾಗಿ ತೊಳೆಯುವುದನ್ನು ಮರೆಯಬೇಡಿ. ಇಲ್ಲವಾದಲ್ಲಿ ನಿಮ್ಮ ಕೂದಲು ಜಿಡ್ಡುಜಿಡ್ಡಾಗುತ್ತದೆ.
ಮೊಸರು : ಮೊಸರಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಬಿ 12, ವಿಟಮಿನ್ ಬಿ 2, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಇರುವ ಪ್ರೋಟೀನ್ ಇರುತ್ತದೆ. ಕೂದಲಿನ ಮಾಸ್ಕ್ ರೀತಿ ಇದನ್ನು ಹಚ್ಚುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಜೊತೆಗೆ ಮೊಸರು ಒಂದು ರೀತಿ ಕಂಡೀಷನರ್ ಹಾಗೇ ಕಾರ್ಯನಿರ್ವಹಿಸಿ, ನಿಮ್ಮ ಕೂದಲನ್ನು ಮೃದುವಾಗುವಂತೆ ಮಾಡುತ್ತದೆ.