ಮೇಕಪ್ ಇಲ್ಲದೇ ಸುಂದರವಾಗಿ ಕಾಣಲು ಸಲಹೆಗಳು

ಮೇಕಪ್ ಇಲ್ಲದೇ ಸುಂದರವಾಗಿ ಕಾಣಬೇಕೆಂಬುದು ಪ್ರತಿಯೊಬ್ಬರ ಆಸೆ. ಆದರೆ ಮೇಕಪ್ ಇಲ್ಲದೇ ಕೆಲವರಿಗೆ ಬದುಕುವುದು ಅಸಾಧ್ಯ. ತಮ್ಮ ಮುಖದಲ್ಲಿರುವ ಮೊಡವೆ, ಕಲೆಗಳನ್ನೆಲ್ಲಾ ಮೇಕಪ್ ನಿಂದ ಮರೆಮಾಡಿ, ಸುಂದರವಾಗಿ ಕಾಣುತ್ತಾರೆ. ಆದರೆ ತ್ವಚೆಯ ಆರೋಗ್ಯದ ದೃಷ್ಟಿಯಿಂದ ಅತಿಯಾದ ಮೇಕಪ್ ಒಳ್ಳೆಯದಲ್ಲ. ಎರಡು ಮೂರು ಲೇಯರ್ ಬಳಸಿ ಮೇಕಪ್ ಮಾಡಿಕೊಳ್ಳುವುದರಿಂದ ಚರ್ಮಕ್ಕೆ ಉಸಿರಾಡಲು ಆಗುವುದಿಲ್ಲ. ಆದ್ದರಿಂದ ಇಲ್ಲಿ ನಾವು ಮೇಕಪ್ ಇಲ್ಲದೇ ಸುಂದರವಾಗಿ ಹೇಗೆ ಕಾಣುವುದು ಎಂಬುದನ್ನು ವಿವರಿಸಿದ್ದೇವೆ.

ಮೇಕಪ್ ಇಲ್ಲದೇ ಸುಂದರವಾಗಿ ಕಾಣಲು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:

ಸನ್‌ಸ್ಕ್ರೀನ್ ಅತ್ಯಗತ್ಯ:
ಮೇಕಪ್ ಇರಲಿ ಅಥವಾ ಇಲ್ಲದಿರಲಿ, ಸನ್ ಸ್ಕ್ರೀನ್ ಅತ್ಯಗತ್ಯ. ಇದು ನಿಮ್ಮ ಚರ್ಮ ರಕ್ಷಣೆಗೆ ಪ್ರಮುಖವಾದುದಾಗಿದ್ದು, ಸೂರ್ಯನ ಹಾಣಿಕಾರಕ ಕಿರಣಗಳಿಂದ ನಿಮಗೆ ರಕ್ಷಣೆ ನೀಡುವುದು. ಮನೆಯಿಂದ ಹೊರಬರುವ 15 ನಿಮಿಷಗಳ ಮೊದಲು ಯಾವಾಗಲೂ ಸನ್‌ಸ್ಕ್ರೀನ್ ಅನ್ನು ಹಚ್ಚಿಕೊಳ್ಳಿ.

ಬಣ್ಣದ ಮಾಯಿಶ್ಚರೈಸರ್ ಪ್ರಯತ್ನಿಸಿ:
ನಿಮ್ಮ ಮುಖವು ತುಂಬಾ ಡಲ್ ಆಗಿ ಕಾಣುತ್ತದೆ ಎಂದು ನಿಮಗೆ ಅನಿಸಿದರೆ, ಫೌಂಡೇಷನ್ ಬಳಸುವ ಬದಲು ಸಣ್ಣ ಹೊಳಪಿಗಾಗಿ ಬಣ್ಣದ ಮಾಯಿಶ್ಚರೈಸರ್ ಅನ್ನು ಹಚ್ಚಿಕೊಳ್ಳಿ. ಮಾಯಿಶ್ಚರೈಸರ್ ಗಳು ಸಾಮಾನ್ಯವಾಗಿ ಜೆಲ್ ಆಧಾರಿತವಾಗಿದ್ದು, ಮುಖಕ್ಕೆ ಹಚ್ಚಿದಾಗ ಮರೆಯಾಗುತ್ತವೆ. ಆದರೆ ಈ ಬಣ್ಣವಿರುವ ಮಾಯಿಶ್ಚರೈಸರ್ ಗಳು ನಿಮ್ಮ ತ್ವಚೆಯನ್ನು ಮಾಯಿಶ್ವರೈಸಿಂಗ್ ಮಾಡುವುದಲ್ಲೇ, ಹೊಳೆಯುವಂತೆ ಮಾಡುತ್ತವೆ.

ನಿಂಬೆ ಹಿಂಡಿದ ಬಿಸಿನೀರು:
ಬೆಳಿಗ್ಗೆ ಎದ್ದ ಕೂಡಲೇ ತಾಜಾ ನಿಂಬೆ ರಸ ಹಿಂಡಿದ ಬಿಸಿ ನೀರು ಕುಡಿಯಿರಿ. ಈ ದೈನಂದಿನ ಆಚರಣೆ ಕಲ್ಮಶಗಳನ್ನು ಹೊರಹಾಕಿ, ನಿಮ್ಮ ದೇಹವನ್ನು ಶುದ್ಧಗೊಳಿಸುತ್ತದೆ ಜೊತೆಗೆ ನಿಮಗೆ ಹೊಳೆಯುವ ತ್ವಚೆಯನ್ನು ನೀಡುತ್ತದೆ. ಹಾಗಂತ ಅತಿಯಾಗಿ ಕುಡಿಯಬೇಡಿ, ಮೂಳೆಗಳಿಗೆ ಹಾನಿಯಾಗಬಹುದು.

ಎಫ್ಫೋಲಿಯೇಟ್ ಮಾಡಲು ಮರೆಯಬೇಡಿ:
ಕೆಲವೊಮ್ಮೆ ನಮ್ಮ ತ್ವಚೆಗೆ ಹೆಚ್ಚುವರಿ ಆರೈಕೆ ಅಗತ್ಯವಿರುತ್ತದೆ. ಅದಕ್ಕಾಗಿಯೇ ಉತ್ತಮ ಸ್ಕ್ರಬ್ ಬಳಸಿ ನಿಮ್ಮ ಮುಖವನ್ನು ಎಫ್ಫೋಲಿಯೇಟ್ ಮಾಡಬೇಕು. ಎಫ್ಫೋಲಿಯೇಶನ್ ಡೆಡ್ ಸೆಲ್ ಗಳನ್ನು ತೆಗೆಯಲು ಸಹಾಯ ಮಾಡುವುದು. ಈ ಡೆಡ್ ಸೆಲ್ ಗಳು ಹಾಗೂ ಮುಚ್ಚಿರುವ ರಂಧ್ರಗಳಿಂದಲೇ ತ್ವಚೆ ಡಲ್ ಆಗಿ ಕಾಣುವುದು. ಆದ್ದರಿಂದ ನಿಮ್ಮ ತ್ವಚೆಗೆ ಸರಿಹೊಂದುವಂತ ಸ್ಕ್ರಬ್ ಬಳಸಿ, ವಾರಕ್ಕೆ 2-3 ಬಾರಿ ಎಫ್ಫೋಲಿಯೇಟ್ ಮಾಡಬಹುದು.

ಟೋನರ್ ಬಳಸಿ:
ನಾವು ಮುಖ ತೊಳೆದ ಮೇಲೆ ಟೋನರ್ ಹಂತವನ್ನು ಸಾಮಾನ್ಯವಾಗಿ ಬಿಟ್ಟುಬಿಡುತ್ತೇವೆ. ಆದರೆ ಇದು ಕೂಡ ಆರೋಗ್ಯಕರ ಚರ್ಮಕ್ಕೆ ಅಗತ್ಯವಾದ ಹೆಜ್ಜೆಯಾಗಿದೆ. ಚರ್ಮ ಶುದ್ಧಗೊಳಿಸಿದ ನಂತರ ಟೋನರ್ ಬಳಸುವುದರಿಂದ ಚರ್ಮದ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇದರಿಂದ ತ್ವಚೆಗೆ ಫ್ರೆಶ್ ಭಾವನೆ ಸಿಗುವುದು.

ಸಾಕಷ್ಟು ನೀರು ಕುಡಿಯಿರಿ:
ಆರೋಗ್ಯಕರ ಮತ್ತು ಹೊಳೆಯುವ ತ್ವಚೆಗಾಗಿ ಹೈಡ್ರೀಕರಿಸಿದಂತೆ ಇರುವುದು ತುಂಬಾ ಮುಖ್ಯ. ದಿನವಿಡೀ ಸಾಕಷ್ಟು ನೀರು ಕುಡಿಯಿರಿ. ಸಾಕಷ್ಟು ನೀರು ಕುಡಿಯುವುದು ನಿಮ್ಮೆಲ್ಲಾ ತ್ವಚೆಯ ಸಮಸ್ಯೆಗಳಿಗೆ ಪರಿಹಾರ ನೀಡುವುದಲ್ಲದೇ, ಆರೋಗ್ಯವನ್ನು ಚೆನ್ನಾಗಿರಿಸುವುದು.

Latest News

ರಾಜಕೀಯ

`ನನ್ನಲ್ಲೂ ದಾಖಲೆಗಳಿವೆ ; `ಸರ್ಟಿಫಿಕೇಟ್ ಕೋರ್ಸ್ʼಗಿಂತ ಬೃಹತ್ ಚಾಪ್ಟರ್ 1, 2, 3 ಆಗುತ್ತವೆ, ಬಿಚ್ಚಲೇ? : ಹೆಚ್.ಡಿಕೆ

ಕಟ್ಟಡಗಳ ಹೆಸರಿನಲ್ಲಿ ಕಮೀಷನ್ ಕಾಂಚಾಣ, ಅಧಿಕಾರಿಗಳನ್ನು ಒಳಕ್ಕೆ ಹಾಕಿಕೊಂಡು ಡೀಲ್ ಮಾಡುವ ಅಶ್ವತ್ ನಾರಾಯಣ್, ಇದೇನಾ ನೀವು ನೀಡುತ್ತಿರುವ ಉನ್ನತ ಶಿಕ್ಷಣ?

ಆರೋಗ್ಯ

ಸಕ್ಕರೆ ಖಾಯಿಲೆ ಇರುವವರು ಈ ಹಣ್ಣುಗಳನ್ನು ಸೇವಿಸಬಹುದು ; ತಪ್ಪದೇ ಈ ಮಾಹಿತಿ ಓದಿ

ತಜ್ಞರ ಪ್ರಕಾರ, ಸಕ್ಕರೆ ಕಾಯಿಲೆ ಇರುವವರು ಈ 5 ವಿಧದ ಹಣ್ಣುಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಅಂತಹ ಹಣ್ಣುಗಳ ವಿವರ ಇಲ್ಲಿದೆ ನೋಡಿ.

ದೇಶ-ವಿದೇಶ

ದೇಶದ ಹೆಮ್ಮೆ ತ್ರಿವರ್ಣ ಧ್ವಜವೂ ಕೂಡ ಬಿಜೆಪಿಗೆ ವ್ಯಾಪಾರದ ಸರಕಾಗಿದೆ : ಬಿ.ಕೆ.ಹರಿಪ್ರಸಾದ್

38×11,80,000=4.484 ಕೋಟಿ, ಹೇಗಿದೆ ಮೋದಿ ಸರ್ಕಾರದ ಲೂಟಿ? ಕೇಂದ್ರದ ಮೋದಿ ಸರ್ಕಾರ ವಸೂಲಿ ಬಾಜಿತನಕ್ಕೆ ರಾಷ್ಟ್ರಧ್ವಜವನ್ನ ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧ

ಕ್ರೀಡೆ

ಕಾಮನ್‌ವೆಲ್ತ್ ಗೇಮ್ಸ್‌ 2022 ; ಕಂಚಿನ ಪದಕ ಗೆದ್ದ ಪತ್ನಿಯನ್ನು ಅಭಿನಂದಿಸಿದ ದಿನೇಶ್ ಕಾರ್ತಿಕ್

ಭಾರತದ ಸ್ಕ್ವ್ಯಾಶ್ ಆಟಗಾರ್ತಿ ದೀಪಿಕಾ ಪಲ್ಲಿಕ್ಕಲ್(Deepika Pallikal) ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕ(Bronze Medal) ಗೆದ್ದುಕೊಂಡಿದ್ದಾರೆ.