ದೆಹಲಿ: ಕೊರೊನಾ ಸೋಂಕಿನ ಕುರಿತು ಈಗಾಗಲೇ 9 ಹೊಸ ಲಕ್ಷಣಗಳನ್ನು ಪಟ್ಟಿ ಮಾಡಿರುವ ಕೇಂದ್ರ ಇದೀಗ ಮತ್ತೆ ಮೂರು ಹೊಸ ಲಕ್ಷಣಗಳನ್ನು ತಿಳಿಸಿದೆ.
ಈ ಹಿಂದೆ ಜ್ವರ, ಶೀತ, ಕೆಮ್ಮು, ಉಸಿರಾಟದ ತೊಂದರೆ, ಆಯಾಸ, ಸ್ನಾಯು ಸೆಳೆತ, ಇಡೀ ದೇಹದ ನೋವು, ತಲೆ ನೋವು, ರುಚಿ ಮತ್ತು ವಾಸನೆ ಗ್ರಹಿಕೆ ಇಲ್ಲದಿರುವುದು, ಗಂಟಲು ಉರಿ ಲಕ್ಷಣಗಳು ಕೊರೊನಾ ಸಂಬಂದಿತ ಲಕ್ಷಣಗಳೆಂದು ಪಟ್ಟಿ ಮಾಡಿದ್ದ ಕೇಂದ್ರ, ಈಗ ಮೂಗು ಕಟ್ಟುವುದು ಮತ್ತು ಸುರಿಯುವುದು, ವಾಕರಿಕೆ, ಅತಿಸಾರ(ಭೇದಿ) ಈ ಮೂರು ಲಕ್ಷಣಗಳಿದ್ದರೂ ಕರೊನಾದ ಲಕ್ಷಣವೆಂದು ಗುರುತಿಸಿ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು (ಸಿಡಿಸಿ) ಎಚ್ಚರಿಕೆ ನೀಡಿದೆ.
ಸಿಡಿಸಿ ಇಲ್ಲಿಯವರೆಗೆ ಒಟ್ಟು 12 ಕರೊನಾ ಸೋಂಕಿನ ಲಕ್ಷಣಗಳನ್ನು ಪಟ್ಟಿ ಮಾಡಿದೆ. ಎಲ್ಲರಿಗೂ ಒಂದೇ ತರಹದ ಲಕ್ಷಣಗಳು ಕಾಣಿಸಬೇಕೆಂದು ಇಲ್ಲ. ಹಾಗೇ ಕೊವಿಡ್-19 ಕಾಯಿಲೆಯ ಗಂಭೀರತೆಯ ಪ್ರಮಾಣವೂ ಕೂಡ ಜನರಿಂದ ಜನರಿಗೆ ವ್ಯತ್ಯಾಸವಾಗುತ್ತದೆ. ಕೊರೊನಾ ಸೋಂಕಿನ ಬಗ್ಗೆ ಅಧ್ಯಯನಗಳು ಆಳವಾಗಿ ನಡೆಯುತ್ತಲೇ ಇದ್ದು, ಸಿಡಿಸಿ ಸಲ್ಲಿಸಿರುವ ಈ ಪಟ್ಟಿಯೇ ಅಂತಿಮವಲ್ಲ, ಎಂದು ಆರೋಗ್ಯ ರಕ್ಷಣಾ ಸಂಸ್ಥೆ ತಿಳಿಸಿದೆ.