- ಲಾಭವೂ ಬೇಕು, ಭದ್ರತೆಯೂ ಬೇಕಾ? ಈ ಫಂಡ್‌ಗಳು (Things to know before choosing a mutual fund) ನೀಡಲಿವೆ ಪರಿಹಾರ
- ಮ್ಯೂಚುವಲ್ ಫಂಡ್ ಆಯ್ಕೆ ಮಾಡುವ ಮುನ್ನ ತಿಳಿಯಲೇಬೇಕು ಮಲ್ಟಿಕ್ಯಾಪ್–ಫ್ಲೆಕ್ಸಿಕ್ಯಾಪ್–ಮಲ್ಟಿ ಅಸೆಟ್ ಅಲ್ಲಿ ಯಾವುದು ಬೆಸ್ಟ್
- ಹೂಡಿಕೆ ಗುರಿಯಂತೆ ಮಲ್ಟಿಕ್ಯಾಪ್, ಫ್ಲೆಕ್ಸಿಕ್ಯಾಪ್ ಅಥವಾ ಮಲ್ಟಿ ಅಸೆಟ್ ಫಂಡ್ ಆಯ್ಕೆ ಮಾಡುವ ವಿಧಾನ ಗೊತ್ತಿರಲಿ
ಕಳೆದ ಒಂದು ವರ್ಷದಿಂದ ಷೇರು ಮಾರುಕಟ್ಟೆ ತೀವ್ರ ಏರಿಳಿತಗಳನ್ನು ಕಾಣುತ್ತಿದೆ. ಜಾಗತಿಕ ಆರ್ಥಿಕ ಅನಿಶ್ಚಿತತೆ, ಭೌಗೋಳಿಕ (Things to know before choosing a mutual fund) ರಾಜಕೀಯ ಸಂಘರ್ಷಗಳು, ಬಡ್ಡಿದರಗಳ ಏರಿಕೆ ಮತ್ತು ವಿದೇಶಿ ಹೂಡಿಕೆದಾರರ ನಿಲುವುಗಳು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿವೆ.
ಈ ಹಿನ್ನೆಲೆ, ಚಿಲ್ಲರೆ ಹೂಡಿಕೆದಾರರು ಕೇವಲ ಒಂದೇ ರೀತಿಯ ಹೂಡಿಕೆಗೆ ಸೀಮಿತವಾಗದೇ, ವಿಭಿನ್ನ ಆಯ್ಕೆಗಳತ್ತ ಗಮನ ಹರಿಸುತ್ತಿದ್ದಾರೆ. ಅದರ ಭಾಗವಾಗಿಯೇ ಮ್ಯೂಚುವಲ್ ಫಂಡ್ ಕ್ಷೇತ್ರದಲ್ಲಿ ಮಲ್ಟಿಕ್ಯಾಪ್ (Multicap) , ಫ್ಲೆಕ್ಸಿಕ್ಯಾಪ್ (Flexicap) ಮತ್ತು ಮಲ್ಟಿ ಅಸೆಟ್ ಫಂಡ್‌ಗಳ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಆದರೆ ಈ ಮೂರು ಫಂಡ್‌ಗಳ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವುದು ಹೂಡಿಕೆ ನಿರ್ಧಾರಕ್ಕೆ ಅತ್ಯಂತ ಅಗತ್ಯವಾಗಿದೆ ಎಂದು ಹಣಕಾಸು ತಜ್ಞರು ಅಭಿಪ್ರಾಯಪಡುತ್ತಾರೆ.
ಮೊದಲನೆಯದಾಗಿ ಮಲ್ಟಿಕ್ಯಾಪ್ ಫಂಡ್‌ಗಳು ಹೂಡಿಕೆ ವೈವಿಧ್ಯತೆಗೆ ಒತ್ತು ನೀಡುವ ಈಕ್ವಿಟಿ ಆಧಾರಿತ ಫಂಡ್‌ಗಳಾಗಿವೆ. ಸೆಬಿ ನಿಯಮಾವಳಿಯಂತೆ, ಮಲ್ಟಿಕ್ಯಾಪ್ ಫಂಡ್‌ಗಳು ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್ (Mid Cap) ಮತ್ತು ಸ್ಮಾಲ್ ಕ್ಯಾಪ್ (Small Cap) ಷೇರುಗಳಲ್ಲಿ ತಲಾ ಕನಿಷ್ಠ ಶೇ.25ರಷ್ಟು ಹೂಡಿಕೆ ಮಾಡಬೇಕಾಗುತ್ತದೆ.
ಅಂದರೆ ಒಟ್ಟಾರೆ ಕನಿಷ್ಠ ಶೇ.75 ಹೂಡಿಕೆ ಈಕ್ವಿಟಿಯಲ್ಲಿ ಇರಲೇಬೇಕು. ಲಾರ್ಜ್ ಕ್ಯಾಪ್‌ಗಳು ಸ್ಥಿರತೆ (Things to know before choosing a mutual fund) ಮತ್ತು ಭದ್ರತೆಯನ್ನು ನೀಡಿದರೆ, ಮಿಡ್ ಮತ್ತು ಸ್ಮಾಲ್ ಕ್ಯಾಪ್‌ಗಳು ಹೆಚ್ಚಿನ ಬೆಳವಣಿಗೆಯ ಸಾಧ್ಯತೆಯನ್ನು ಹೊಂದಿರುತ್ತವೆ.
ಈ ಮಿಶ್ರಣದಿಂದ ದೀರ್ಘಾವಧಿಯಲ್ಲಿ ಸಮತೋಲನದ ಲಾಭ ಪಡೆಯಲು ಸಾಧ್ಯವಾಗುತ್ತದೆ. ಆದರೆ ಮಾರುಕಟ್ಟೆ ಕುಸಿತದ ಸಮಯದಲ್ಲಿ ಅಸ್ಥಿರತೆ ಹೆಚ್ಚು ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ.ಇನ್ನು ಫ್ಲೆಕ್ಸಿಕ್ಯಾಪ್ ಫಂಡ್‌ಗಳು ಮ್ಯೂಚುವಲ್ ಫಂಡ್ ಮ್ಯಾನೇಜರ್‌ಗಳಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡುವ ಹೂಡಿಕೆ ಮಾದರಿಯಾಗಿದೆ.
ಇಲ್ಲಿ ಲಾರ್ಜ್, ಮಿಡ್ ಅಥವಾ ಸ್ಮಾಲ್ ಕ್ಯಾಪ್ ಎಂಬ ಯಾವುದೇ ನಿರ್ದಿಷ್ಟ ಮಿತಿಗಳಿಲ್ಲ. ಫಂಡ್ ಮ್ಯಾನೇಜರ್ ಮಾರುಕಟ್ಟೆ ಪರಿಸ್ಥಿತಿ, ಕಂಪನಿಗಳ ಪ್ರದರ್ಶನ ಮತ್ತು ಭವಿಷ್ಯದ ಸಾಧ್ಯತೆಗಳನ್ನು ಅವಲಂಬಿಸಿ ಹೂಡಿಕೆಯನ್ನು ನಿರ್ಧರಿಸಬಹುದು.
ಆದರೆ ಒಟ್ಟಾರೆ ಶೇ.65ರಷ್ಟು ಹೂಡಿಕೆ ಈಕ್ವಿಟಿಯಲ್ಲಿ ಇರಬೇಕೆಂಬ ನಿಯಮವಿದೆ. ಈ ಕಾರಣದಿಂದ, ಅನುಭವಸಂಪನ್ನ ಫಂಡ್ ಮ್ಯಾನೇಜರ್‌ಗಳ ನಿರ್ವಹಣೆಯಲ್ಲಿರುವ ಫ್ಲೆಕ್ಸಿಕ್ಯಾಪ್ ಫಂಡ್‌ಗಳು ಮಧ್ಯಮದಿಂದ ದೀರ್ಘಾವಧಿಯ ಹೂಡಿಕೆದಾರರಿಗೆ ಆಕರ್ಷಕ ಆಯ್ಕೆಯಾಗಿ ಪರಿಣಮಿಸುತ್ತಿವೆ.
ಮೂರನೆಯದಾಗಿ, ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿರುವುದು ಮಲ್ಟಿ ಅಸೆಟ್ ಫಂಡ್‌ಗಳು. ಈ ಫಂಡ್‌ಗಳು ಕೇವಲ ಷೇರುಗಳಲ್ಲದೆ, ಡೆಟ್, ಚಿನ್ನ, ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್‌ಗಳು (REITs), ಇನ್‌ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್‌ಗಳು (InvITs) ಹಾಗೂ ಅಂತರರಾಷ್ಟ್ರೀಯ ಆಸ್ತಿಗಳಲ್ಲಿಯೂ ಹೂಡಿಕೆ ಮಾಡುತ್ತವೆ.
ನಿಯಮದಂತೆ ಕನಿಷ್ಠ ಮೂರು ವಿಭಿನ್ನ ಅಸೆಟ್ ಕ್ಲಾಸ್‌ಗಳಲ್ಲಿ ತಲಾ ಶೇ.10ರಷ್ಟು ಹೂಡಿಕೆ ಮಾಡಬೇಕು. ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಹೆಚ್ಚಿರುವ ಸಂದರ್ಭಗಳಲ್ಲಿ ಈ ರೀತಿಯ ವೈವಿಧ್ಯಮಯ ಹೂಡಿಕೆ ಅಪಾಯವನ್ನು ಕಡಿಮೆ ಮಾಡುತ್ತದೆ. ಕಡಿಮೆ ಅಸ್ಥಿರತೆ ಮತ್ತು ಸ್ಥಿರ ಆದಾಯವನ್ನು ಬಯಸುವ ಹೂಡಿಕೆದಾರರಿಗೆ ಇದು ಸೂಕ್ತ ಆಯ್ಕೆಯೆಂದು ತಜ್ಞರು ಸಲಹೆ ನೀಡುತ್ತಾರೆ.
ಒಟ್ಟಿನಲ್ಲಿ, ಮಲ್ಟಿಕ್ಯಾಪ್, ಫ್ಲೆಕ್ಸಿಕ್ಯಾಪ್ ಮತ್ತು ಮಲ್ಟಿ ಅಸೆಟ್ ಫಂಡ್‌ಗಳೆಲ್ಲವೂ ವಿಭಿನ್ನ ಉದ್ದೇಶಗಳಿಗೆ ಹೊಂದಿಕೊಂಡ ಹೂಡಿಕೆ ಮಾರ್ಗಗಳಾಗಿವೆ. ಹೆಚ್ಚು ಅಪಾಯ ಸ್ವೀಕರಿಸುವ, ದೀರ್ಘಾವಧಿ ಲಾಭವನ್ನು ಗುರಿಯಾಗಿಟ್ಟುಕೊಂಡ ಹೂಡಿಕೆದಾರರಿಗೆ ಮಲ್ಟಿಕ್ಯಾಪ್ ಮತ್ತು ಫ್ಲೆಕ್ಸಿಕ್ಯಾಪ್ ಫಂಡ್‌ಗಳು ಅನುಕೂಲಕರವಾಗಬಹುದು.
ಇನ್ನು ಭದ್ರತೆ ಮತ್ತು ಸಮತೋಲನಕ್ಕೆ ಆದ್ಯತೆ ನೀಡುವವರಿಗೆ ಮಲ್ಟಿ ಅಸೆಟ್ ಫಂಡ್ ಉತ್ತಮ ಆಯ್ಕೆಯಾಗಿದೆ. ಹೂಡಿಕೆ ಮಾಡುವ ಮೊದಲು ಸ್ವಂತ ಹಣಕಾಸು ಗುರಿ, ಅಪಾಯ ಸಹನಶೀಲತೆ ಮತ್ತು ಹೂಡಿಕೆ ಅವಧಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹಣಕಾಸು ತಜ್ಞರು ಎಚ್ಚರಿಕೆ ನೀಡುತ್ತಾರೆ.