Visit Channel

ಇಂದು ಜೀವನದುದ್ದಕ್ಕೂ ಮಾನವೀಯ ಮೌಲ್ಯಗಳನ್ನು ಸಾರಿದ ಯೇಸುವನ್ನು ಶಿಲುಬೆಗೇರಿಸಿದ ದಿನ

t4
  • ಪ್ರತಿನಿಧಿ

ಇಂದು ಗುಡ್​ ಫ್ರೈ ಡೇ.. ಯೇಸುವನ್ನು ಶಿಲುಬೆಗೆ ಏರಿಸಿದ ದಿನವನ್ನು ಸ್ಮರಿಸಲು ಕ್ರಿಶ್ಚಿಯನ್ ಸಮುದಾಯದವರು ಆಚರಿಸುವ ಒಂದು ಹಬ್ಬ. ಈ ಬಾರಿ ಏಪ್ರಿಲ್ 2ರಂದು ಗುಡ್ ಫ್ರೈಡೇ ಆಚರಣೆ ನಡೆಯುತ್ತಿದೆ. ಇದನ್ನು ಪವಿತ್ರ ಶುಕ್ರವಾರ, ಶ್ರೇಷ್ಠ ಶುಕ್ರವಾರ, ಮಹಾ ಶುಕ್ರವಾರ, ಕಪ್ಪು ಶುಕ್ರವಾರ ಎಂಬ ಹೆಸರುಗಳಿಂದಲೂ ಕರೆಯಲಾಗುತ್ತದೆ. ಹಾಗೇ, ಕ್ರಿಶ್ಚಿಯನ್ನರು ಇದನ್ನು ಪ್ರಾಯಶ್ಚಿತ್ತ, ದುಃಖ ಮತ್ತು ಉಪವಾಸದ ದಿನವೆಂದು ಪರಿಗಣಿಸುತ್ತಾರೆ. ಇದನ್ನೊಂದು ವಿಶೇಷ ದಿನವೆಂದು ಭಾವಿಸಿ, ಏಸು ಕ್ರಿಸ್ತ ಬದುಕಿನುದ್ದಕ್ಕೂ ಸಾರಿದ ಪ್ರೀತಿ, ಮಾನವೀಯ ಮೌಲ್ಯಗಳ ಸಂದೇಶವನ್ನು ನೆನಪಿಸಿಕೊಳ್ಳುತ್ತಾರೆ.

ಮಾನವ ಕುಲದ ಏಳಿಗೆಗಾಗಿ ಕಿಸ್ತನು ನೀಡಿರುವ ಬಲಿದಾನ ನೆನೆಯಲು ಗುಡ್ ಫ್ರೈಡೇ ಆಚರಿಸಲಾಗುತ್ತದೆ. ಇಂದಿನ ದಿನ ಕ್ರೈಸ್ತ ಧರ್ಮದವರು ಉಪವಾಸ ಮಾಡಿ, ಕ್ರಿಸ್ತನಿಗಾಗಿ ಪ್ರಾರ್ಥಿಸುವರು. ಶಿಲುಬೇಗೆರಿಸಿದ ಬಳಿಕ ಕ್ರಿಸ್ತನ ಉದಯವನ್ನು ಆಚರಿಸುವುದಕ್ಕೆ ಈ ದಿನವು ಆರಂಭವಾಗಿದೆ. ಕ್ರೈಸ್ತರು ಗುಡ್ ಫ್ರೈಡೆಯನ್ನು ತುಂಬಾ ವಿಶೇಷ ದಿನವೆಂದು ಪರಿಗಣಿಸುತ್ತಾರೆ.

ಗುಡ್​ಫ್ರೈಡೇ ಪದ ಬಳಕೆ ಯಾವಾಗ ಶುರುವಾಯಿತು?
ಈ ಗುಡ್​ಫ್ರೈಡೇ ಎಂಬ ಶಬ್ದ ಮೊದಲು ಬಳಕೆಯಾಗಿದ್ದು 1290ರಲ್ಲಿ, ದಿ ಸೌತ್​ ಇಂಗ್ಲಿಷ್​ ಲೆಜೆಂಡರಿ ಎಂಬ ಹ್ಯಾಗೋಗ್ರಾಫಿಕ್ ಪುಸ್ತಕದಲ್ಲಿ ಎಂದು ಹೇಳಲಾಗುತ್ತದೆ. ಹಾಗೇ, ಯೇಸುಕ್ರಿಸ್ತ ಎಲ್ಲ ಮಾನವರ ಮೇಲೆ ತನಗಿರುವ ಅಗಾಧ ಪ್ರೀತಿಯನ್ನು ಸಾರಿದ ದಿನವನ್ನಾಗಿ ಗುಡ್​ ಫ್ರೈಡೇ ಆಚರಿಸಲಾಗುತ್ತದೆ ಎಂದು 1885-1960ರವರೆಗೆ ಯುಎಸ್​​ನ ಕ್ಯಾಥೋಲಿಕ್​ ಶಾಲೆಯಲ್ಲಿ ಬಳಕೆಯಾದ ಪಠ್ಯ ಬಾಲ್ಟಿಮೋರ್ ಕ್ಯಾಟೆಕಿಸಮ್​ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.​ ಜೊತೆಗೆ ಗುಡ್​ ಫ್ರೈಡೇ ಬಗ್ಗೆ ಯಾವುದೇ ಒಂದು ನಿರ್ದಿಷ್ಟತೆ, ಸ್ಪಷ್ಟತೆ ಇಲ್ಲವೆಂದು 1907ರ ಕ್ಯಾಥೋಲಿಕ್ ಎನ್ಕ್ಲೋಪೀಡಿಯಾದಲ್ಲಿ ಹೇಳಲಾಗುತ್ತದೆ. ಇನ್ನೂ ಕೆಲವರು ಗಾಡ್​ ಫ್ರೈಡೇ (GOD FRIDAY)ಯಿಂದಲೇ ಗುಡ್​ ಫ್ರೈಡೇ ಆಗಿದೆ ಎಂದೂ ನಂಬುತ್ತಾರೆ. ಆದರೆ ಇವುಗಳಲ್ಲಿ ಯಾವುದು ನಿಜ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಎಲ್ಲವೂ ಅವರವರ ನಂಬಿಕೆಗೆ ಬಿಟ್ಟದ್ದು.

ಗುಡ್​ಫ್ರೈಡೇ ಆಚರಣೆ ಹೇಗೆ?
ಗುಡ್​ಫ್ರೈಡೇ ದಿನ ಕ್ರಿಶ್ಚಿಯನ್ನರು ಜೀಸಸ್​​ ಸ್ಮರಣೆ ಮಾಡುತ್ತಾರೆ. ಈ ವೇಳೆ ಶಿಲುಬೆಗಳು, ಕ್ಯಾಂಡಲ್ ಗಳು ಮತ್ತು ಬಟ್ಟೆಯನ್ನು ಬಲಿಪೀಠದಿಂದ ತೆಗೆಯಲಾಗುತ್ತದೆ. ಕೆಲವರು ಶೋಕದ ಸಂಕೇತವಾಗಿ ಕಪ್ಪು ಬಟ್ಟೆಯನ್ನೂ ಧರಿಸುತ್ತಾರೆ. ಈ ದಿನ ಚರ್ಚ್​​ನಲ್ಲಿ ಕ್ಯಾಂಡಲ್​ ಹಚ್ಚುವುದಿಲ್ಲ.. ಬೆಲ್​ ರಿಂಗ್​ ಮಾಡುವುದಿಲ್ಲ. ಈ ದಿನವನ್ನು ಶುಭದಿನ ಎಂದು ಪರಿಗಣಿಸಿ, ಹಲವಾರು ಸಾಮಾಜಿಕ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಗಿಡಗಳನ್ನು ನೆಡುವುದರ ಜೊತೆಗೆ ತಮ್ಮ ಕೈಲಾಗಿದ್ದನ್ನು ದಾನ ಮಾಡುತ್ತಾರೆ. ಈ ಸಮಯದಲ್ಲಿ ಆಚರಿಸಲ್ಪಡುವ ಪವಿತ್ರ ವಿಧಿಗಳೆಂದರೆ ಬ್ಯಾಪಿಸ್ಟಮ್(ಸಾವಿನ ಅಪಾಯದಲ್ಲಿರುವವರು), ಪ್ರಾಯಶ್ಚಿತ್ತ ಮತ್ತು ರೋಗಿಗಳಿಗೆ ಅಭಿಷೇಕ ಮಾಡಲಾಗುತ್ತದೆ.

ಸಂಪ್ರದಾಯದಲ್ಲಿ ಭಿನ್ನತೆ
ಕ್ರೈಸ್ತ ಧರ್ಮದ ವಿವಿಧ ಪಂಗಡದವರು ಇದನ್ನು ಹಲವಾರು ರೀತಿಯಲ್ಲಿ ಆಚರಿಸುತ್ತಾರೆ. ಚರ್ಚ್ ಗಳು ತಮ್ಮ ಸಂಪ್ರದಾಯದ ಆಚರಣೆಗಾಗಿ ನಿರ್ಧರಿಸುವ ಸಮಯ ಕೂಡ ಭಿನ್ನವಾಗಿರುತ್ತದೆ. ಪಂಗಡಗಳು ಎಷ್ಟೇ ಇದ್ದರೂ ಕ್ರೈಸ್ತರು ಬೈಬಲ್ ನ್ನು ಧರ್ಮಗ್ರಂಥವೆಂದು ಪರಿಗಣಿಸುವರು.

ವಿಭಿನ್ನ ದಿನಾಂಕ ನಿರ್ಧಾರ:
ಪಾಶ್ವಾತ್ಯ ಭಾಗದಲ್ಲಿ ಜಾರ್ಜಿಯನ್ ಕ್ಯಾಲೆಂಡರ್ ಮೂಲಕ ಈ ದಿನವನ್ನು ನಿರ್ಧರಿಸಲಾಗುತ್ತದೆ. ಪೂರ್ವದಲ್ಲಿ ಇದನ್ನು ಜೂಲಿಯನ್ ಕ್ಯಾಲೆಂಡರ್ ಮೂಲಕ ನಿರ್ಧರಿಸಲಾಗುತ್ತದೆ. ಹುಣ್ಣಿಮೆಯ ದಿನದ ಲೆಕ್ಕಾಚಾರ ಕೂಡ ಸಂಪೂರ್ಣ ಭಿನ್ನವಾಗಿರುತ್ತದೆ. ವಿಶ್ವದ ವಿವಿಧ ಭಾಗಗಳಲ್ಲಿ ಆಚರಣೆ ಕೂಡ ಭಿನ್ನವಾಗಿರುತ್ತದೆ. ಆದರೆ ಕೊನೆಯದಾಗಿ ನೀಡಲಾಗುವಂತಹ ಸಂದೇಶ ಮಾತ್ರ ಒಂದೇ, ಏಸು ಕ್ರೈಸ್ತನು ಮಾನವ ಕುಲಕ್ಕಾಗಿ ತನ್ನ ಬಲಿದಾನ ನೀಡಿರುವುದನ್ನು ನೆನಪಿಸಿಕೊಂಡು, ಕ್ರಿಸ್ತ ಹೇಳಿದ ಪ್ರೀತಿಯನ್ನು ಹರಡುವುದು.

ಏನಿದು ಈಸ್ಟರ್​ ಭಾನುವಾರ?
ಗುಡ್ ಫ್ರೈಡೇ ಏಸುವಿನ ಮರಣದ ದಿನವನ್ನು ಬಿಂಬಿಸಿದರೆ, ಈಸ್ಟರ್​ ಭಾನುವಾರ ಅವರ ಪುನರ್ಜನ್ಮದ ಪ್ರತೀಕವಾಗಿದೆ. ಏಸು ಶಿಲುಬೆಗೆ ಏರಿದ ಮೂರು ದಿನದಲ್ಲಿ ಮತ್ತೆ ಪುನರ್ಜನ್ಮ ಪಡೆದು, ಮತ್ತೆ ತಮ್ಮ ಅನುಯಾಯಿಗಳೊಂದಿಗೆ 40 ದಿನ ಕಳೆದರು ಎಂಬ ನಂಬಿಕೆ ಇದೆ. ಈ ದಿನವನ್ನು ಈಸ್ಟರ್​ ಭಾನುವಾರವನ್ನಾಗಿ ಆಚರಿಸಲಾಗುತ್ತದೆ.

Latest News

Russia
ದೇಶ-ವಿದೇಶ

ಜನಸಂಖ್ಯೆ ಹೆಚ್ಚಳಕ್ಕೆ 10 ಮಕ್ಕಳಿಗೆ ಜನ್ಮ ನೀಡಿದ್ರೆ 13 ಲಕ್ಷ ಬಹುಮಾನ : ರಷ್ಯಾ ಅಧ್ಯಕ್ಷ ಪುಟಿನ್‌ ಘೋಷಣೆ

ರಷ್ಯಾದ ರಾಜಕೀಯ(Russia Politics) ಮತ್ತು ಭದ್ರತಾ ತಜ್ಞ ಡಾ ಜೆನ್ನಿ ಮ್ಯಾಥರ್ಸ್, ಟೈಮ್ಸ್ ರೇಡಿಯೊದಲ್ಲಿ ಈ ಕುರಿತು ಮಾತನಾಡಿ, “ಮದರ್ ಹೀರೋಯಿನ್” ಎಂದು ಕರೆಯಲ್ಪಡುವ ಬಹುಮಾನ ಯೋಜನೆ

Dakshina Kannada
ರಾಜ್ಯ

ವಿಜಯಟೈಮ್ಸ್ ಇಂಪ್ಯಾಕ್ಟ್ ; ಬಂಟ್ವಾಳ ಸೇತುವೆಯ ದುಸ್ಥಿತಿ ನೋಡಲು ದಿಢೀರನೇ ಬಂದ ಅಧಿಕಾರಿಗಳು!

ಕಳಪೆ ಕಾಮಗಾರಿ ದುರಂತದ ಬಗ್ಗೆ ವಿಜಯಟೈಮ್ಸ್ ತಂಡ ಮಾಡಿದ್ದ ವರದಿಗೆ ಅಧಿಕಾರಿಗಳು ಈಗ ದಿಢೀರ್ ಎಚ್ಚೆತ್ತುಕೊಂಡಿದ್ದಾರೆ.

IT Minister
ದೇಶ-ವಿದೇಶ

5G ಬಿಡುಗಡೆಗೆ ತಯಾರಿ ಮಾಡಿಕೊಳ್ಳಿ : ಟೆಲಿಕಾಂ ಕಂಪನಿಗಳಿಗೆ ಐಟಿ ಸಚಿವ ಅಶ್ವಿನಿ ವೈಷ್ಣವ್ ಸೂಚನೆ

ಇನ್ನು ಏರ್ಟೆಲ್(Airtel) ಮತ್ತು ಜಿಯೋ(Jio) ಈ ತಿಂಗಳ ಕೊನೆಯಲ್ಲಿ ತಮ್ಮ 5G ಸೇವೆಗಳ ಮೊದಲ ಹಂತವನ್ನು ಬಿಡುಗಡೆಗೊಳಿಸುವ ನಿರೀಕ್ಷೆಯಿದೆ.