ವರ್ಷಗಳು ಉರುಳಿದ ಹಾಗೆ ನಮ್ಮ ಜೀವನಶೈಲಿ ಕೂಡ ಬದಲಾಗುತ್ತಾ ಹೋಗುತ್ತದೆ. ಫ್ಯಾಷನ್, ಮೇಕಪ್ ಎಂದು ನಮ್ಮನ್ನು ನಾವೇ ಬದಲಾಯಿಸಿಕೊಳ್ಳುತ್ತ ಹೋಗುತ್ತೇವೆ. ಅಂತಹ ಬದಲಾವಣೆಯಲ್ಲಿ ಪ್ರಮುಖವಾದದ್ದು ಟ್ಯಾಟು. ಇಂದಿನ ದಿನಗಳಲ್ಲಿ ಕೈ, ಕಾಲು, ಬೆನ್ನು ಅನ್ನದೆ ಹಲವೆಡೆ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಮ್ಯೂಸಿಕ್, ಚಿಟ್ಟೆ ದೇವರ ಫೋಟೋ, ತಮ್ಮ ಹೆಸರು ಹೀಗೆ ವಿವಿಧ ಟ್ಯಾಟುಗಳನ್ನು ಹಾಕಲಾಗುತ್ತದೆ. ಟ್ಯಾಟೂ ಹಾಕುವುದೇನೊ ನೋಡೋಕೆ ಅಂದವಾಗಿ ಕಂಡರೂ, ಅದರಿಂದ ನಮ್ಮ ಆರೋಗ್ಯದ ಮೇಲೆ ಎಷ್ಟೋ ಅಡ್ಡ ಪರಿಣಾಮಗಳು ಬೀರುತ್ತವೆ ಎಂದು ನಿಮಗೆ ಗೊತ್ತಾ? ಇದನ್ನು ತಿಳಿಯೋಣ ಇಂದಿನ ಲೇಖನದಲ್ಲಿ.

ಟ್ಯಾಟೂ ಇಂದಿನ ಪೀಳಿಗೆಯ ಜನರನ್ನು ಅತಿ ವೇಗದಲ್ಲಿ ಅಟ್ರ್ಯಾಕ್ಟ್ ಮಾಡುತ್ತಿದೆ. ಇದನ್ನು ಹಾಕಿಸಿಕೊಳ್ಳುವುದರಿಂದ ನಾವು ಅಟ್ರ್ಯಾಕ್ಟ್ ಆಗಿ ಕಾಣುತ್ತೇವೆ ಅನ್ನುವುದು ಇಂದಿನ ಯುವಜನತೆಯ ಅಭಿಪ್ರಾಯ. ಕಲ್ಲ ಟ್ಯಾಟೂ, ಬ್ಲಡ್ ಟ್ಯಾಟೂ ಅನ್ನೋ ವಿವಿಧ ರೀತಿಯ ಟ್ಯಾಟುಗಳು ಕೂಡ ಇವೆ. ಆದರೆ ಯಾವ ರೀತಿಯ ಟ್ಯಾಟೂ ಹಾಕಿಸಿಕೊಳ್ಳುವುದರಿಂದ ನಮ್ಮ ದೇಹದ ಮೇಲೆ ಅಡ್ಡ ಪರಿಣಾಮಗಳು ಬೀರುತ್ತವೆ. ಹಾಗಿದ್ರೆ ಈ ಟ್ಯಾಟೂ ಹಾಕಿಸಿಕೊಳ್ಳುವ ಮುಂಚೆ ಏನ್ಮಾಡ್ಬೇಕು, ಮಾಡಬಾರದು ಟ್ಯಾಟೂ ಹಾಕಿದ ನಂತರ ಏನು ಮಾಡಬೇಕು, ಮಾಡಬಾರದು ಅನ್ನೋದನ್ನು ತಿಳಿಯೋಣ.
ಟ್ಯಾಟೂ ಹಾಕುವ ಮೊದಲು ಏನು ಮಾಡಬೇಕು?
ಟ್ಯಾಟೂ ಹಾಕಿಸಿಕೊಳ್ಳುವ ಮೊದಲ ದಿನ ಕೆಫೀನ್‌ಯುಕ್ತ ಪಾನೀಯಗಳನ್ನು ಕುಡಿಯಬೇಡಿ. ಅದೇ ರೀತಿ ಮದ್ಯಪಾನವನ್ನು ಕೂಡ ಸೇವಿಸಬೇಡಿ. ಏಕೆಂದರೆ ಇದರಿಂದ ಟ್ಯಾಟೂ ಹಾಕಿಸುವ ಸಮಯದಲ್ಲಿ ರಕ್ತಸ್ರಾವ ಹೆಚ್ಚಾಗುವ ಸಾಧ್ಯತೆ ಇರುತ್ತದೆ.ಟ್ಯಾಟೂ ಹಾಕಿಸುವ ಮುಂಚೆ 1 ವಾರ ಹೆಚ್ಚಾಗಿ ನೀರು ಕುಡಿಯಿರಿ. ಹೀಗೆ ಹೆಚ್ಚಾಗಿ ನೀರು ಕುಡಿಯುವುದರಿಂದ ಚರ್ಮ ಮೃದುವಾಗುತ್ತದೆ. ಆಗ ಟ್ಯಾಟೂ ಹಾಕುವ ಮುನ್ನ ಹೆಚ್ಚು ನೋವು ಅನುಭವ ಆಗುವುದಿಲ್ಲ.
ಇದಕ್ಕೂ ಮೊದಲು ನಿಮಗೆ ಟ್ಯಾಟೂ ಹಾಕುತ್ತಿರುವ ವ್ಯಕ್ತಿ ಹೊಸ ನೀಡಲ್ಲನ್ನು ಉಪಯೋಗಿಸುತ್ತಿದ್ದಾರಾ ಎಂಬುದನ್ನು ಖಚಿತ ಮಾಡಿಕೊಳ್ಳಿ. ಏಕೆಂದರೆ ಮತ್ತೊಬ್ಬರ ದೇಹಕ್ಕೆ ಚುಚ್ಚಿದ ನೀಡಲ್ಲನ್ನು ನೀವು ಬಳಸಿದರೆ ಅದರಿಂದ ಅಲರ್ಜಿಯಾಗುವ ಸಾಧ್ಯತೆ ಇರುತ್ತದೆ. ಗುಳ್ಳೆ ತುರಿಕೆ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹೀಗಾಗಿ ಇದರ ಬಗ್ಗೆ ಹೆಚ್ಚು ಗಮನ ಕೊಡುವುದು ಉತ್ತಮ.
ಟ್ಯಾಟೂ ಹಾಕಿದ ನಂತರ ಏನು ಮಾಡಬೇಕು?

ಟ್ಯಾಟೂ ಹಾಕಿಸಿಕೊಳ್ಳುವುದರಿಂದ ನಮಗೆ ಹೆಚ್ಚಾಗಿ ಕಾಡುವ ಸಮಸ್ಯೆ ಎಂದರೆ ಅಲರ್ಜಿ. ಹೀಗಾಗಿ ಇನ್ ಫೆಕ್ಷನ್ ಆಗದಂತೆ ಅವರು ಟ್ಯಾಟೂ ಹಾಕಿದ ನಂತರ ಬ್ಯಾಂಡೇಜನ್ನು ಸುತ್ತುತ್ತಾರಾ ಅನ್ನುವುದನ್ನು ಖಚಿತ ಮಾಡಿಕೊಳ್ಳಿ. ಆನಂತರ ಟ್ಯಾಟೂ ಹಾಕಿದ ಜಾಗವನ್ನು ಆ್ಯಂಟಿ ಬ್ಯಾಕ್ಟೀರಿಯಾ ಸೋಪಿನಿಂದ ಸ್ವಚ್ಛ ಮಾಡಿಕೊಳ್ಳಿ. ಈ ರೀತಿ ಸ್ವಚ್ಚ ಮಾಡುವಾಗ ಉಗುರು ಬೆಚ್ಚಗಿನ ನೀರನ್ನು ಬಳಸಿ. ಆ ನೀರನ್ನು ಒರೆಸಲು ಮೆತ್ತನೆಯ ಕಾಟನ್ ಬಟ್ಟೆಯನ್ನು ಕೂಡ ಬಳಸಿ. ಟ್ಯಾಟೂ ಹಾಕಿದ ಸ್ಥಳವನ್ನು ಜೋರಾಗಿ ಉಜ್ಜುವುದು ಒಳ್ಳೆಯದಲ್ಲ. ಏಕೆಂದರೆ ಅದರಿಂದ ತುರಿಕೆ, ಗುಳ್ಳೆಗಳು ಆಗುವ ಸಾಧ್ಯತೆ ಇರುತ್ತದೆ.
ಟ್ಯಾಟೂ ಹಾಕಿದ ನಂತರ ಕ್ರೀಮ್, ಲೋಷನ್ ಅಪ್ಲೈ ಮಾಡುವುದನ್ನು ಮರೆಯಬೇಡಿ. ಇದರಿಂದ ಸ್ಕಿನ್ ಡ್ರೈ ಆಗುವ ಬದಲು ಮೊಯಿಶ್ಚರೈಸ್ ಆಗುತ್ತದೆ. ಹೀಗೆ ಕ್ರೀಮ್ ಹಚ್ಚುವ ಅಭ್ಯಾಸವನ್ನು ಟ್ಯಾಟೂ ಹಾಕಿದ ನಂತರವೂ ಕೂಡ ಬೆಳೆಸಿಕೊಳ್ಳಿ. ಟ್ಯಾಟೂ ಹಾಕಿಸಿದ ನಂತರ ನಿಮ್ಮ ದೇಹವನ್ನು ಸೂರ್ಯನ ಶಾಖಕ್ಕೆ ಹೆಚ್ಚಾಗಿ ಒಡ್ಡಬೇಡಿ. ಏಕೆಂದರೆ ಬಣ್ಣ ಮಾಸಿ ಹೋಗುವ ಸಾಧ್ಯತೆ ಇರುತ್ತದೆ. ಅಂತಹ ಅನಿವಾರ್ಯ ಸ್ಥಿತಿ ಇದ್ದರೆ ಹೊರಗೆ ಹೋಗುವ ಮುನ್ನ ಸನ್ ಸ್ಕ್ರೀನ್ ಅನ್ನು ಹಚ್ಚುವುದು ಉತ್ತಮ.

ಟ್ಯಾಟೂ ಹಾಕಿಸಿದ ನಂತರ 3 ದಿನದ ವರೆಗೂ ಬಿಸಿನೀರಿನ ಸ್ನಾನವನ್ನು ಮಾಡಬೇಡಿ ಇದರಿಂದ ಚರ್ಮ ಕಾಂತಿ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ಮತ್ತು ತುರಿಕೆಯಂತಹ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಟ್ಯಾಟೂ ಹಾಕಿಸಿಕೊಳ್ಳುವುದು ಚೆಂದ. ಆದರೆ ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ಈ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ ಇಲ್ಲದಿದ್ದರೆ ತೊಂದರೆಗಳನ್ನು ಮೈಮೇಲೆ ಎಳೆದುಕೊಳ್ಳುವುದು ಖಂಡಿತ.