Honnali : ಶಾಸಕ ಎಂ.ಪಿ ರೇಣುಕಾಚಾರ್ಯ ಅವರ ಸಹೋದರನ ಪುತ್ರನ ಶವ ಕಾರಿನಲ್ಲಿ ಪತ್ತೆಯಾಗಿರುವುದು (This Is Pre Planned )ಇದೀಗ ಶೋಧ ಕಾರ್ಯಾಚರಣೆ ಮೂಲಕ ತಿಳಿದುಬಂದಿದೆ. ದಾವಣಗೆರೆಯ, ಕಡದಕಟ್ಟೆಯ ಸೇತುವೆ ಕೆಳಗಿನ ತುಂಗಾ ಕಾಲುವೆಯಲ್ಲಿ ಪತ್ತೆಯಾಗಿದೆ. ಇಂದು ಬೆಳಗ್ಗೆ ಸಹೋದರ ಪುತ್ರ ಇನ್ನು ಸಿಕ್ಕಿಲ್ಲ ಎಂಬುದರ ಕುರಿತು ರೇಣುಕಾಚಾರ್ಯ ಗೋಳಾಡಿ ಹೇಳಿಕೊಂಡಿದ್ದು ಹೀಗಿದೆ,
ಇದನ್ನೂ ಓದಿ : https://vijayatimes.com/chethan-over-reservation/
ನನ್ನ ಸಹೋದರನ ಮಗನನ್ನು ಪ್ಲ್ಯಾನ್ ಮಾಡಿ ಅಪಹರಣ ಮಾಡಿದ್ದಾರೆ. ಇದೊಂದು ಪೂರ್ವನಿಯೋಜಿತ ಕೃತ್ಯವಾಗಿದ್ದು,
ನನ್ನ ಮಗ ಸುರಕ್ಷಿತವಾಗಿ ಬರುತ್ತಾನೆ ಎಂಬ ನಂಬಿಕೆ ನನಗಿದೆ ಎಂದು ಬಿಜೆಪಿ ಶಾಸಕ(BJP MLA) ರೇಣುಕಾಚಾರ್ಯ(MP Renukacharya) ಹೇಳಿದ್ದಾರೆ.

ಹೊನ್ನಾಳಿಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಮಗನನ್ನು ಪ್ಲ್ಯಾನ್ ಮಾಡಿ ಅಪಹರಣ ಮಾಡಿದ್ದಾರೆ.
ಇದೊಂದು ಪೂರ್ವನಿಯೋಜಿತ ಕೃತ್ಯವಾಗಿದ್ದು, ನನ್ನ ಮಗ ಸುರಕ್ಷಿತವಾಗಿ ಬರುತ್ತಾನೆ ಎಂಬ ನಂಬಿಕೆ ಇದೆ. ನಾವು ದೇವರನ್ನು ನಂಬಿದ್ದೇವೆ. ಆ ದೇವರು ನಮ್ಮನ್ನು ಕೈಬಿಡುವುದಿಲ್ಲ.
ರಾಜ್ಯದಲ್ಲಿ ನಮ್ಮದೇ ಸರ್ಕಾರ ಆಡಳಿತದಲ್ಲಿರುವುದರಿಂದ ಈ ಕುರಿತು ಹೆಚ್ಚು ಮಾತನಾಡುವುದಿಲ್ಲ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ಇನ್ನು ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಸಹೋದರ ರಮೇಶ್ ಅವರ ಪುತ್ರ ಚಂದ್ರಶೇಖರ್ (This Is Pre Planned ) ನಾಪತ್ತೆಯಾಗಿ ನಾಲ್ಕು ದಿನಗಳೆ ಕಳೆದರು, ಯಾವುದೇ ಸುಳಿವು ಲಭ್ಯವಾಗಿಲ್ಲ.
ಇದನ್ನೂ ಓದಿ : https://vijayatimes.com/chethan-over-reservation/
ತೀವ್ರವಾಗಿ ನೊಂದಿರುವ ಶಾಸಕ ರೇಣುಕಾಚಾರ್ಯ ಪುತ್ರನನ್ನು ಹುಡುಕಿ ಕೊಡುವಂತೆ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಹೊನ್ನಾಳಿ, ಶಿವಮೊಗ್ಗ ಸೇರಿದಂತೆ ಅನೇಕ ಕಡೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಆದರೆ ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ ಎನ್ನಲಾಗುತ್ತಿದೆ.
ಇನ್ನು ಶಿವಮೊಗ್ಗಕ್ಕೆ ತೆರಳಿದ್ದ ನಾಪತ್ತೆಯಾಗಿರುವ ಚಂದ್ರಶೇಖರ್ ಕಾರು, ಸೋಮವಾರ ಹೊನ್ನಾಳಿಯ ಸುರಹೊನ್ನೆ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ವೊಂದರ ಸಿಸಿ ಕ್ಯಾಮರಾದಲ್ಲಿ ಪಾಸ್ ಆಗಿರುವ ದೃಶ್ಯ ಸೆರೆಯಾಗಿದೆ.
ಆದರೆ ಚಂದ್ರಶೇಖರ್ ಮನೆಗೆ ಬಂದಿಲ್ಲ. ಸೋಮವಾರ ರಾತ್ರಿ 11.47 ಸುಮಾರಿಗೆ ಸುರಹೊನ್ನೆ ರಸ್ತೆಯಿಂದ ಹೊನ್ನಾಳಿ ಕಡೆಗೆ ಚಂದ್ರಶೇಖರ್ ನ ಕಾರ್ ಪಾಸ್ ಆಗಿದೆ.

ಹೀಗಾಗಿ ಚಂದ್ರಶೇಖರ್ ಯಾವ ಕಡೆಗೆ ತೆರಳಿದ್ದಾನೆ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಹೀಗಾಗಿ ಇದೊಂದು ಪೂರ್ವನಿಯೋಜಿತ ಅಪಹರಣ ಎಂದು ರೇಣುಕಾಚಾರ್ಯ ಹೇಳಿದ್ದರು! ಆದ್ರೆ, ಚಂದ್ರಶೇಖರ್ ಶವ ಈಗ ಕಾಲುವೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ!
- ಮಹೇಶ್.ಪಿ.ಎಚ್