ತುಂಬೆ ಗಿಡವು ಆಯುರ್ವೇದ ಅಂಶಗಳನ್ನು ಹೊಂದಿದ್ದು, ಇದರ ಆರೋಗ್ಯ ಪ್ರಯೋಜನಗಳು ಬಹಳಾನೇ ಇದೆ.
ಆದರೆ ಇದರ ಸಂತತಿ ಇತ್ತೀಚಿನ ದಿನಗಳಲ್ಲಿ ನಾಶವಾಗ್ತಿದೆ. ಹಳ್ಳಿಯ ಜನರು ಸಾಮಾನ್ಯ ಶೀತ, ಜ್ವರ, ಕೆಮ್ಮು, ಕಫಕ್ಕೆ ತುಂಬೆಯ ರಸವನ್ನೇ ಉಪಯೋಗಿಸಿ ಸಣ್ಣಪುಟ್ಟ ಖಾಯಿಲೆಗಳನ್ನು ದೂರ ಮಾಡಿಕೊಳ್ಳುತ್ತಿದ್ರು. ಈ ತುಂಬೆ ಗಿಡದ ಪ್ರತಿ ಅಂಶವು ಕೂಡ ಖಾಯಿಲೆಗಳನ್ನು ಗುಣಪಡಿಸುವ ರಾಮಬಾಣವಾಗಿದೆ.

ತುಂಬೆ ಗಿಡದಿಂದ ದೊರೆಯುವ ಆರೋಗ್ಯಕರ ಲಾಭಗಳೇನು? :
ಸಾಮಾನ್ಯ, ಶೀತ, ಕೆಮ್ಮು, ಜ್ವರ, ಕಫ ಕಡಿಮೆಯಾಗುತ್ತದೆ. ತುಂಬೆಯ ರಸವನ್ನು ರುಬ್ಬಿ ಅದಕ್ಕೆ ಸ್ವಲ್ಪ ಉಪ್ಪನ್ನು ಬೆರೆಸಿ ಕುಡಿಯುವುದರಿಂದ
ಕೆಮ್ಮು, ಶೀತ, ಕಫ ಕಡಿಮೆಯಾಗುತ್ತದೆ. ಅದರಲ್ಲೂ ಮಕ್ಕಳಿಗೆ ಜೇನುತುಪ್ಪದಲ್ಲಿ ಸ್ವಲ್ಪ ತುಂಬೆರಸ ಹಾಕಿ ಕುಡಿಸಿದರೆ ಮಕ್ಕಳಿಗೆ ಗಂಟಲು ಶುದ್ದಿಯಾಗುತ್ತದೆ.

ಚರ್ಮದ ಕಾಯಿಲೆಗಳ ನಿವಾರಣೆ : ಕೆಲವರಿಗೆ ಮೈಯೆಲ್ಲ ತುರಿಕೆ ಇರುತ್ತದೆ. ಅಂಥವರು ತುಂಬೆಯನ್ನು ಜಜ್ಜಿ ಅದರ ರಸವನ್ನು ತುರಿಕೆಯ ಜಾಗಕ್ಕೆ ಹಚ್ಚುವುದರಿಂದ ತುರಿಕೆ ಸಮಸ್ಯೆ ನಿವಾರಣೆಯಾಗುತ್ತದೆ.
ದೇಹದ ಜೀರ್ಣ ಪ್ರಕ್ರಿಯೆ ಸುಲಭವಾಗುತ್ತದೆ : ತುಂಬೆಗಿಡದ ರಸವನ್ನು ಪ್ರತಿನಿತ್ಯ ಸೇವಿಸಿದರೆ ಜೀರ್ಣಕ್ರಿಯೆ ಸುಲಭವಾಗುವ ಮೂಲಕ ದೇಹವು ನಿರಾಳವಾಗುತ್ತದೆ.
ಕಣ್ಣಿನ ಸಮಸ್ಯೆ ನಿವಾರಣೆ : ಕಣ್ಣಿನ ಉರಿ, ಕಣ್ಣು ನೋವು, ಇರುವವರು ಇದರ ರಸವನ್ನು ಉಗುರು ಬೆಚ್ಚನೆಯ ನೀರಿನೊಂದಿಗೆ ಬೇರೆಸಿ, ಇದರ ರಸವನ್ನು ಕಣ್ಣಿನ ಸುತ್ತ ಹಚ್ಚುವುದರಿಂದ ಕಣ್ಣಿನ ಉರಿ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ ಕಣ್ಣು ಕೂಡ ಆರೋಗ್ಯತವಾಗಿರುತ್ತದೆ.

ಮದುಮೇಹ ನಿವಾರಣೆ : ತುಂಬೆಯನ್ನು ಜಜ್ಜಿ ಆ ರಸಕ್ಕೆ ಸ್ವಲ್ಪ ಕಾಳುಮೆಣಸು , ಜೀರಿಗೆ, ಉಪ್ಪನ್ನು ಬೆರೆಸಿ ಪ್ರತಿನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಮದುಮೇಹ ನಿವಾರಣೆ ಮಾಡಬಹುದು.
ಕೀಲುನೋವು ಸಮಸ್ಯೆಗೆ ಉತ್ತಮ : ತುಂಬೆರಸ ಮತ್ತು ಎಳ್ಳೆಣ್ಣೆಯನ್ನು ಕುದಿಸಿ ಅದನ್ನು ಸೋಸಿ ಎಣ್ಣೆ ತೆಗೆದು ಅದಕ್ಕೆ ಸ್ವಲ್ಪ ಅರಿಶಿಣ ಮತ್ತು ಕರ್ಪೂರ ಮಿಕ್ಸ್ ಮಾಡಿ ಅದನ್ನು ಒಂದು ಬಾಕ್ಸ್ ನಲ್ಲಿ ಶೇಖರಣೆ ಮಾಡಿ ಕಾಲಿಗೆ ಹಚ್ಚುವುದರಿಂದ ಕೀಲು ನೋವು ಮಾಯವಾಗುತ್ತದೆ.

ರೋಗ ನಿರೋದಕ ಶಕ್ತಿ ಹೆಚ್ಚುತ್ತದೆ : ಮನುಷ್ಯನ ದೇಹಕ್ಕೆ ಯಾವಾಗ ಬೇಕಾದರೂ ರೋಗ ಆವರಿಸಬಹುದು. ಹೀಗಾಗಿ ಪ್ರತಿನಿತ್ಯವೂ ತುಂಬೆಯ ಕಷಾಯ ಕುಡಿಯುವುದರಿಂದ ದೇಹದಲ್ಲಿ ರೋಗನಿರೋದಕ ಶಕ್ತಿ ಹೆಚ್ಚಾಗುತ್ತದೆ. ಜ್ವರ ಕಡಿಮೆಯಾಗುತ್ತದೆ.
- Sowjanya