ನವದೆಹಲಿ, ಮೇ. 19: ಕೊರೊನಾವೈರಸ್ ಸೋಂಕಿನಿಂದ ಚೇತರಿಸಿಕೊಂಡ ಮೂರು ತಿಂಗಳ ನಂತರ ತಮ್ಮ ಲಸಿಕೆಗಳನ್ನು ತೆಗೆದುಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಕೋವಿಡ್ -19 ಗಾಗಿ ಲಸಿಕೆ ನಿರ್ವಹಣೆಯ ರಾಷ್ಟ್ರೀಯ ತಜ್ಞರ ಗುಂಪಿನ ಶಿಫಾರಸುಗಳನ್ನು ಸ್ವೀಕರಿಸಿ ಕೇಂದ್ರ ಸರ್ಕಾರ ಈ ಹೇಳಿಕೆ ನೀಡಿದೆ. ಲಸಿಕೆಯ ಮೊದಲ ಡೋಸ್ ಪಡೆದ ನಂತರ ಸೋಂಕಿಗೆ ಒಳಗಾಗಿದ್ದರೆ ಅಂಥವರು ತಮ್ಮ ಎರಡನೇ ಡೋಸ್ ಪಡೆಯಲು ಮೂರು ತಿಂಗಳು ಕಾಯಬೇಕು. ಪ್ಲಾಸ್ಮಾ ಚಿಕಿತ್ಸೆಯಿಂದ ಚಿಕಿತ್ಸೆ ಪಡೆದ ರೋಗಿಗಳು ತಮ್ಮ ವ್ಯಾಕ್ಸಿನೇಷನ್ ಅನ್ನು ಮೂರು ತಿಂಗಳು ಮುಂದೂಡಬೇಕು ಎಂದು ಕೇಂದ್ರ ತಿಳಿಸಿದೆ.
ಕೊವಿಶೀಲ್ಡ್ ಲಸಿಕೆಗಳ ಎರಡು ಡೋಸ್ ನಡುವಿನ ಅಂತರವನ್ನು 12 ರಿಂದ 16 ವಾರಗಳಿಗೆ ಹೆಚ್ಚಿಸುವುದರ ಜೊತೆಗೆ, ಸೋಂಕಿಗೊಳಗಾದವರು ತಮ್ಮ ವ್ಯಾಕ್ಸಿನೇಷನ್ ಅನ್ನು ಮುಂದೂಡಬೇಕು ಎಂದು ತಜ್ಞರ ಗುಂಪು ಶಿಫಾರಸು ಮಾಡಿದೆ. ಕೊವಿಶೀಲ್ಡ್ ಪ್ರಸ್ತಾಪವನ್ನು ಕೇಂದ್ರವು ಈ ಮೊದಲು ಅನುಮತಿಸಿದ್ದು ಬುಧವಾರ, ಉಳಿದ ಪ್ರಸ್ತಾಪಗಳನ್ನೂ ಸ್ವೀಕರಿಸಿದೆ.