ಈ ಸರ್ಕಾರ ಕುವೆಂಪು ಅವರನ್ನು ದೇಶದ್ರೋಹಿಗಳ ಸಾಲಿನಲ್ಲಿ ನಿಲ್ಲಿಸುತ್ತಿತ್ತು: ದಿನೇಶ್ ಗುಂಡೂರಾವ್

ಬೆಂಗಳೂರು, ಫೆ. 08: ಅನ್ನದಾತರನ್ನು ದೇಶದ್ರೋಹಿಗಳಿಗೆ ಹೋಲಿಕೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಚಿವ ದಿನೇಶ್ ಗುಂಡೂರಾವ್, ಒಂದು ವೇಳೆ ಕುವೆಂಪು ಬದುಕಿದ್ದರೆ ಈ ಸರ್ಕಾರ ಅವರನ್ನು ದೇಶದ್ರೋಹಿಗಳ ಸಾಲಿನಲ್ಲಿ ನಿಲ್ಲಿಸುತಿತ್ತು ಎಂದು ಟೀಕಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರಾಷ್ಟ್ರಕವಿ ಕುವೆಂಪು ರೈತನನ್ನು ಉಳುವ ಯೋಗಿಗೆ ಹೋಲಿಸಿದ್ದರು. ಆದರೆ ಈ ಸರ್ಕಾರ ರೈತರ ಬಗ್ಗೆ ಅತ್ಯಂತ ಲಘುವಾಗಿ ಮಾತನಾಡುತ್ತಿದೆ. ಈ ರೀತಿಯಲ್ಲಿ ರೈತನನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿರುವ ಸರ್ಕಾರ, ಕೇಡುಗಾಲಕ್ಕೆ ಅತಿಯಾದ ಬುದ್ದಿ ಎಂಬಂತೆ ವರ್ತಿಸುತ್ತಿದೆ. ಈ ಸರ್ಕಾರವನ್ನು ರೈತರೆ ಇತಿಹಾಸದ ಪುಟ ಸೇರಿಸಲಿದ್ದಾರೆ ಎಂದರು.

ಅನ್ನದಾತನನ್ನು ದೇಶದ್ರೋಹಿಗಳ ಸಾಲಿನಲ್ಲಿ ನಿಲ್ಲಿಸಿದ ಸರ್ಕಾರ ರೈತ ಪರವಾಗಿರಲು ಎಂದೂ ಸಾಧ್ಯವಿಲ್ಲ. ಕೇಂದ್ರದ ರೈತ ವಿರೋಧಿ ಧೋರಣೆಯಿಂದ ಇಂದು ಭಾರತ ಅಂತರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಅನುಭವಿಸುತ್ತಿದೆ. ಮೋದಿಯವರು ಕಾರ್ಪೋರೆಟ್ ಕಂಪೆನಿಗಳ ದಲ್ಲಾಳಿಯಂತೆ ವರ್ತಿಸುವುದು ಬಿಟ್ಟು ಜನನಾಯಕನಂತೆ ವರ್ತಿಸಲಿ ಎಂದು ಸಲಹೆ ನೀಡಿದರು.

ಕೇಂದ್ರ ಸರ್ಕಾರ ರೈತರ ಪ್ರತಿಭಟನೆ ದೀರ್ಘಕಾಲ ನಡೆಯುತ್ತಿದೆ ಎಂದರೆ ಅದರ ಗಂಭೀರತೆ ಅರಿತುಕೊಳ್ಳಬೇಕು. ದಲ್ಲಾಳಿಗಳ ಹೋರಾಟ, ನಕಲಿ ರೈತರ ಹೋರಾಟ, ದೇಶ ದ್ರೋಹಿಗಳ ಹೋರಾಟ ಎಂದು ಸರ್ಕಾರ ಸುಳ್ಳು ಪ್ರಚಾರ ಮಾಡುವುದರಲ್ಲಿ ಅರ್ಥವಿಲ್ಲ. ರೈತರ ಹೋರಾಟ ನಕಲಿ ಆಗಿದ್ದರೆ ಪ್ರಧಾನಿಯವರು ಮಾತುಕತೆಗೆ ಬನ್ನಿ ಎಂದು ಕರೆಯುತ್ತಿರುವುದು ಯಾರನ್ನು ಎಂದು ಪ್ರಶ್ನಿಸಿದ್ದಾರೆ.

ಅಹಂಕಾರ ವ್ಯಕ್ತಿತ್ವವನ್ನು ನಾಶ ಮಾಡುತ್ತದೆ. ಆದರೆ ಪ್ರಧಾನಿ ಮೋದಿಯವರ ಅಹಂಕಾರ ದೇಶವನ್ನೇ ನಾಶ ಮಾಡುತ್ತಿದೆ. ರೈತರ ಎದುರು ಪ್ರಧಾನಿಯವರ ಅಹಂಕಾರ ಪ್ರದರ್ಶನ ಒಳ್ಳೆಯದಲ್ಲ. ಮೋದಿಯವರು ಅಹಂಕಾರ ಬದಿಗಿಟ್ಟು ರೈತರ ಪಾಲಿಗೆ ಜೀವ ವಿರೋಧಿಯಾದ ಕಾನೂನುಗಳನ್ನು ರದ್ದು ಮಾಡಲಿ. ಕಾರ್ಪೋರೆಟ್ ಕಂಪೆನಿಗಳ ಜೀತದಾಳು ತಾವಲ್ಲ ಎಂದು ಸಾಬೀತುಪಡಿಸಲಿ ಎಂದು ಹೇಳಿದರು.

Latest News

ರಾಜಕೀಯ

“ಕಾಂಗ್ರೆಸ್ ಬಸ್‍ಗೆ ಎರಡು ಸ್ಟೇರಿಂಗ್” : ಸಚಿವ ಡಾ. ಸುಧಾಕರ್

“ಪ್ರಸ್ತುತ ಕಾಂಗ್ರೆಸ್ ಪಕ್ಷ ಈಗ ಡಂಬಲ್ ಡೋರ್ ಬಸ್‍ನಲ್ಲಿ ಪ್ರಯಾಣಿಸುತ್ತಿದೆ. ಈ ಬಸ್‍ನಲ್ಲಿರುವ ಅವರ ಪಕ್ಷದವರ ಪೈಕಿ ಯಾರನ್ನು ಪ್ರಥಮವಾಗಿ ಕೆಳಗಿಳಿಸುತ್ತಾರೋ ತಿಳಿಯದು.

ದೇಶ-ವಿದೇಶ

ಮನೆ ಮತ್ತು ಕಾರ್ಪೊರೇಟ್ ಕಚೇರಿಗಳ ಮೇಲೆ ಶೇ.18 ರಷ್ಟು ಜಿಎಸ್‌ಟಿ ? ; ಏನಿದು ಗೊಂದಲ ಇಲ್ಲಿದೆ ಮಾಹಿತಿ

ಹೊಸ ನಿಯಮಗಳ ಪ್ರಕಾರ, ಜಿಎಸ್‌ಟಿ ನೋಂದಾಯಿತ ಹಿಡುವಳಿದಾರನು ರಿವರ್ಸ್ ಚಾರ್ಜ್ ಮೆಕ್ಯಾನಿಸಂ (RCM) ಅಡಿಯಲ್ಲಿ ತೆರಿಗೆಯನ್ನು ಪಾವತಿಸಲು ಹೊಣೆಗಾರನಾಗಿರುತ್ತಾನೆ.

ಪ್ರಮುಖ ಸುದ್ದಿ

ತಾಜುದ್ದೀನ್ಜುನೈದೀ ಮತ್ತು  ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ಗಣ್ಯರ ಸಂತಾಪ

ಪ್ರಖ್ಯಾತ ಗಾಯಕರು, ತಮ್ಮ ಸುಸ್ವರದ ಮೂಲಕ ಕವಿ ಗೀತೆಗಳಿಗೆ ಮೆರುಗು ತಂದುಕೊಟ್ಟಿದ್ದ ಶ್ರೀ ಶಿವಮೊಗ್ಗ ಸುಬ್ಬಣ್ಣ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಗಿದೆ.