Health : ನಮ್ಮ ಮೆದುಳು(Brain) ವಿಸ್ಮಯಗಳ ಆಗರ. ಮೆದುಳಿನಲ್ಲಿ ಮಾಹಿತಿಯನ್ನು ಸಂಗ್ರಹಿಸುವುದು, ಮರುಪಡೆದುಕೊಳ್ಳುವುದು ಮೊದಲಾದ ಕಾರ್ಯವನ್ನು ಸ್ಮರಣೆ ಮಾಡುತ್ತದೆ. ಮಾಹಿತಿ ಪ್ರಕ್ರಿಯೆ ಕ್ರಿಯೆಯಾಗಿ ಸ್ಮರಣೆಯು ಕಾರ್ಯನಿರ್ವಹಿಸುತ್ತದೆ.

ಮೆಮೊರಿಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗುತ್ತದೆ ಒಂದು ಶಾರ್ಟ್ ಟರ್ಮ್ ಮೆಮೊರಿ(Short Term Memory) ಇನ್ನೊಂದು ಲಾಂಗ್ ಟರ್ಮ್ ಮೆಮೊರಿ(Long Term Memory). ಶಾರ್ಟ್ ಟರ್ಮ್ ಮೆಮೊರಿಯು ಕಡಿಮೆ ಅವಧಿಯ ಮಾಹಿತಿಯನ್ನು ಸಂಗ್ರಹಿಸುತ್ತದೆ ಮತ್ತು ಲಾಂಗ್ ಟರ್ಮ್ ಮೆಮೊರಿಯು ದೀರ್ಘ ಅವಧಿಯ ಮಾಹಿತಿಯನ್ನು ಸಂಗ್ರಹಿಸುತ್ತದೆ.
ಇದನ್ನೂ ಓದಿ : https://vijayatimes.com/odisha-man-gets-married-to-transgender/
ನಮ್ಮ ಮೆದುಳನ್ನು ಚಟುವಟಿಕೆಯಿಂದ ಇರಿಸಿಕೊಳ್ಳುವುದು ಮೆದುಳಿನ ಆರೋಗ್ಯಕ್ಕೆ ಬಹಳ ಮುಖ್ಯ. ಇದರಿಂದಾಗಿ ಸುಧಾರಿತ ಜ್ಞಾಪಕ ಶಕ್ತಿಯನ್ನು ನೀವು ಪಡೆದುಕೊಳ್ಳುತ್ತೀರಿ. ಮೆದುಳನ್ನು ಚಟುವಟಿಕೆಯಿಂದಿರಿಸಲು ಈ ಕೆಲಸಗಳನ್ನು ಮಾಡಿ.
ಪದಬಂಧ, ಒಗಟುಗಳನ್ನು ಬಿಡಿಸುವುದು, ಚೆಸ್ ಆಡುವುದು, ಹೀಗೆ ಹೊಸ ತಂತ್ರಗಳನ್ನು ಅರಿತುಕೊಂಡು ನಿಯಮಿತವಾಗಿ ಈ ಚಟುವಟಿಕೆಗಳನ್ನು ನಿರ್ವಹಿಸುತ್ತಿರಿ.

ನಿಮ್ಮ ಸ್ಮರಣೆಯನ್ನು ನೈಸರ್ಗಿಕವಾಗಿ ಸುಧಾರಿಸಬೇಕು ಎಂದಾದಲ್ಲಿ, ಹೊಸ ಜನರನ್ನು ಭೇಟಿಯಾಗುವುದರ ಮೂಲಕ, ಬೇರೆ ಬೇರೆ ಸ್ಥಳಗಳಿಗೆ ವಿಹಾರ ಹೋಗುವುದರ ಮೂಲಕ ಹೊಸ ಹೊಸ ಸ್ಮರಣೆಗಳನ್ನು ರಚಿಸಿಕೊಳ್ಳಿ. ಇದು ನಿಮ್ಮ ಜ್ಞಾಪಕ ಶಕ್ತಿಯನ್ನು ಸಕ್ರಿಯವಾಗಿ ಚಟುವಟಿಕೆಯಿಂದ ಇರಿಸುವಲ್ಲಿ ಸಹಾಯ ಮಾಡುತ್ತದೆ.
ನಿಮ್ಮ ನರಗಳನ್ನು ಶಾಂತಗೊಳಿಸುವ ಮೂಲಕ ಹಾಗೂ ನಿರ್ದಿಷ್ಟ ಒತ್ತಡ ಚಟುವಟಿಕೆಗಳನ್ನು ನಿವಾರಿಸಿಕೊಳ್ಳುವುದರಿಂದ ನಿಮ್ಮ ಜ್ಞಾಪಕ ಶಕ್ತಿಯನ್ನು ಸುಧಾರಿಸಿ ಕೊಳ್ಳಬಹುದಾಗಿದೆ. ನಿಯಮಿತವಾಗಿ ಧ್ಯಾನವನ್ನು ಅಭ್ಯಾಸ ಮಾಡುವುದು ನಿಮ್ಮ ಸ್ಮರಣೆ ಶಕ್ತಿಯನ್ನು ನೈಸರ್ಗಿಕವಾಗಿ ವೃದ್ಧಿಸುವಲ್ಲಿ ಸಹಾಯಕವಾಗಿದೆ.
ಆರೋಗ್ಯಕಾರಿ ಮೆದುಳಿನ ಕೋಶಗಳನ್ನು ವರ್ಧಿಸಲು ಇದು ಉಪಯೋಗಕಾರಿಯಾಗಿದೆ. ವಿಶೇಷವಾಗಿ, ನಡೆದಾಡುವುದು ಮತ್ತು ಸೈಕ್ಲಿಂಗ್ ಮಾಡುವುದು ನಿಮ್ಮ ಮೆದುಳಿನ ಕೋಶಗಳನ್ನು ಸಕ್ರಿಯವಾಗಿಸುವಲ್ಲಿ ಸಹಕಾರಿಯಾಗಿದೆ ಮತ್ತು ನಿಮ್ಮ ಸ್ಮರಣೆಯನ್ನು ಸುಧಾರಿಸುತ್ತದೆ ಎಂಬುದಾಗಿ ಅಧ್ಯಯನವು ತಿಳಿಸಿದೆ.
ಮೊಸರಿನಂತ ಜೈವಿಕ ಆಹಾರಗಳನ್ನು ಸೇವಿಸುವುದರ ಮೂಲಕ ನೈಸರ್ಗಿಕವಾಗಿ ನಿಮ್ಮ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು, ಇದರಲ್ಲಿರುವ ಆರೋಗ್ಯಕಾರಿ ಬ್ಯಾಕ್ಟೀರಿಯಾಗಳು ನಿಮ್ಮ ಜ್ಞಾಪಕ ಶಕ್ತಿಯನ್ನು ವರ್ಧಿಸುವಲ್ಲಿ ಸಹಕಾರಿಯಾಗಿದೆ.
- ಪವಿತ್ರ