Centurion: ದಕ್ಷಿಣ ಆಫ್ರಿಕಾ ವಿರುದ್ಧ (South Africa vs India) ಸರಣಿ ನಿರ್ಣಾಯಕವಾಗಿರುವ 3ನೇ ಟಿ20 ಪಂದ್ಯದಲ್ಲಿ ಭಾರತ ತಂಡ (Team India) ಇಂದು ಬೃಹತ್ ಮೊತ್ತ ಕಲೆ ಹಾಕಿದೆ. ಕಳೆದ ಎರಡು ಪಂದ್ಯಗಳಿಂದ ವೈಫಲ್ಯ ಅನುಭಿವಿಸಿ ಟೀಕೆಗೆ ಒಳಗಾಗಿದ್ದ ಅಭಿಷೇಕ್ ಶರ್ಮಾ (Abhishek Sharma) ಅರ್ಧಶತಕ ಸಿಡಿಸಿದರೆ, ಇನ್ಫಾರ್ಮ್ ಬ್ಯಾಟರ್ ತಿಲಕ್ ವರ್ಮಾ (Tilak Varma) ಸಿಡಿಲಬ್ಬರದ ಶತಕ ಸಿಡಿಸಿದರು. ಇವರಿಬ್ಬರ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 219 ರನ್ಗಳ ಬೃಹತ್ ಮೊತ್ತ ಕಲೆಹಾಕಿತು.
ಕಳೆದ ಎರಡು ಪಂದ್ಯಗಳಲ್ಲಿ (Two matches) ವಿಫಲರಾಗಿದ್ದ ಅಭಿಷೇಕ್ ಶರ್ಮಾ ಇಂದು ಆರಂಭದಿಂದಲೇ ಬೌಂಡರಿ-ಸಿಕ್ಸರ್ (Boundary-six) ಸುರಿಮಳೆಗೈದರು. 24 ವರ್ಷದ ಎಡಗೈ ಬ್ಯಾಟರ್ 25 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 3 ಬೌಂಡರಿ ಸಹಿತ 50 ರನ್ಗಳಿಸಿದರು. ಈ ಮೂಲಕ ಸತತ 7 ಪಂದ್ಯಗಳ ನಂತರ ಬಂದ ಅರ್ಧಶತಕವಾಗಿದೆ. ಜಿಂಬಾಬ್ವೆ (Zimbabwe) ವಿರುದ್ಧ ಶತಕ ಸಿಡಿಸಿದ ಬಳಿಕ 7 ಪಂದ್ಯಗಳಲ್ಲಿ ಒಮ್ಮೆಯೂ 20ರ ಗಡಿ ದಾಟಿರಲಿಲ್ಲ. ಉತ್ತಮವಾಗಿ ಆಡುತ್ತಿದ್ದ ಈ ಜೋಡಿಯನ್ನ ಅನುಭವಿ ಸ್ಪಿನ್ನರ್ ಕೇಶವ್ (Spinner Keshav) ಮಹಾರಾಜ್ ಬ್ರೇಕ್ ಮಾಡಿದರು. ದೊಡ್ಡ ಹೊಡೆತಕ್ಕೆ ಯತ್ನಿಸಿದ ಶರ್ಮಾ ಸ್ಟಂಪ್ (Sharma stump) ಔಟ್ ಆದರು.
ಭಯಾನಕ ಬ್ಯಾಟಿಂಗ್ (Terrible batting) ನಡೆಸಿ ಆಫ್ರಿಕನ್ ಬೌಲರ್ಗಳ ಬೆವರಿಳಿಸಿದ ಹೈದ್ರಾಬಾದ್ ಬ್ಯಾಟರ್ ತಿಲಕ್ ವರ್ಮಾ (Tilak Verma) , ಸೆಂಚೂರಿ ಸ್ಟಾರ್ ಆಗಿ ಮೆರೆದಾಡಿದ್ರು. ತಿಲಕ್ ವರ್ಮಾ ಬೌಂಡರಿ, ಸಿಕ್ಸರ್ಗಳ ಸುರಿಮಳೆ ಸುರಿಸ್ತಿದ್ದರೆ ಫ್ಯಾನ್ಸ್ ಹುಚ್ಚೆದ್ದು ಕುಣಿದ್ರು.51 ಎಸೆತಗಳಲ್ಲಿ ತಮ್ಮ ಚೊಚ್ಚಲ ಶತಕ ಸಿಡಿಸಿದರು (maiden century) . ಒಟ್ಟಾರೆ ಅವರ ಇನ್ನಿಂಗ್ಸ್ನಲ್ಲಿ 56 ಎಸೆತಗಳಲ್ಲಿ 8 ಬೌಂಡರಿ, 7 ಭರ್ಜರಿ ಸಿಕ್ಸರ್ಗಳ ನೆರವಿನಿಂದ ಅಜೇಯ ಶತಕ ದಾಖಲಿಸಿ 219ರನ್ ಬೃಹತ್ ಮೊತ್ತಕ್ಕೆ ಕಾರಣರಾದರು. ಕೊನೆಯಲ್ಲಿ ರಮಣ್ ಸಿಂಗ್ 6 ಎಸೆತಗಳಲ್ಲಿ 15 ರನ್ ಸಿಡಿಸಿ ಭಾರತದ ಆಟಗಾರರು ಸ್ಟ್ರಾಂಗ್ ಕಂಬ್ಯಾಕ್ ಸಂದೇಶ ನೀಡಿದ್ದಾರೆ.