ಟೋಕಿಯೋ, ಆ. 06: ಭಾರತದ ಕುಸ್ತಿಪಟು ಭಜರಂಗ್ ಪುನಿಯಾ ಸೆಮಿಫೈನಲ್ ಪ್ರವೇಸಿಸುವ ಮೂಲಕ ಭಾರತಕ್ಕೆ ಮತ್ತೊಂದು ಪದಕದಾಸೆ ಮೂಡಿಸಿದ್ದಾರೆ.
ಇಂದು ನಡೆದ 65 ಕೆ.ಜಿ. ಫ್ರೀಸ್ಟೈಲ್ ವಿಭಾಗದ ಪಂದ್ಯದಲ್ಲಿ ಇರಾನ್ ನ ಮೊರ್ತೆಜಾ ಗಿಯಾಸಿ ವಿರುದ್ದ 2-1 ರ ಅಂತರದಲ್ಲಿ ಗೆಲುವು ದಾಖಲಿಸುವ ಮೂಲಕ ಪುನಿಯಾ ಸೆಮಿ ಫೈನಲ್ ಪ್ರವೇಶಿಸಿದ್ದಾರೆ. ಆರಂಭದಿಂದಲೇ ಆಕ್ರಮಣಕಾರಿಯಾಗಿ ಆಟವಾಡಿದ ಪುನಿಯಾ ಮೊದಲ ಸುತ್ತಿನಲ್ಲಿ 1-0 ಮುನ್ನಡೆ ಪಡೆದುಕೊಂಡರು. ನಂತರ ಎರಡನೇ ಸುತ್ತಿನಲ್ಲೂ ಕೂಡ ಅಂತರ ಕಾಯ್ಡುಕೊಂಡ ಭಾರತೀಯ ಕುಸ್ತಿಪಟು ಅಂತಿಮವಾಗಿ 2-1 ಅಂತರದಲ್ಲಿ ಜಯಿಸಿ ಸೆಮಿ ಫೈನಲ್ ಪ್ರವೇಶಿಸಿದ್ದಾರೆ.
ಸೆಮಿಫೈನಲ್ ಪಂದ್ಯದಲ್ಲಿ ಪುನಿಯಾ ಅಜೆರ್ಬೈಜಾನಿ ಹಾಜಿ ವಿರುದ್ದ ಸೆಣೆಸಲಿದ್ದಾರೆ. ಈ ಪಂದ್ಯವು ಇಂದು ಮಧ್ಯಾಹ್ನ ಭಾರತೀಯ ಕಾಲಮಾನ 2.45ಕ್ಕೆ ನಡೆಯಲಿದೆ.