ಟೋಕಿಯೋ, ಆ. 07: ಒಲಂಪಿಕ್ಸ್ ಟೂರ್ನಿಯಲ್ಲಿ ಭಾರತದ ಭರವಸೆಯ ಕುಸ್ತಿಪಟು ಭಜರಂಗ್ ಪೂನಿಯಾ ಅವರು ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದಾರೆ.
ಪುರುಷರ ಪ್ರೀಸ್ಟೈಲ್ 65 ಕೆ.ಜಿ ವಿಭಾಗದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಪೂನಿಯಾ ಅವರು ಕಜಕಿಸ್ತಾನದ ಡೌಲೆಟ್ ನಿಯಾಜ್ಬೆಕೊವ್ ವಿರುದ್ಧ 8-0 ಅಂತರದಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ.
ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಪದಕ ತಂದುಕೊಟ್ಟ 6ನೇ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಭಜರಂಗ್ ಪೂನಿಯಾ ಪಾತ್ರರಾಗಿದ್ದಾರೆ.