ಭಾರತದಲ್ಲಿ ಬುಧವಾರ ಕನಿಷ್ಠ 1,829 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 4,31,27,199 ಕ್ಕೆ ತಲುಪಿದೆ.
![india Covid 19](https://sp-ao.shortpixel.ai/client/to_webp,q_glossy,ret_img,w_441,h_248/https://vijayatimes.com/wp-content/uploads/2021/08/covid-19-vaccine-1-1024x576.jpg)
ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯ ಅನುಸಾರ, ಕಳೆದ 24 ಗಂಟೆಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 15,647 ಕ್ಕೆ ಇಳಿದಿದೆ.
ಭಾರತವು 33 ಹೊಸ ಕೋವಿಡ್ ಸಂಬಂಧಿತ ಸಾವುಗಳನ್ನು ವರದಿ ಮಾಡಿದೆ. ಒಟ್ಟಾರೆ ಇಲ್ಲಿಯವರೆಗೆ ಸಾವಿನ ಸಂಖ್ಯೆ 5,24,293ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 15,647. 24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಕೋವಿಡ್-19 ಕ್ಯಾಸೆಲೋಡ್‌ನಲ್ಲಿ 753 ಪ್ರಕರಣಗಳ ಇಳಿಕೆ ದಾಖಲಾಗಿದೆ.
ಮೇ 17 ಬುಧವಾರ ದೇಶವು 1,569 ಹೊಸ ಪ್ರಕರಣಗಳು ಮತ್ತು 19 ಸಾವುಗಳನ್ನು ವರದಿ ಮಾಡಿತ್ತು. ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳಲ್ಲಿ 0.04 ಪ್ರತಿಶತವನ್ನು ಒಳಗೊಂಡಿವೆ. ಆದರೆ ರಾಷ್ಟ್ರೀಯ ಕೋವಿಡ್-19 ಚೇತರಿಕೆ ದರವು 98.75 ಪ್ರತಿಶತದಷ್ಟು ದಾಖಲಾಗಿದೆ ಎಂದು ಸಚಿವಾಲಯ ನವೀಕರಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.