• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಲೈಫ್ ಸ್ಟೈಲ್

ಮಗುವಿನ ಮೆಮೊರಿ ಪವರ್ ಹೆಚ್ಚಿಸುವುದು ಈ ವ್ಯಾಯಾಮ!

Sharadhi by Sharadhi
in ಲೈಫ್ ಸ್ಟೈಲ್
ಮಗುವಿನ ಮೆಮೊರಿ ಪವರ್ ಹೆಚ್ಚಿಸುವುದು ಈ ವ್ಯಾಯಾಮ!
0
SHARES
0
VIEWS
Share on FacebookShare on Twitter

ಮಕ್ಕಳು ಸಾಮಾನ್ಯವಾಗಿ ದಿನವಿಡೀ ತುಂಬಾ ಸಕ್ರಿಯರಾಗಿರುತ್ತಾರೆ. ಇದು ಅವರನ್ನು ಆರೋಗ್ಯಕರವಾಗಿ ಮತ್ತು ಸದೃಢವಾಗಿಡಲು ಸಹಾಯ ಮಾಡುತ್ತದೆ. ಇದಲ್ಲದೆ, ಪ್ರತಿದಿನ ವ್ಯವಸ್ಥಿತ 10 ನಿಮಿಷಗಳ ತ್ವರಿತ ಹೈ-ಇಂಟೆನ್ಸಿಟಿ ಇಂಟರ್ವಲ್ ಟ್ರೈನಿಂಗ್ (ಎಚ್‌ಐಐಟಿ) ಸೆಷನ್ ಅವರ ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಶಿಕ್ಷಣಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ ಎಂದು ಆಕ್ಲೆಂಡ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನವೊಂದರಲ್ಲಿ ತಿಳಿದುಬಂದಿದೆ. ಹಾಗಾದರೆ ಏನಿದು ವಿಚಾರ ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ:

ಏನಿದು ಎಚ್‌ಐಐಟಿ ಸೆಷನ್?:
ಇದೊಂದು ವ್ಯಾಯಾಮ ವಿಧಾನವಾಗಿದ್ದು, ನಿಮ್ಮನ್ನು ಕಡಿಮೆ ಅವಧಿಯಲ್ಲಿ ಸಕ್ರಿಯರಾಗಲು ಮತ್ತು ಆರೋಗ್ಯವಾಗಿಡಲು ಸಹಾಯ ಮಾಡುವ ಏರೋಬಿಟಿಕ್ ಶೈಲಿ ಆಗಿದೆ. ಇದಕ್ಕೆ ಯಾವುದೇ ನಿರ್ದಿಷ್ಟ ಸಲಕರಣೆಗಳ ಅವಶ್ಯಕತೆ ಇಲ್ಲ, ಮೇಲ್ವಿಚಾರಣೆ ಅಥವಾ ಸಮಯದ ಅಗತ್ಯವೂ ಇಲ್ಲ. ವೇಗವಾಗಿ ಓಡುವುದು, ಮೆಟ್ಟಿಲು ಹತ್ತಿ-ಇಳಿಯುವುದು, ಸೈಕ್ಲಿಂಗ್ ಒಳಾಂಗಣದಲ್ಲಾದರೆ, ನಿಂತಲ್ಲೇ ಓಡುವುದು, ಕುಣಿಯುವುದು ಹೀಗೆ ನಾನಾ ವ್ಯಾಯಾಮಗಳು ಸೆಷನ್ ನಲ್ಲಿ ಸೇರಿವೆ. ನೀವು ಯಾವುದಾದರೂ ಸೆಷನ್ ಸೇರಿಕೊಂಡು ಅದರಲ್ಲಿ ಹೇಳಿಕೊಡುವ ವ್ಯಾಯಾಮವನ್ನು ಪ್ರತಿನಿತ್ಯ 10 ನಿಮಿಷ ಮಾಡಿದರೆ ಸಾಕು. ಕಡಿಮೆ ಅವಧಿಯಲ್ಲಿ ಹೆಚ್ಚು ವೇಗವಾಗಿ ಮಾಡುವುದರಿಂದ ಕ್ಯಾಲೋರಿ ಸುಡಲು ಸಹಾಯವಾಗುತ್ತದೆ ಜೊತೆಗೆ ಹೃದಯ ಮಾಡುತ್ತದೆ.

ಏನಿದು ಅಧ್ಯಯನ?:
7-13 ವರ್ಷ ವಯಸ್ಸಿನ 318 ಮಕ್ಕಳ ಬುದ್ಧಿಶಕ್ತಿಯ ಮೇಲೆ ನಿಯಮಿತವಾದ ಏರೋಬಿಕ್ ವ್ಯಾಯಾಮದ ಪರಿಣಾಮವನ್ನು ಮೌಲ್ಯಮಾಪನ ಮಾಡಲು ಸಂಶೋಧಕರು ಅಧ್ಯಯನ ನಡೆಸಿದ್ದರು. ಆಗ ಮಕ್ಕಳ ಮೆದುಳಿನ ಆರೋಗ್ಯದ ಮೇಲೆ ಎಚ್‌ಐಐಟಿ ಸೆಷನ್ ಪರಿಣಾಮ ಬೀರುತ್ತದೆ ಎಂಬುದು ತಿಳಿದುಬಂತು. ಅಧ್ಯಯನಕ್ಕಾಗಿ, ಮಕ್ಕಳಿಗೆ ಬುದ್ಧಿಶಕ್ತಿ ಮತ್ತು ಮೆದುಳಿಗೆ ಸಂಬಂಧಿಸಿದ ಕಾರ್ಯಗಳನ್ನು ನೀಡಲಾಯಿತು. ಇದನ್ನ ಆರು ತಿಂಗಳವರೆಗೆ ಪ್ರತಿ ವಾರ ನಡೆಸಲಾಗುತ್ತಿತು.

ಫಲಿತಾಂಶ:
ಅಧ್ಯಯನದ ಕೊನೆಯಲ್ಲಿ, ಪ್ರತಿದಿನ ಎಚ್‌ಐಐಟಿ ವ್ಯಾಯಾಮ ನಡೆಸಿದ ಮಕ್ಕಳು ಮೌಲ್ಯಮಾಪನ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಕಂಡುಬಂದಿದೆ. ಅಧ್ಯಯನದ ಆಧಾರದ ಮೇಲೆ, ಸಂಶೋಧಕರು ವ್ಯಾಯಾಮದ ಮಹತ್ವವನ್ನು ಒತ್ತಿಹೇಳಿದರು, ಆದರೆ ಅರಿವಿನ ಕೊರತೆಗೆ ವ್ಯಾಯಾಮವನ್ನು ಮಾತ್ರ ಪರಿಹಾರವೆಂದು ಪರಿಗಣಿಸಬಾರದು ಎಂದು ಅವರು ಹೇಳಿದರು. ವ್ಯಾಯಾಮದ ಜೊತೆಗೆ ಹಲವಾರು ವಿಷಯಗಳು ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತವೆ.

ಮೆದುಳಿನ ಶಕ್ತಿಯನ್ನು ಸುಧಾರಿಸುವ ಇತರ ಮಾರ್ಗಗಳು:
ಮಕ್ಕಳು ಉತ್ತಮ ನೆನಪಿನ ಶಕ್ತಿ ಹೊಂದಿರುವುದು ಬಹಳ ಮುಖ್ಯ. ನಿಮ್ಮ ಮಗುವಿನ ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ ಇತರ ಕೆಲವು ವಿಷಯಗಳು ಇಲ್ಲಿವೆ.

ಡಿಜಿಟಲ್ ಬಳಕೆ ಕಡಿಮೆ ಮಾಡಿ:
ಟಿವಿ, ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ. ಇದರಿಂದ ಏಕಾಗ್ರತೆಯ ಮಟ್ಟವನ್ನು ಹೆಚ್ಚಿಸಲು ಮತ್ತು ಮಾಹಿತಿಯನ್ನು ದೀರ್ಘಕಾಲದವರೆಗೆ ಹಿಡಿದಿಟ್ಟುಕೊಳ್ಳುವ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಧ್ಯಾನ ಮಾಡುವುದು:
ಧ್ಯಾನ ಅಭ್ಯಾಸ ಮಾಡುವುದರಿಂದ ಮನಸ್ಸನ್ನು ಶಾಂತಗೊಳಿಸಲು ಮತ್ತು ಅಧ್ಯಯನದಲ್ಲಿ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಧ್ವನಿ ಧ್ಯಾನ, ಲಘು ಧ್ಯಾನ ಅಥವಾ ಪಠಣವು ದಿನಚರಿಯಲ್ಲಿ ಧ್ಯಾನವನ್ನು ಸೇರಿಸಲು ಹಲವಾರು ಮಾರ್ಗಗಳಿವೆ.

ಪೋಷಕಾಂಶಯುಕ್ತ ಆಹಾರ:
ಮೆದುಳು ಸೇರಿದಂತೆ ದೇಹದಲ್ಲಿ ನಡೆಯುವ ಎಲ್ಲಾ ಪ್ರಮುಖ ಕಾರ್ಯಗಳಿಗೆ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ಆರೋಗ್ಯಕರ ಊಟ ಮಾಡುವುದರಿಂದ ಮೆಮೊರಿ ನಷ್ಟವನ್ನು ತಡೆಯಬಹುದು ಮತ್ತು ಮೆದುಳಿನ ಆರೋಗ್ಯವನ್ನು ಹೆಚ್ಚಿಸಬಹುದು.

ಪಜಲ್ ಬಿಡಿಸುವುದು:
ಒಗಟು ಅಥವಾ ಪಜಲ್ ಗಳನ್ನು ಪರಿಹರಿಸುವುದು ಮೆದುಳಿಗೆ ಸವಾಲು ಹಾಕುವ ಮತ್ತೊಂದು ಅತ್ಯುತ್ತಮ ಮಾರ್ಗವಾಗಿದೆ. ಇದು ಬುದ್ಧಿಮಟ್ಟ ಮತ್ತು ಮೆದುಳಿನ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುವ ಉತ್ತಮ ಮಾನಸಿಕ ವ್ಯಾಯಾಮವಾಗಿದೆ.

Related News

ಡೆಡ್ಲಿ ಕೆಮಿಕಲ್‌ನಿಂದ ಹಣ್ಣಾಗಿರುವ ಮಾವಿನ ಹಣ್ಣನ್ನು ಪತ್ತೆ ಹಚ್ಚುವುದು ಹೇಗೆ? ನಿಮಗಾಗಿ ಇಲ್ಲಿದೆ ಈ ಟಿಪ್ಸ್!
ಆರೋಗ್ಯ

ಡೆಡ್ಲಿ ಕೆಮಿಕಲ್‌ನಿಂದ ಹಣ್ಣಾಗಿರುವ ಮಾವಿನ ಹಣ್ಣನ್ನು ಪತ್ತೆ ಹಚ್ಚುವುದು ಹೇಗೆ? ನಿಮಗಾಗಿ ಇಲ್ಲಿದೆ ಈ ಟಿಪ್ಸ್!

May 26, 2023
ಹೆಲ್ತಿಡ್ರಿಂಕ್ಸ್ ಹಾರಿಬಲ್ ಸೀಕ್ರೇಟ್! ಅಧ್ಯಯನದಿಂದ ಬಯಲಾಯ್ತು ಹೆಲ್ತಿ ಡ್ರಿಂಕ್ಸ್ ಭಯಾನಕ ಸತ್ಯ!
ಆರೋಗ್ಯ

ಹೆಲ್ತಿಡ್ರಿಂಕ್ಸ್ ಹಾರಿಬಲ್ ಸೀಕ್ರೇಟ್! ಅಧ್ಯಯನದಿಂದ ಬಯಲಾಯ್ತು ಹೆಲ್ತಿ ಡ್ರಿಂಕ್ಸ್ ಭಯಾನಕ ಸತ್ಯ!

May 2, 2023
ಗುಚ್ಚಿ ಮಶ್ರೂಮ್ ತಿಂದವನೇ ಬಲ್ಲ ಇದರ ರುಚಿ: ಇದರ ಬೆಲೆ ಚಿನ್ನವನ್ನೇ ಮೀರಿಸುತ್ತೆ ಗೊತ್ತಾ?
Lifestyle

ಗುಚ್ಚಿ ಮಶ್ರೂಮ್ ತಿಂದವನೇ ಬಲ್ಲ ಇದರ ರುಚಿ: ಇದರ ಬೆಲೆ ಚಿನ್ನವನ್ನೇ ಮೀರಿಸುತ್ತೆ ಗೊತ್ತಾ?

April 27, 2023
2022ರಲ್ಲಿ ಅತಿ ಹೆಚ್ಚು ವಿವಾಹಗಳನ್ನು ಆಯೋಜಿಸಿದ ನಗರ ಯಾವುದು ಗೊತ್ತಾ ?
ಲೈಫ್ ಸ್ಟೈಲ್

2022ರಲ್ಲಿ ಅತಿ ಹೆಚ್ಚು ವಿವಾಹಗಳನ್ನು ಆಯೋಜಿಸಿದ ನಗರ ಯಾವುದು ಗೊತ್ತಾ ?

January 20, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.