ಕಾನೂನನ್ನು ನಿಮ್ಮ ಕೈಯಲ್ಲಿ ತೆಗೆದುಕೊಳ್ಳಿ, ಈಗ ಅಮಾನತುಗೊಂಡಿರುವ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್(T Raja Singh) ಅವರನ್ನು ಥಳಿಸಿ ಎಂದು ಮುಸ್ಲಿಮರಿಗೆ ಕಾಂಗ್ರೆಸ್ ಮುಖಂಡ ಫಿರೊಜ಼್ ಖಾನ್ ಮನವಿ ಮಾಡಿದ್ದಾರೆ.

ಪ್ರವಾದಿ ಮೊಹಮ್ಮದ್ ವಿರುದ್ಧದ ಹೇಳಿಕೆಗಾಗಿ, ಕಾಂಗ್ರೆಸ್ ನಾಯಕ ಫಿರೋಜ್ ಖಾನ್ (FIROZ KHAN) ಅವರು ರಾಜಾ ಸಿಂಗ್ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ಹೈದರಾಬಾದ್ನಲ್ಲಿ ನಡೆಯುತ್ತಿದ್ದಂತೆ ಈ ರೀತಿ ಕರೆ ಕೊಟ್ಟಿದ್ದಾರೆ.
ವೀಡಿಯೋದಲ್ಲಿ, ಫಿರೊಜ಼್ ಖಾನ್ ಅವರು “ಮುಸ್ಲಿಂ ಸಮುದಾಯದ ಹೀರೋ” ಎಂದು ಹೇಳುವ ಪ್ರವಾದಿಯ ಬಗ್ಗೆ ಹೇಳಿಕೆಗಳಿಗಾಗಿ ಕ್ಷಮೆಯಾಚಿಸಲು ಟಿ.ರಾಜಾ ಸಿಂಗ್ ಅವರಿಗೆ ಕೇಳಿದ್ದಾರೆ.
https://vijayatimes.com/russia-detains-islamic-state-terrorist/
ಟಿ ರಾಜಾ ಸಿಂಗ್ ಧ್ರುವೀಕರಣದ ರಾಜಕೀಯ ಮಾಡಲು ಬಯಸುತ್ತಾರೆ, ಅವನನ್ನು ಜೈಲಿಗೆ ಹಾಕಿ. ತಮ್ಮ ಹೇಳಿಕೆಗೆ ರಾಜಾ ಸಿಂಗ್ ಕ್ಷಮೆಯಾಚಿಸಬೇಕು. ಅವನು ಕ್ಷಮೆಯಾಚಿಸದಿದ್ದರೆ, ಹೈದರಾಬಾದ್ನಲ್ಲಿರುವ ಪ್ರತಿಯೊಬ್ಬ ಮುಸ್ಲಿಮರು ನೀವು ಅವನನ್ನು ಎಲ್ಲಿ ನೋಡಿದರೂ ಹೊಡೆಯಿರಿ ಎಂದು ನಾನು ನಿಮ್ಮನ್ನು ಮನವಿ ಮಾಡುತ್ತೇನೆ.
ನಾವು ಕಾನೂನನ್ನು ಒಮ್ಮೆ ಅಲ್ಲ, ಹಲವಾರು ಬಾರಿ ಕೈಗೆ ತೆಗೆದುಕೊಳ್ಳುತ್ತೇವೆ. ಪ್ರವಾದಿ ಮುಹಮ್ಮದ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಅವರನ್ನು ಮಂಗಳವಾರ ಬಂಧಿಸಲಾಗಿದೆ.
ರಾಜಾ ಸಿಂಗ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸೋಮವಾರ ರಾತ್ರಿ ಹೈದರಾಬಾದ್ನ ಹಲವೆಡೆ ಬೃಹತ್ ಪ್ರತಿಭಟನೆ ನಡೆಸಿದ ಬಳಿಕ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ರಾಜಾ ಸಿಂಗ್ ಅವರು ಇಸ್ಲಾಂ ಮತ್ತು ಮುಸ್ಲಿಮರ ಬಗ್ಗೆ ಆಕ್ಷೇಪಾರ್ಹ ಟೀಕೆಗಳನ್ನು ಮಾಡುವುದನ್ನು ಕೇಳಿದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವಿವಾದಗಳು ಹುಟ್ಟಿಕೊಂಡಿತು. ರಾಜಾ ಸಿಂಗ್ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಪ್ರತಿಭಟನಾಕಾರರು ತೀವ್ರ ಆಕ್ರೋಶ ಹೊರಹಾಕಿದರು.

ರಾಜಾ ಸಿಂಗ್ ಅವರನ್ನು ಮಂಗಳವಾರ ಪೊಲೀಸರು ಬಂಧಿಸಿದ್ದು, ಪ್ರವಾದಿ ಕುರಿತು ಹೇಳಿಕೆ ನೀಡಿದ ವಿಡಿಯೋ ಕುರಿತು ಪ್ರಕರಣ ದಾಖಲಿಸಲಾಗಿದೆ. ಆದಾಗ್ಯೂ, ಶೀಘ್ರದಲ್ಲೇ ಅವರಿಗೆ ಜಾಮೀನು ಕೂಡ ನೀಡಲಾಯಿತು, ಇದು ಗುಂಪನ್ನು ಮತ್ತಷ್ಟು ಕೆರಳಿಸಿದ್ದು, ವ್ಯಾಪಕ ಟೀಕೆಗೆ ಗುರಿಯಾಯಿತು.