2024ರ ಲೋಕಸಭಾ ಚುನಾವಣೆಗೆ 8 ತಿಂಗಳು ಬಾಕಿ ಉಳಿದಿದೆ. ಬಿಜೆಪಿ ನೇತೃತ್ವದ ಎನ್ಡಿಎ (NDA) ಮೈತ್ರಿಕೂಟ ಮತ್ತು ಪ್ರಾದೇಶಿಕ ಪಕ್ಷಗಳ ʼಇಂಡಿಯಾʼ (timesnw etg election survey)
ಒಕ್ಕೂಟಗಳು ಚುನಾವಣೆಗಾಗಿ ಭಾರೀ ತಯಾರಿಯನ್ನೇ ಆರಂಭಿಸಿವೆ. ಈ ವೇಳೆಯಲ್ಲಿ ಇದೀಗ ದೇಶದ ಪ್ರತಿಷ್ಠಿತ ಟೈಮ್ಸ್ ನೌ ಮತ್ತು ಇಟಿಜಿ ಸಂಸ್ಥೆಗಳು ನಡೆಸಿರುವ ಸಮೀಕ್ಷೆ ಹೊರಬಿದ್ದಿದೆ. ಈ ಸಮೀಕ್ಷೆ
ಪ್ರತಿಪಕ್ಷಗಳಿಗೆ ಆಘಾತ ನೀಡದರೆ, ಬಿಜೆಪಿಗೆ ಹೊಸ ಉತ್ಸಾಹ ತುಂಬಿದೆ. ಇನ್ನು ಈ ಸಮೀಕ್ಷೆಯ ವರದಿ ಹೊರಬಿದ್ದ ಬೆನ್ನಲ್ಲೇ ಇಂಡಿಯಾ ಮೈತ್ರಿ ಕೂಟದಲ್ಲೂ ಒಂದಿಷ್ಟು ಬೆಳವಣಿಗೆಗಳು ಆಗಿವೆ.

ಇನ್ನು ಟೈಮ್ಸ್ ನೌ (Times Now) – ಇಟಿಜಿ ಚುನಾವಣಾ ಪೂರ್ಣ ಸಮೀಕ್ಷಯ ಪ್ರಕಾರ, ಎನ್ಡಿಎ ಮೈತ್ರಿಕೂಟ 2024ರ ಲೋಕಸಭಾ ಚುನಾವಣೆಯಲ್ಲಿ 296 ರಿಂದ 326 ಸ್ಥಾನ ಗಳಿಸಬಹುದು.
ಅದೇ ರೀತಿ INDIA ಮೈತ್ರಿಕೂಟ 160 ರಿಂದ 190 ಸ್ಥಾನ ಮತ್ತು ಇತರರು 70 ರಿಂದ 80 ಸ್ಥಾನ ಗಳಿಸಬಹುದು ಎಂದು (timesnw etg election survey) ಟೈಮ್ಸ್ ನೌ ಹಾಗೂ
ಇಟಿಜಿ ಸಮೀಕ್ಷೆ ಅಂದಾಜಿಸಿದೆ.
ಗುಡ್‌ನ್ಯೂಸ್: ಉಡುಪಿಯಲ್ಲಿ ಮೀನು ಮತ್ತು ಗೋಡಂಬಿ ರಫ್ತು ಪ್ರಮಾಣ 80% ಹೆಚ್ಚಳ
ಎನ್ಡಿಎ ಮೈತ್ರಿಕೂಟ 296 ರಿಂದ 326 ಸ್ಥಾನ ಗಳಿಸಬಹುದು. ಇದರಲ್ಲಿ ಬಿಜೆಪಿ (BJP) ಪಕ್ಷ ಏಕಾಂಗಿಯಾಗಿಯೇ 288 ರಿಂದ 314 ಸ್ಥಾನ ಗೆಲ್ಲಬಹುದು. ಅದೇ ರೀತಿ ಕಾಂಗ್ರೆಸ್ ಪಕ್ಷ 62 ರಿಂದ 80
ಸ್ಥಾನ ಗೆಲ್ಲುವ ನಿರೀಕ್ಷೆ ಇದೆ. ಇನ್ನು ಎನ್ಡಿಎ ಶೇಕಡಾ 55ರಷ್ಟು ಮತ ಗಳಿಕೆ ಮಾಡಿದರೆ, INDIA ಮೈತ್ರಿಕೂಟದ ಮತ ಗಳಿಕೆ ಪ್ರಮಾಣ ಶೇಕಡಾ 36ಕ್ಕೆ ಸೀಮಿತ ಆಗಬಹುದಾಗಿದೆ.
ಇತರರು ಶೇಕಡಾ 9ರಷ್ಟು ಮತಗಳಿಸುವ (timesnw etg election survey) ನಿರೀಕ್ಷೆ ಸಾಧ್ಯತೆ ಇದೆ.

ಇನ್ನು ಕರ್ನಾಟಕದಲ್ಲಿ ಬಿಜೆಪಿ 18 ರಿಂದ 20ಕ್ಕೆ ಸ್ಥಾನ ಪಡೆಯಬಹುದು. ಕಾಂಗ್ರೆಸ್ 8 ರಿಂದ 10 ಸ್ಥಾನ ಗಳಿಸುವ ಸಾಧ್ಯತೆ ಇದೆ ಎಂದು ಟೈಮ್ಸ್ ನೌ – ಇಟಿಜಿ (ETG) ಚುನಾವಣಾ ಪೂರ್ಣ ಸಮೀಕ್ಷೆ ಹೇಳಿದೆ.
ಇನ್ನು 2019ರಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ 25 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ ಕೇವಲ ಒಂದು ಸ್ಥಾನ ಮಾತ್ರ ಗೆದ್ದಿತ್ತು. ಜೆಡಿಎಸ್ 1 ಹಾಗೂ
ಪಕ್ಷೇತರರಾಗಿ ಸ್ಪರ್ಧಿಸಿದ್ದ ಸುಮಲತಾ ಅವರು ಗೆಲುವು ಸಾಧಿಸಿದ್ದರು.