vijaya times advertisements
Visit Channel

Politics : ಥಳಿಸಲು ನಮಗೆ 10 ನಿಮಿಷಕ್ಕಿಂತ ಹೆಚ್ಚು ಸಮಯ ಬೇಕಿಲ್ಲ ; ಬಿಜೆಪಿಗೆ ಎಚ್ಚರಿಕೆ ಕೊಟ್ಟ TMC ನಾಯಕ!

madan mita

West Bengal : ಪಶ್ಚಿಮ ಬಂಗಾಳದ (West Bengal) ಸೆಕ್ರೆಟರಿಯೇಟ್‌ ಕಛೇರಿಗೆ ತೆರಳುತ್ತಿದ್ದ ನಬಣ್ಣ ಅವರ ಮೆರವಣಿಗೆಯ ವೇಳೆ ಹಿಂಸಾಚಾರ (Voilence) ಮತ್ತು

ಪೊಲೀಸರ ಮೇಲೆ ಹಲ್ಲೆ ನಡೆಸಿದವರನ್ನು ಉದ್ದೇಶಿಸಿ, ನಮಗೆ ಕೇವಲ ಹತ್ತು ನಿಮಿಷಗಳು ಸಾಕು ಅವರಿಗೆ ತಕ್ಕ ಪಾಠ ಕಲಿಸಲು ಎಂದು ಟಿಎಂಸಿ ನಾಯಕ (TMC Leader) ಮದನ್ ಮಿತ್ರ (Madan Mitra) ಭಾನುವಾರ ಹೇಳಿದ್ದಾರೆ.

TMC Leader Madan Mitra warns BJP
Madan Mitra

ಆದಾಗ್ಯೂ, ಬಿಜೆಪಿಯ (BJP) ವಿಚಿತ್ರಕಾರಿ ನೀತಿಗಳಿಗೆ ಪ್ರತೀಕಾರವಾಗಿ ಟಿಎಂಸಿ ಇಂತಹ ಕ್ರಮದ ಪರವಾಗಿಲ್ಲ ಎಂದು ಮಿತ್ರಾ ಹೇಳಿದರು. ಟಿಎಂಸಿ ಏನು ಮಾಡಬಹುದು ಎಂಬುದನ್ನು ಬಿಜೆಪಿಗೆ ತಿಳಿಸಲು ಮಾತ್ರ ಇಲ್ಲಿ ಬಯಸಿದ್ದೇನೆ.

ಆದ್ರೆ ಆ ಮಟ್ಟಕ್ಕೆ ನಾವು ಹೋಗುವುದಿಲ್ಲ!

ಪಿಟಿಐ ವರದಿಯ ಪ್ರಕಾರ, ಮದನ್ ಮಿತ್ರ ಅವರು ತಮ್ಮ ಕಮರ್ಹಟಿ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ, “ಪಕ್ಷದ ವರಿಷ್ಠರಿಂದ ಸೂಚನೆ ಬಂದರೆ ಅವರನ್ನು ಥಳಿಸಲು ಮತ್ತು ಪಾಠ ಕಲಿಸಲು ಹತ್ತು ನಿಮಿಷಗಳಿಗಿಂತ ಹೆಚ್ಚು ಸಮಯ ನಾವು ತೆಗೆದುಕೊಳ್ಳುವುದಿಲ್ಲ.

ಇದನ್ನೂ ಓದಿ : https://vijayatimes.com/state-bjp-slams-siddaramaiah-and-dks/

ಅವರು ಗೂಂಡಾಗಿರಿ ಮತ್ತು ಕೃತ್ಯಗಳಲ್ಲಿ ಭಾಗಿಯಾಗಿದ್ದರು, ಸರ್ಕಾರಿ ಆಸ್ತಿಗಳ ಮೇಲೆ ದಾಳಿ ಮಾಡಿದರು, ಟಿಎಂಸಿ ಮತ್ತು ಆಡಳಿತಕ್ಕೆ ಬೆದರಿಕೆ ಹಾಕಿದರು.

ದಾಳಿಕೋರರಂತೆಯೇ ಟಿಎಂಸಿಯು ದ್ವಿಗುಣ ಬಲದಿಂದ ಪ್ರತೀಕಾರ ತೀರಿಸಬಹುದೆಂದು ಮಿತ್ರಾ ಹೇಳಿದರು.

ನಾವು ನಾಲ್ಕು ಕಚ್ಚಾ ಬಾಂಬ್‌ಗಳನ್ನು ಎಸೆಯುವ ಇಬ್ಬರು ಹುಡುಗರನ್ನು ಬೈಕ್‌ನಲ್ಲಿ ಕಳುಹಿಸಬಹುದು, ಇದು ಅಂಥ ಕೃತ್ಯಗಳಲ್ಲಿ ತೊಡಗುವವರನ್ನು ಓಡಿಹೋಗುವಂತೆ ಮಾಡುತ್ತದೆ.

ಆದರೆ ಅಂತಹ ಕ್ರಿಯೆಯಲ್ಲಿ ಯಾವುದೇ ಶ್ರೇಯವಿಲ್ಲ! ಅದರಲ್ಲಿ ಅದ್ಭುತವಾದದ್ದೇನೂ ಇಲ್ಲ ಎಂದು ಟಿಎಂಸಿ ಒತ್ತಿಹೇಳಿದೆ. ಇದು ಪ್ರೀತಿ ಮತ್ತು ಸಹಾನುಭೂತಿಯ ಭಾಷೆಯನ್ನು ಮಾತನಾಡುತ್ತದೆ ಎಂದು ಮದನ್ ಹೇಳಿದರು.

TMC Leader Madan Mitra warns BJP
TMC Leader Madan Mitra

ಮದನ್ ಮಿತ್ರಾ (Madan Mitra) ಹೇಳಿಕೆಗೆ ಪ್ರತಿಕ್ರಿಯೇ ಕೊಟ್ಟಿರುವ ಬಿಜೆಪಿಯ ಹಿರಿಯ ನಾಯಕ ರಾಹುಲ್ ಸಿನ್ಹಾ ಪ್ರತಿಕ್ರಿಯಿಸಿದ್ದು, ಟಿಎಂಸಿ ನಾಯಕರು ಹೆಚ್ಚು ಅಪಾಯಕಾರಿ ಹೇಳಿಕೆಗಳನ್ನು ಮಾಡುತ್ತಿದ್ದಾರೆ

ಮತ್ತು ಜನರ ಬೆಂಬಲವನ್ನು ಕಳೆದುಕೊಂಡಿದ್ದಾರೆ. ಸಾಮಾನ್ಯ ಜನರ ಬೆಂಬಲವನ್ನು ಕಳೆದುಕೊಳ್ಳುತ್ತಿರುವುದರಿಂದ ಟಿಎಂಸಿ ನಾಯಕರು ಇಂತಹ ಅಪಾಯಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಅಷ್ಟೇ!
https://youtu.be/bZWXtr2rkBE

ಪ್ರತಿಪಕ್ಷಗಳನ್ನು ಹೆದರಿಸಲು ಈ ನಾಯಕರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಟಿಎಂಸಿಯ ಕೊನೆ ದಿನಗಳು ಪ್ರಾರಂಭವಾಗಿದೆ ಎಂದು ಹೇಳುವ ಮೂಲಕ ಟಿಎಂಸಿ ನಾಯಕ ಮದನ್ ಮಿತ್ರಾ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

Latest News

ರಾಜ್ಯ

ಬೆಳಗಾವಿ ಗಡಿ ವಿವಾದ : ಭದ್ರತೆಯ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಬಸ್ ಸಂಚಾರ ಸ್ಥಗಿತಗೊಳಿಸಿದ ಮಹಾರಾಷ್ಟ್ರ!

ಬೆಳಗಾವಿ ಗಡಿ ವಿವಾದದ ಕುರಿತು ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಬಿರುಕು ಶೀಘ್ರದಲ್ಲೇ ಶಮನಗೊಳ್ಳುವ ಲಕ್ಷಣ ಕಂಡುಬರುತ್ತಿಲ್ಲ ಎಂಬುದನ್ನು ಉಲ್ಲೇಖಿಸಿದೆ.

ಮನರಂಜನೆ

ನೆಟ್ ಫ್ಲಿಕ್ಸ್ ನಲ್ಲಿ ಕಾಂತಾರ ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ಲಭ್ಯವಾಗಲಿದೆ : ರಿಷಬ್ ಶೆಟ್ಟಿ

ಕಾಂತಾರ ಓಟಿಟಿಯಲ್ಲಿ ಮೊದಲ ಬಾರಿಗೆ ಬಿಡುಗಡೆಯಾದ ವೇಳೆ ಕಾಂತಾರ ಚಿತ್ರದ ಅಸಲಿ ವರಾಹ ರೂಪಂ ಹಾಡು ತೆಗೆದು ಹಾಕಲಾಗಿತ್ತು.

ಪ್ರಮುಖ ಸುದ್ದಿ

ದೆಹಲಿ ಮಹಾನಗರ ಪಾಲಿಕೆ ಚುನಾವಣೆ: ಜಯದ ಹಾದಿಯಲ್ಲಿ ಆಪ್

ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲೋ ಪ್ರಕಾರ ಬಿಜೆಪಿ 69 ರಿಂದ 91 ವಾರ್ಡ್ ಗಳಲ್ಲಿ ಗೆಲುವು ಸಾಧ್ಯತೆ ಹಾಗೂ ಕಾಂಗ್ರೆಸ್ 3 ರಿಂದ 7 ವಾರ್ಡ್ ಗಳಲ್ಲಿ ಗೆಲ್ಲುತ್ತದೆ ಎಂದು ಸಮೀಕ್ಷೆ ತಿಳಿಸಿದೆ

ಪ್ರಮುಖ ಸುದ್ದಿ

ಬೆಳಗಾವಿಯಲ್ಲಿ ಕಲ್ಲು ತೂರಾಟ ; ಪುಣೆಯಲ್ಲಿ ಕರ್ನಾಟಕ ಬಸ್‌ಗಳಿಗೆ ಮಸಿ ಬಳಿದ ಶಿವಸೇನಾ!

ಕರ್ನಾಟಕ-ಮಹಾರಾಷ್ಟ್ರ ಮುಖ್ಯಮಂತ್ರಿಗಳ ನಡುವಿನ ವಾಗ್ಸಮರ ಗಡಿ ಭಾಗದಲ್ಲಿ ಘರ್ಷಣಗೆ ಪ್ರಮುಖವಾಗಿದೆ. ಎಂ.ಇ.ಎಸ್ (M.E.S) ಪುಂಡರ ಹಾವಳಿ ಹೆಚ್ಚಾಗಿದ್ದು, ಕರ್ನಾಟಕ ರಾಜ್ಯದ ಬಸ್‌ಗಳನ್ನು ಅಡಗಟ್ಟಿ ಮಸಿ ಹಚ್ಚಿ ಆಕ್ರೋಶ ಹೊರಹಾಕಿದ್ದರು