Hyderabad : ತಿರುಮಲ ದೇವಸ್ಥಾನವನ್ನು(Tirupathi Trust Announced) ನಡೆಸುತ್ತಿರುವ ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ಶ್ವೇತಪತ್ರವನ್ನು ಬಿಡುಗಡೆ ಮಾಡಿದ್ದು, ದೇವಸ್ಥಾನದ ಸ್ಥಿರ ಠೇವಣಿ ಮತ್ತು ಚಿನ್ನದ ಠೇವಣಿ ಸೇರಿದಂತೆ ತನ್ನ ಆಸ್ತಿಯ ಪಟ್ಟಿಯನ್ನು ಪ್ರಕಟಿಸಿದೆ.

ತಿರುಮಲ ತಿರುಪತಿ(Tirupathi Trust Announced) ದೇವಸ್ಥಾನಮ್ಸ್ ಟ್ರಸ್ಟ್ ಘೋಷಣೆ ಮಾಡಿರುವ ಅಧಿಕೃತ ಮಾಹಿತಿಯ ಪ್ರಕಾರ,
ತಿರುಮಲ ತಿರುಪತಿ ದೇವಾಲಯ 2.26 ಲಕ್ಷ ಕೋಟಿ ಮೌಲ್ಯದ ಒಟ್ಟು ಆಸ್ತಿಯೊಂದಿಗೆ 10 ಟನ್ ಚಿನ್ನ ಮತ್ತು 15,938 ಕೋಟಿ ರೂಪಾಯಿ ನಗದು ಹೊಂದಿದೆ.
ಮಾರ್ಗಸೂಚಿಗಳ ಪ್ರಕಾರ, ಚಿನ್ನದ ಠೇವಣಿಗಳಿಗೆ ಹೆಚ್ಚಿನ ಕ್ರೆಡಿಟ್ ರೇಟಿಂಗ್‌ಗಳನ್ನು ಹೊಂದಿರುವ ಶೆಡ್ಯೂಲ್ಡ್ ಬ್ಯಾಂಕ್‌ಗಳಿಂದ ಆಹ್ವಾನಿಸಲಾಗಿದೆ.
https://vijayatimes.com/delhi-schools-closed/
ಶ್ರೀವಾರಿ ಹುಂಡಿಯ ಎಲ್ಲಾ ಚಿನ್ನದ ದೇಣಿಗೆಗಳನ್ನು 12 ವರ್ಷಗಳ ಲಿಂಗ್ ಚಿನ್ನದ ಠೇವಣಿ ಮಾಡಬಹುದಾದ ಹಣಗಳಿಸುವ ಯೋಜನೆಯಡಿ ಸರ್ಕಾರಿ ಟಂಕಸಾಲೆಗೆ ಕಳುಹಿಸಲಾಗಿದೆ.
https://youtu.be/AOZCDXADxBQ ಒಂದೇ ಕುಟುಂಬದಿಂದ 7 ಯುವ ಕೃಷಿಕರು.
ಬ್ಯಾಂಕ್ ಸ್ವೀಕರಿಸಿದ ಎಲ್ಲಾ ದೇಣಿಗೆಗಳನ್ನು ಅದೇ ಬ್ಯಾಂಕಿನಲ್ಲಿ ಠೇವಣಿ ಮಾಡಲಾಗುತ್ತದೆ. ಯಾವುದೇ ಬ್ಯಾಂಕ್ ಸಂಗ್ರಹಿಸಿದ ಪರಕಾಮಣಿಯ ನಾಣ್ಯಗಳನ್ನೂ ಅದೇ ಬ್ಯಾಂಕಿನಲ್ಲಿ ಠೇವಣಿ ಇಡಲಾಗುತ್ತಿದೆ.
ಇನ್ನು ಟ್ರಸ್ಟ್ 15,938 ಕೋಟಿ ನಗದು ಠೇವಣಿ ಹೊಂದಿದೆ.
2019ರಲ್ಲಿ 7.3 ಟನ್ ಚಿನ್ನದ ಠೇವಣಿಯಿತ್ತು. ಮೂರು ವರ್ಷಗಳಲ್ಲಿ 2.9 ಟನ್ ಗಳಷ್ಟು ಇದು ಹೆಚ್ಚಾಗಿದೆ. ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ 5,300 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನದ ಠೇವಣಿ ಇದೆ.
ಅದೇ ರೀತಿ ತಿರುಮಲ ತಿರುಪತಿ ದೇವಸ್ಥಾನಮ್ಸ್ ಟ್ರಸ್ಟ್ ಹೆಸರಿನಡಿಯಲ್ಲಿ ದೇಶದ 930 ಸ್ಥಳಗಳಲ್ಲೀ 7123ಎಕರೆ ಭೂಮಿ ಇದೆ.

ಇನ್ನು ಭಕ್ತರು ನೀಡುವ ಕಾಣಿಕೆ ಮತ್ತು ದೇವಸ್ಥಾನದ ಆಸ್ತಿ ಮೂಲಗಳಿಂದ ಬರುವ ಆದಾಯವೇ ದೇವಸ್ಥಾನದ ಮುಖ್ಯ ಆದಾಯವಾಗಿದೆ ಎಂದು ದೇವಸ್ಥಾನದ ಟ್ರಸ್ಟ್ ತಿಳಿಸಿದೆ.
- ಮಹೇಶ್.ಪಿ.ಎಚ್