- ಕರ್ನಾಟಕದಲ್ಲಿ ಹುಲಿ ಸಂರಕ್ಷಣೆ ದೊಡ್ಡ ಸವಾಲು
- ಬಂಡೀಪುರ-ನಾಗರಹೊಳೆ ಹಾಟ್‌ಸ್ಪಾಟ್
- ನೈಸರ್ಗಿಕ ಕಾರಣಕ್ಕಿಂತ ಬೇಟೆ ಮತ್ತು ವಿಷಪ್ರಯೋಗವೆ ಹೆಚ್ಚು
Bengaluru: ಕರ್ನಾಟಕ ರಾಜ್ಯವು ದೇಶದಲ್ಲಿ ಹುಲಿ ಸಂರಕ್ಷಣೆಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ರಾಜ್ಯದ ಬಂಡೀಪುರ, ನಾಗರಹೊಳೆ, ಭದ್ರಾ,
ದಾಂಡೇಲಿ-ಅಂಶಿ ಮತ್ತು ಬಿಳಿಗಿರಿ ರಂಗನಾಥ ದೇವಾಲಯ (BRT) ಹುಲಿ ಸಂರಕ್ಷಿತ ಪ್ರದೇಶಗಳು ವನ್ಯಜೀವಿ ಪ್ರೇಮಿಗಳ ಗಮನ ಸೆಳೆದಿವೆ.
ಆದರೆ ಕಳೆದ ಐದು ವರ್ಷಗಳಲ್ಲಿ (2020–2025) ಹುಲಿಗಳ ಸಾವಿನ ಅಂಕಿಅಂಶಗಳು ಸಂರಕ್ಷಣಾ ಕ್ಷೇತ್ರಕ್ಕೆ(Conservation area) ಗಂಭೀರ ಸವಾಲಾಗಿ ಪರಿಣಮಿಸಿವೆ.
ಅರಣ್ಯ ಇಲಾಖೆಯ(Forest Department) ವರದಿ ಪ್ರಕಾರ, ಈ ಅವಧಿಯಲ್ಲಿ ಒಟ್ಟು 75 ಹುಲಿಗಳು ಸಾ*ಗೀಡಾಗಿದ್ದು, ಇದರಲ್ಲಿ 62 ನೈಸರ್ಗಿಕ ಕಾರಣಗಳಿಂದ
ಮತ್ತು 13 ಅಸ್ವಾಭಾವಿಕ ಕಾರಣಗಳಿಂದ ಪ್ರಾಣ ಕಳೆದುಕೊಂಡಿವೆ. ಇನ್ನು ರಾಜ್ಯದ ಅತಿ ದೊಡ್ಡ ಹುಲಿ ಸಂರಕ್ಷಿತ ಪ್ರದೇಶವಾದ ಬಂಡೀಪುರದಲ್ಲಿ 22 ಹುಲಿಗಳ ಸಾ* ಸಂಭವಿಸಿದೆ.

ಅದೇ ರೀತಿ ನಾಗರಹೊಳೆಯಲ್ಲಿ(Nagarhole) 26 ಹುಲಿಗಳ ಸಾ*ನ್ನು ದಾಖಲು ಮಾಡಲಾಗಿದೆ. ಈ ಎರಡೂ ಪ್ರದೇಶಗಳಲ್ಲಿ ಸಂಭವಿಸಿದ ಸಾ*ಗಳೇ ರಾಜ್ಯದ ಒಟ್ಟು ಸಾ*ನ ಎರಡಮೂರನೇ ಭಾಗವನ್ನು ಒಳಗೊಂಡಿವೆ.
ಬಿಆರ್‌ಟಿ ಸಂರಕ್ಷಣಾ ವಲಯದಲ್ಲಿ 8 ಹುಲಿಗಳು ಮತ್ತು ಮಲೆ ಮಹದೇಶ್ವರ ಬೆಟ್ಟಗಳಲ್ಲಿ(Male Mahadeshwar hill) 5 ಹುಲಿಗಳು ಸಾ*ಗೀಡಾಗಿವೆ. ಇವುಗಳ ಹೊರತಾಗಿ ಭದ್ರಾ ಮತ್ತು ದಾಂಡೇಲಿ-ಅಂಶಿ ಪ್ರದೇಶಗಳಲ್ಲಿಯೂ ಕೆಲ ಸಾವುಗಳು ದಾಖಲಾಗಿವೆ.
ಅರಣ್ಯ ಸಚಿವ ಈಶ್ವರ್ ಖಂಡ್ರೆ(Ishwar Khandre) ಅವರು ಹೇಳಿರುವ ಪ್ರಕಾರ, ಸಾ*ಗೀಡಾದ 62 ಹುಲಿಗಳು ಮುಖ್ಯವಾಗಿ ವಯೋಸಹಜ ಕಾರಣಗಳಿಂದ,
ರೋಗಗಳಿಂದ ಅಥವಾ ಹುಲಿಗಳ ನಡುವಿನ ಸಂಘರ್ಷದಿಂದ ಮೃ*ಪಟ್ಟಿವೆ. ವಯಸ್ಸಾದ ಹುಲಿಗಳು ದೇಹದ ಬಲ ಕಳೆದುಕೊಂಡು ರೋಗಬಾಧಿತರಾಗುವುದು ಸಾಮಾನ್ಯ.
ಅಲ್ಲದೆ, ಹುಲಿಗಳ ನಡುವೆ ಆಹಾರ ಮತ್ತು ಪ್ರದೇಶಕ್ಕಾಗಿ ನಡೆಯುವ ಹೋರಾಟವು ಕೆಲವೊಮ್ಮೆ ಜೀವಹಾನಿಗೂ ಕಾರಣವಾಗುತ್ತದೆ.ಅಸ್ವಾಭಾವಿಕ ಸಾ*ನ ಪ್ರಕರಣಗಳು ಅರಣ್ಯ ಇಲಾಖೆ ಮತ್ತು ವನ್ಯಜೀವಿ ಕಾರ್ಯಕರ್ತರಲ್ಲಿ ಭಾರಿ ಆತಂಕ ಮೂಡಿಸಿವೆ.
- ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಷಪ್ರಯೋಗದಿಂದ 5 ಹುಲಿಗಳ ಸಾ*ಗೆ ಕಾರಣವಾಯಿತು. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಹಸುವಿನ ಕಳೇಬರದಲ್ಲಿ ರಾಸಾಯನಿಕ ಮಿಶ್ರಣ ಮಾಡಿ ಸೇಡು ತೀರಿಸಿಕೊಂಡಿರುವುದು ಪತ್ತೆಯಾಯಿತು.
- ನಾಗರಹೊಳೆ ಹಾಗೂ ಬಂಡೀಪುರದಲ್ಲಿ ತಲಾ ಒಂದು ಹುಲಿ ಬಲೆಗೆ ಸಿಕ್ಕಿ ಮೃ*ಪಟ್ಟಿವೆ.
- ಒಂದು ಹುಲಿ ವಿದ್ಯುತ್ ಶಾಕ್‌ಗೆ ಬ*ಯಾಗಿದ್ದು,
- ನಾಲ್ಕು ಹುಲಿಗಳು ಬೇಟೆಗಾರರ ಗುಂಡಿಗೆ ಬ*ಯಾದ ಪ್ರಕರಣಗಳು ದಾಖಲಾಗಿವೆ.
- ಮೈಸೂರಿನಲ್ಲಿ ಕೇವಲ ಒಂದು–ಎರಡು ವರ್ಷ ವಯಸ್ಸಿನ ಎಳೆಯ ಗಂಡು ಹುಲಿಯ ಬೇಟೆ ಪ್ರಕರಣವೂ ವರದಿಯಾಗಿದೆ.
ಈ ಅಂಕಿಅಂಶಗಳು ಕರ್ನಾಟಕದ ಹುಲಿ ಸಂರಕ್ಷಣೆಗೆ ಗಂಭೀರ ಎಚ್ಚರಿಕೆಯ ಘಂಟೆಯಂತಿವೆ. ನೈಸರ್ಗಿಕ ಸಾ*ನ್ನು ಸಂಪೂರ್ಣ ತಡೆಯಲು ಸಾಧ್ಯವಿಲ್ಲದಿದ್ದರೂ,
ಅಸ್ವಾಭಾವಿಕ ಸಾ*ನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದು ಅತ್ಯಂತ ಅಗತ್ಯ. ಅರಣ್ಯ ಇಲಾಖೆ ಈಗಾಗಲೇ ನಿಗಾವಹಣ ಹೆಚ್ಚಿಸಿದ್ದು,
ಇದನ್ನು ಓದಿ : ಚಾಮರಾಜನಗರದಲ್ಲಿ ಮತ್ತೆ 2 ಹುಲಿ ಮರಿಗಳು ಸಾ*, ಕಾವೇರಿ ವನ್ಯಜೀವಿ ಧಾಮದಲ್ಲಿ ದುರಂತ, ತಾಯಿಯಿಂದ ಬೇರ್ಪಟ್ಟು ಹಾಲಿಲ್ಲದೆ ಸಾ*
ಬೇಟೆಗಾರರ ವಿರುದ್ಧ ತೀವ್ರ ಕಾನೂನು ಕ್ರಮ ಕೈಗೊಳ್ಳುತ್ತಿದೆ. ಹುಲಿಗಳ ವಾಸಸ್ಥಳಗಳಲ್ಲಿ ಸಿಸಿಟಿವಿ, ಡ್ರೋನ್‌ಗಳ ಬಳಕೆ ಹಾಗೂ ಸ್ಥಳೀಯ ಸಮುದಾಯದ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚಿಸುವ ಯೋಜನೆಗಳು ರೂಪುಗೊಂಡಿವೆ. ಇವು ಮುಂದಿನ ದಿನಗಳಲ್ಲಿ ಹುಲಿಗಳ ಭವಿಷ್ಯವನ್ನು ನಿರ್ಧರಿಸಲಿವೆ. (Tiger conservation is a big challenge in Karnataka)