Visit Channel

‘ತಾಯ್ತ’ ಕಟ್ಟಲು ಸಿದ್ಧರಾದ ಲಯಕೋಕಿಲ

adb8aeec-c854-4b21-abff-a845a55b85aa

ತಮ್ಮ ನಟನೆಯಿಂದ ಮನೆಮಾತಾಗಿರುವ ಲಯಕೋಕಿಲ, ಸಂಗೀತ ನಿರ್ದೇಶಕರಾಗೂ ಹೆಸರಾದವರು. ಈಗ ಲಯಕೋಕಿಲ ನಿರ್ದೇಶಕರಾಗುತ್ತಿದ್ದಾರೆ.
ತಮ್ಮ ಮೊದಲ‌ ಚಿತ್ರಕ್ಕೆ ‘ತಾಯ್ತ’ ಎಂದು ಹೆಸರಿಟ್ಟಿದ್ದಾರೆ.

ಚಿತ್ರದ ಮುಹೂರ್ತ ಸಮಾರಂಭ ರಾಮನಗರದ ದರ್ಗಾವೊಂದರಲ್ಲಿ ಸರಳವಾಗಿ ಆರಂಭವಾಯಿತು.
ನಿರ್ಮಾಪಕರ ತಾಯಿ ಮೊದಲ ದೃಶ್ಯಕ್ಕೆ ಕ್ಯಾಮೆರಾ ಚಾಲನೆ ಮಾಡಿದರು. ಲಯಕೋಕಿಲ ಅವರೆ ಕ್ಲಾಪ್ ಮಾಡುವ ಮೂಲಕ ತಮ್ಮ ನಿರ್ದೇಶನ ಕಾರ್ಯ ಆರಂಭಿಸಿದರು.
ಮೊದಲ ದಿನದ ಚಿತ್ರೀಕರಣವನ್ನು ರಾಮನಗರದ ಆಸುಪಾಸಿನಲ್ಲಿ ನಿರ್ದೇಶಕರು ನಡೆಸಿದ್ದಾರೆ ‌.
ಆಗಸ್ಟ್ 5 ರಿಂದ ಚಿಕ್ಕಮಗಳೂರು, ಹೊರನಾಡು ಮುಂತಾದ ಕಡೆ ನಿರಂತರ ಚಿತ್ರೀಕರಣ ನಡೆಯಲಿದೆ.
ಈ ಚಿತ್ರವನ್ನು ಡಾ.ಶಾಹಿದ್ ಅವರು ನಿರ್ಮಿಸುತ್ತಿದ್ದಾರೆ. ಕಥೆಯನ್ನು ಶಾಹಿದ್ ಅವರೆ ಬರೆದಿದ್ದಾರೆ.
ಲಯಕೋಕಿಲ ಅವರೆ ಸಂಗೀತ ನೀಡುತ್ತಿರುವ ಈ ಚಿತ್ರದ ಹಾಡುಗಳನ್ನು ರಾಮನಾರಾಯಣ್ ಬರೆದಿದ್ದಾರೆ.
ಆನಂದ್ ಛಾಯಾಗ್ರಹಣ ಹಾಗೂ ಮೋಹನ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

ರಿಹಾನ್ ಎಂಬ ನೂತನ ಪ್ರತಿಭೆ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.
ರಿಹಾನ್ ಅವರಿಗೆ ನಾಯಕಿಯಾಗಿ ಹರ್ಷಿಕಾ ಪೂಣಚ್ಛ ಅಭಿನಯಿಸುತ್ತಿದ್ದಾರೆ.
ನಾಯಕನ ತಾಯಿಯ ಪಾತ್ರದಲ್ಲಿ ಸುಮಾಶಾಸ್ತ್ರಿ ಕಾಣಿಸಿಕೊಳ್ಳುತ್ತಿದ್ದಾರೆ.
ಲಯಕೋಕಿಲ, ಡಾ.ಶಾಹಿದ್, ಶೋಭ್ ರಾಜ್, ಕಲೀಲ್, ಮಿಮಿಕ್ರಿ ಮಂಜು, ಕಾರ್ತಿಕ್ ಶರ್ಮ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
“ತಾಯ್ತ” ಎಲ್ಲಾ ತರಹದ ಮಾಮೂಲಿ ಕಥೆಯಲ್ಲ.. ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ ಎನ್ನುತ್ತಾರೆ ಲಯಕೋಕಿಲ.

Latest News

China Ship
ದೇಶ-ವಿದೇಶ

ಶ್ರೀಲಂಕಾ ಬಂದರಿನಲ್ಲಿ ಚೀನಾದ ಹಡಗು ; ಭಾರತದ ಕಳವಳಕ್ಕೆ 5 ಕಾರಣಗಳು ಇಲ್ಲಿವೆ!

ಮೊದಲಿನಿಂದಲೂ ಈ ಹಡಗು ಶ್ರೀಲಂಕಾ ಬಂದರಿಗೆ ಬರುವುದನ್ನು ಭಾರತ ತೀವ್ರವಾಗಿ ವಿರೋಧಿಸಿತ್ತು. ಭಾರತದ ಕಳವಳಕ್ಕೆ ಪ್ರಮುಖ 5 ಕಾರಣಗಳೆಂದರೆ,

bjp
ರಾಜಕೀಯ

ಕಾಂಗ್ರೆಸ್ಸಿಗರಿಗೇಕೆ ಜಿಹಾದಿಗಳ ಮೇಲೆ ಇಷ್ಟೊಂದು ಪ್ರೀತಿ? : ಬಿಜೆಪಿ ಪ್ರಶ್ನೆ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಕ್ಕೆ ಮಸಿ ಬಳಿಯಲು ಯತ್ನಿಸಿದ ದುಷ್ಟ ಶಕ್ತಿಗಳನ್ನು ಮಟ್ಟ ಹಾಕಲಾಗಿದೆ ಎಂದು ಬಿಜೆಪಿ ತಿಳಿಸಿದೆ.

Pingali
ಮಾಹಿತಿ

ನಮ್ಮ ರಾಷ್ಟ್ರಧ್ವಜವನ್ನು ನಿರ್ಮಿಸಿದ ಪಿಂಗಳಿ ವೆಂಕಯ್ಯ, ಮೊದಲು ಬ್ರಿಟಿಷ್ ಸೈನ್ಯದಲ್ಲಿದ್ದರು ; ಇಲ್ಲಿದೆ ಓದಿ ಅಚ್ಚರಿಯ ಮಾಹಿತಿ

ದೇಶಕ್ಕೊಂದು ಧ್ವಜಕೊಟ್ಟು 100 ವರ್ಷ ಕಳೆದರೂ ಪಿಂಗಳಿ ಅವರ ನೆನಪು ಅಜರಾಮರವಾಗಿದೆ. ಪಿಂಗಳಿ ವೆಂಕಯ್ಯ ಅವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಮುಂದೆ ಓದಿ.