Health : ಥೈರಾಯ್ಡ್ ಸಮಸ್ಯೆ (Disease) ಇಂದು ಅನೇಕರನ್ನು ಕಾಡುತ್ತಿದೆ. ಅದರಲ್ಲೂ ಈ ಸಮಸ್ಯೆ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಈ ಕುರಿತು ಸರಿಯಾದ ತಿಳುವಳಿಕೆಯ ಕೊರತೆಯೂ ಸಾಮಾನ್ಯ ಜನರಿಗಿದೆ.
ಇನ್ನು ಥೈರಾಯ್ಡ್ನ(Thyroid Symptoms) ರೋಗಲಕ್ಷಣಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಬಹುದು.

ಹೈಪರ್ ಥೈರಾಯ್ಡಿಸಮ್ ಮತ್ತು ಹೈಪೋಥೈರಾಯ್ಡಿಸಮ್. ಈ ಎರಡರ ಸಾಮಾನ್ಯ ಲಕ್ಷಣಗಳ ವಿವರ ಇಲ್ಲಿದೆ ನೋಡಿ.
- ಹೈಪರ್ ಥೈರಾಯ್ಡಿಸಮ್ನ ಲಕ್ಷಣಗಳು
- ಸ್ನಾಯು ದೌರ್ಬಲ್ಯ ಮತ್ತು ನಡುಕ
- ಅನಿಯಮಿತ ಋತುಚಕ್ರ
- ತೂಕ ಕಳೆದುಕೊಳ್ಳುವುದು
- ದೃಷ್ಟಿ ತೊಂದರೆ
- ಆತಂಕ, ಕಿರಿಕಿರಿ ಮತ್ತು ಹೆದರಿಕೆ ಅನುಭವ
- ನಿದ್ರಾಹೀನತೆ
- ಹೈಪೋಥೈರಾಯ್ಡಿಸಮ್ನ ಲಕ್ಷಣಗಳು :
- ಹೃದಯ ಬಡಿತ ಹೆಚ್ಚಳ
- ಹಸಿವು ಹೆಚ್ಚಾಗುವುದು
- ಅತಿಯಾದ ಆಯಾಸ
- ಒಣ ಮತ್ತು ಒರಟಾದ ಕೂದಲು
- ನಿದ್ರಾಹೀನತೆ
- ಅನಗತ್ಯ ತೂಕ ಹೆಚ್ಚಳ
- ಅತಿಸಾರ
- ಅತಿಯಾಗಿ ಬೆವರುವುದು
- ಮೂಡ್ ಸ್ವಿಂಗ್ ಮತ್ತು ಕಿರಿಕಿರಿ
ಥೈರಾಯ್ಡ್ ಸಮಸ್ಯೆಯಿಂದ ದೇಹದ ತೂಕ ಹೆಚ್ಚುತ್ತಿದೆ ಎಂದಾದರೆ, ಈ ಕೆಳಗಿನ ಪದ್ದತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ತೂಕವನ್ನು ನಿಯಂತ್ರಿಸಬಹುದು.
ಇದನ್ನೂ ಓದಿ : https://vijayatimes.com/cricket-umpire-asad-rauf-passed-away/
- ಬೆಳಿಗ್ಗೆ ಬಿಸಿ ನೀರಿಗೆ ನಿಂಬೆ ರಸ, ಜೇನುತುಪ್ಪವನ್ನು ಸೇರಿಸಿ ಸೇವಿಸಿ.
- ದಾಳಿಂಬೆ ಬೀಜದ ಸಲಾಡ್ ಅಥವಾ ಚಿಯಾ ಬೀಜಗಳ ಸಲಾಡ್ ಸೇವಿಸಿ
- ಬೇಯಿಸಿದ ಕಾಳುಗಳನ್ನು ಹೆಚ್ಚು ಸೇವಿಸಬೇಕು.
- ಮಧ್ಯಾಹ್ನದ ಊಟಕ್ಕೆ 1 ಬೌಲ್ ಓಟ್ಸ್, 2 ಮಲ್ಟಿ ಗ್ರೇನ್ ಚಪಾತಿ, 1 ಬೌಲ್ ದಾಲ್/ಮೊಸರು ಮತ್ತು ಬೇಯಿಸಿದ ತರಕಾರಿಯನ್ನು ಸೇವಿಸಬಹುದು.
- ಗ್ರೀನ್ ಟೀ ಸೇವಿಸಿ.
- ಸಂಜೆಯ ತಿಂಡಿಗಾಗಿ ಒಣ ಹಣ್ಣುಗಳು, ಮೊಳಕೆ ಕಾಳು ಸೇವಿಸಿ.
- ರಾತ್ರಿ ಊಟಕ್ಕೆ ಮೊದಲು ಒಂದು ಪ್ಲೇಟ್ ಹಸಿರು ತರಕಾರಿ ಸೇವಿಸಿ.
- ರಾತ್ರಿ ಮಲಗುವ ಮುನ್ನ ಒಂದು ಕಪ್ ಬೆಚ್ಚಗಿನ ನೀರಿಗೆ ನಿಂಬೆ ರಸವನ್ನು ಸೇರಿಸಿ ಸೇವಿಸಿ.