ಚಳಿಗಾಲದ (winter) ಸಮಯದಲ್ಲಿ ಅನೇಕ ಜನರಿಗೆ ಆರೋಗ್ಯದ ಸಮಸ್ಯೆ (Health Problems ) ಹೆಚ್ಚಾಗಿ ಕಾಡುತ್ತವೆ.ತಂಪಾದ ವಾತಾವರಣ (Cool weather) ಚಳಿಗಾಲದಲ್ಲಿ ಇರುವುದರಿಂದ ಅನೇಕ ಸೋಂಕುಗಳು ಜನರನ್ನು ಆವರಿಸುತ್ತವೆ. ಚಳಿಗಾಲದಲ್ಲಿ ಸೂರ್ಯನ ಕಿರಣಗಳು (Sun rays) ಕಡಿಮೆಯಿರುವ ಕಾರಣದಿಂದಾಗಿ ರೋಗ ನಿರೋಧಕ (Disease resistant ) ಶಕ್ತಿಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.
ಚಳಿಗಾಲದಲ್ಲಿ ನಾವು ಹೆಚ್ಚಾಗಿ ಜಾಗರೂಕರಾಗಿರಬೇಕು,(Careful) ಯಾಕೆಂದರೆ ಹಲವು ವೈರಸ್ ಗಳು (Viruses) ದೇಹಕ್ಕೆ ಸೇರಿ ಶೀತ (Cold) ಕೆಮ್ಮಿನಂತಹ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಸೂರ್ಯನ ಕಿರಣಗಳು (Sun rays) ಚಳಿಗಾಲದಲ್ಲಿ ನಮಗೆ ಅಷ್ಟಾಗಿ ಸಿಗುವುದಿಲ್ಲ ಇದರಿಂದ ದೇಹಕ್ಕೆ ವಿಟಮಿನ್ ಡಿ (Vitamin D) ಕೊರತೆ ಉಂಟಾಗಬಹುದು. ಚಳಿಗಾಲದಲ್ಲಿ ಯಾವೆಲ್ಲ ಅರೋಗ್ಯ ಸಮಸ್ಯೆ ಕಾಡಬಹುದು ಯಾವ ರೀತಿ ಮುನ್ನಚ್ಚಹರಿಕೆ ಕ್ರಮ ವಹಿಸಬೇಕು ಎಂಬುದನ್ನು ತಿಳಿಯೋಣ.
ಜ್ವರ ಮತ್ತು ಶೀತ :
ತಂಪಾದ ವಾತಾವರಣದಿಂದಾಗಿ ಶೀತ (Cold) ಮಾತು ಜ್ವರ (fever) ಬರುವ ಸಾಧ್ಯತೆ ಇರುತ್ತದೆ ಜೊತೆಗೆ ಉಸಿರಾಟದ ತೊಂದರೆಯಂತಹ (Breathing Pronblem) ಸಮಸ್ಯೆಗಳು ಕಾಡಬಹುದು. ಹಾಗಾಗಿ ಚಳಿಗಾಲದಲ್ಲಿ ನಾವು ನಮ್ಮನ್ನು ಹೆಚ್ಚು ಬೆಚ್ಚಗೆ ಇಟ್ಟುಕೊಳ್ಳಬೇಕು.ದೇಹವನ್ನು ಬೆಚ್ಚಗೆ ಇಡುವಂತ ಉಡುಪುಗಳನ್ನು ಧರಿಸಬೇಕು.ಇವು ನಮ್ಮನ್ನು ಜ್ವರ ಮತ್ತು ಶೀತದಂತಹ ಸಮಸ್ಯೆಯಿಂದ ದೂರವಿಡಲು ಸಹಾಯ ಮಾಡುತ್ತದೆ.
ಎಸ್ಎಡಿ (Seasonal affective disorder) ಯಂತಹ ಸಮಸ್ಯೆಗಳು ಕಾಡಬಹುದು:
ಎಸ್ಎಡಿ ಸೀಸನಲ್ ಅಫೆಕ್ಟಿವ್ ಡಿಸಾರ್ಡರ್ ಎಂದೇ ಕರೆಯಲಾಗುತ್ತದೆ.ವಿಟಮಿನ್ ಡಿ3 (Vitamin D3) ಗೂ ಖಿನ್ನತೆಗೂ ಒಂದು ಅವಿನಾಭಾವ ಸಂಬಂಧವಿದೆ.ಸೂರ್ಯನ ಎಳೆಯ ಕಿರಣಗಳಲ್ಲಿ ವಿಟಮಿನ್ ಡಿ3 (Vitamin D3) ಅಂಶವಿದೆ. ಸಾಕಷ್ಟು ಬಿಸಿಲು ಈ ಕಾಲದಲ್ಲಿ ಬೀಳದೆ ಇರುವುದರಿಂದ ನಮಗೆ ಖಿನ್ನತೆಯಂತಹ (Depression) ಸೀಸನಲ್ ಕಾಯಿಲೆ ಕಾಡಬಹುದು.
ತೂಕ ಹೆಚ್ಚಾಗಬಹುದು: (Weight gain may occur)
ಚಳಿಗಾಲದ ಸಂದರ್ಭದಳ್ಳಿ ಯಾವುದೇ ರೀತಿಯ ಚಟುವಟಿಕೆಗಳನ್ನು ಮಾಡದೇ ಇರುವುದರಿಂದ ತೂಕ ಹೆಚ್ಚಾಗಬಹುದು (Weight gain) .ಹೀಗಾಗಿ ಹೆಚ್ಚು ಹೆಚ್ಚು ಚಟುವಟಿಕೆಯಿಂದ ಇದ್ದು, ಪೋಷಣೆಯುಕ್ತ ಆಹಾರದ ಕಡೆ ಗಮನಹರಿಸಬೇಕು.
ಅಲರ್ಜಿ ಮತ್ತು ಅಸ್ತಮಾದಂತಹ ಸಮಸ್ಯೆ: (Problem like allergy and asthma)
ವಿಪರೀತ ಚಳಿ (Cold) ಹಾಗೂ ಒಣ ಗಾಳಿಯಿಂದಾಗಿ ಉಸಿರಾಟಕ್ಕೆ ಸಂಬಂಧಿಸಿದ (Breathing Problem), ಸೋಂಕುಗಳು ದೇಹಕ್ಕೆ ಸೇರುತ್ತವೆ.ಇದರಿಂದ ಅಸ್ತಮಾದಂತಹ ಕಾಯಿಲೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ.