ಜೇಮ್ಸ್ ಕ್ಯಾಮರೋನ್ ಅವರ ನಿರ್ದೇಶನದಲ್ಲಿ ಮೂಡಿಬಂದ ಅವತಾರ್ ದಿ ವೇ ಆಫ್ ವಾಟರ್ (thrilling movie avatar 2), ಇದೇ ಡಿಸೆಂಬರ್ 6ರಲ್ಲಿ ಬಿಡುಗಡೆ ಆಗಿ, ಡಿಸೆಂಬರ್ 16ರಂದು ಯುನೈಟೆಡ್ ಸ್ಟೇಟ್ಸ್‍ನಲ್ಲಿ ಬಿಡುಗಡೆಯಾಯಿತು.

ವಿಶ್ವದ ಚಿತ್ರರಂಗದಲ್ಲಿ ಅತೀ ಹೆಚ್ಚು ಹಣ ಗಳಿಸಿದ ಸಿನಿಮಾ ಎಂದು ಖ್ಯಾತಿ ಹೊಂದಿರುವ ಜೇಮ್ಸ್ ಕ್ಯಾಮರೋನ್‍ರವರ ಅವತಾರ್ 2 (thrilling movie avatar 2
)' ಸಿನಿಮಾವನ್ನು ಈಗ ತೆರೆ ಮೇಲೆ ನೋಡುವ ಸಮಯ ಬಂದಿದೆ.ತ್ರಿಡಿ(3D)ಯಲ್ಲಿ ಮೂಡಿ ಬಂದ ಈ ಸಿನಿಮಾ ನಿಜಕ್ಕೂ ನೋಡುಗರಿಗೆ ದೃಶ್ಯ ವೈಭವವನ್ನೆ ನೀಡಿದೆ.
ಮೂರು ವರ್ಷಗಳಕಾಲ ಶೂಟಿಂಗ್ ಮಾಡಲಾಗಿದ್ದ ಈ ಸಿನಿಮಾ, 2020ರಲ್ಲಿ ಸಿನಿಮಾದ ಬಹುತೇಕ ಕೆಲಸ ಮುಗಿದಿತ್ತು. ಬಿಡುಗಡೆಗು ಮುನ್ನವೇ ಕ್ರೇಜ್ ಅನ್ನು ಹುಟ್ಟು ಹಾಕುವುದರ ಜೊತೆಗೆ ಬಿಡುಗಡೆಯ ನಂತರವು ಸಿನಿಪ್ರಿಯರಲ್ಲಿ ಆಸಕ್ತಿಯನ್ನು ಹೆಚ್ಚಿಸಿದೆ.ಇದರ ನಿರ್ದೇಶಕರಾದ ಜೇಮ್ಸ್ ಕ್ಯಾಮರೋನ್‍ರವರು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇದನ್ನೂ ನೋಡಿ : https://youtu.be/VdfwHiJdYe0 ಸ್ಯಾಂಡಲ್‌ವುಡ್‌ನಲ್ಲಿ ಭರವಸೆ ಮೂಡಿಸಿದ ಚಿತ್ರ, ವಾಸಂತಿ ನಲಿದಾಗ.
ಅವತಾರ್ 2′ ಬಾಕ್ಸ್ ಆಫೀಸಿ(thrilling movie avatar 2)ನಲ್ಲಿ ಹೊಸ ದಾಖಲೆಯನ್ನು ಸೃಷ್ಟಿ ಮಾಡಿದೆ. ಮೊದಲ ದಿನದಂದು ಅವತಾರ್ 2' 41 ಕೋಟಿ ರೂ.ಗೂ ಹೆಚ್ಚಿನ ಕಲೆಕ್ಷನ್ ಬಂದಿದ್ದು,ಹಿಂದಿಯಲ್ಲಿ 11P ಕೋಟಿ, ಇಂಗ್ಲಿಷ್‍ಲಿ 22 ಕೋಟಿ, ತಮಿಳುನಲ್ಲಿ 2 ಕೋಟಿ,ತೆಲುಗಿನಲ್ಲಿ 5 ಕೋಟಿ ಮತ್ತು ಮಲಯಾಳಂನಲ್ಲಿ 30ಲಕ್ಷ ಕಲೆಕ್ಷನ್‍ನ್ನು ಪಡೆದುಕೊಂಡಿದೆ.
ಮೊದಲ ದಿನಕ್ಕಿಂತ ಎರಡನೇ ದಿನದಂದು ಅತೀ ಹಚ್ಚು ಕಲೆಕ್ಷನನ್ನು ಪಡೆದಿದ್ದು,80 ಕೋಟಿಗೂ ಅಧಿಕ ಕಲೆಕ್ಷನನ್ನು ಪಡೆದುಕೊಂಡಿದ್ದು ಇನ್ನು ಹೆಚ್ಚು ಕೋಟಿ ಗಳಿಸುವ ನೀರಿಕ್ಷೆ ಎಲ್ಲರಲ್ಲು ಇದೆ.
ಈ ಸಿನಿಮಾದಲ್ಲಿ ಸ್ಯಾಮ್ ವರ್ಥಿಗ್ಟನ್,ಜೊಯಿ ಸಲ್ಡಾನ ಸಿಗೌರ್ನಿ ನೇಕಾರ,ಸ್ಟೀಫನ್ ಲ್ಯಾಂಗ್ ಕೇಟ್,ವಿನ್ಸ್ಲೆಟ್ ನಟಿಸಿದ್ದಾರೆ.

350-400 ಮಿಲಿಯನ್ ಬಜೆಟ್‍ನ ಈ ಸಿನಿಮಾದ ಕಥೆ ಬಹಳಷ್ಟು ರೋಚಕವಾಗಿದೆ. ತಮ್ಮ ಭೂಮಿಯನ್ನು ಬಲವಂತವಾಗಿ ಆಕ್ರಮಿಸಿಕೊಂಡಾಗ ಮಾನವರು ನಾವಿಗಳನ್ನು
ಮತ್ತು ದಂಗೆಕೋರರು’ ಎಂದು ಕರೆಯುತ್ತಾರೆ. ಮಾಂತ್ರಿಕ ,ಕಾಲ್ಪನಿಕ ಸೆಟ್ಟಿಂಗ್‍ಗಳ ಹೊರತಾಗಿಯು,ಅವತಾರ್' ಸಾಮಾಜಿಕ-ರಾಜಕೀಯ ವಿಷಯಗಳಿಂದ ಸಂಪೂರ್ಣವಾಗಿಲ್ಲ.
ಈ ಕಥೆ ಜನಾಂಗ,ನಾಗರಿಕತೆ ಪೋಷಕರ ಮತ್ತು ಮಕ್ಕಳ ಸರಳ ಕಥೆಯ ಮೂಲಕ ಪರಿಸರ ರಕ್ಷಣೆಗಾಗಿ ಮನವಿ ಮಾಡುತ್ತದೆ.
ಈ ಸಿನಿಮಾದಲ್ಲಿ ಬರುವ ಒಂದು ದೃಶ್ಯ
” ಸುಲ್ಲಿಯರು ಒಟ್ಟಿಗೆ ಇರುವುದರ ಜೊತೆಗೆ ಸಂತೋಷವಾಗಿ ಇರುತ್ತಾರೆ ,ಇದು ನಮ್ಮ ದೊಡ್ಡ ದೌರ್ಬಲ್ಯವು ಹೌದು ಅದಲ್ಲದೆ ನಮ್ಮಗೆ ದೊಡ್ಡ ಶಕ್ತಿಯು ಹೌದು’ ಎಂದು ಸಿನಿಮಾದಲ್ಲಿ ಜಾಕ್ ಸುಲ್ಲಿ ಹೇಳುತ್ತಾರೆ.
ಇದನ್ನೂ ಓದಿ : https://vijayatimes.com/statement-on-k-sudhakar/
ಈ ಮಾತು ಕಥೆಯ ಮನೋಭಾವವನ್ನು ತಿಳಿಸುತ್ತದೆ. ಈ ಕಥೆಯನ್ನು ನೋಡಿದಾಗ ವೀಕ್ಷಕರು ಒಮ್ಮೆಯಾದರು ನೈಜ್ಯ ಜಗತ್ತಿಗೆ ಹೋದ ಹಾಗೆ ಅನ್ನಿಸುತ್ತದೆ. ನೆಲದಲ್ಲಿ ಮತ್ತು ಆಕಾಶದಲ್ಲಿ ನೀವು ಯೋಚಿಸುವುದಕ್ಕಿಂತಲು `ಅವತಾರ್ 2′ ನಿಮ್ಮನ್ನು ವಿಸ್ಮಯಗೊಳಿಸುತ್ತದೆ,ಮತ್ತು ನಮ್ಮನ್ನು ಬೆರಗುಗೊಳಿಸುತ್ತದೆ.
- ರೇಷ್ಮಾ