ಟೋಕಿಯೊ: ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತ ಹಾಕಿ ತಂಡದ ಗೆಲುವಿನ ಅಭಿಯಾನ ಮುಂದುವರೆದಿದೆ. ಮೊದಲ ಪಂದ್ಯದಲ್ಲಿ ಗೆದ್ದು ಶುಭಾರಂಭ ಮಾಡಿದ್ದ ಭಾರತದ ಪುರುಷರ ಹಾಕಿ ತಂಡ 2ನೇ ಪಂದ್ಯದಲ್ಲಿ 3-0 ಅಂತರದಿಂದ ಸ್ಪೇನ್ ತಂಡವನ್ನು ಮಣಿಸಿದೆ.
‘ಎ’ ಗುಂಪಿನ ಪಂದ್ಯದಲ್ಲಿ ವಿಶ್ವದ ನಂ.9 ಸ್ಪೇನ್ ವಿರುದ್ಧ ಗೆಲುವು ದಾಖಲಿಸುವಲ್ಲಿ ಸಿಮ್ರನ್ಜೀತ್ ಸಿಂಗ್ ಮತ್ತು ರೂಪೀಂದರ್ ಪಾಲ್ ಸಿಂಗ್ ಮಹತ್ತರ ಪಾತ್ರ ವಹಿಸಿದರು. ಈ ಗೆಲುವಿನ ಮೂಲಕ ಭಾರತ ಟೋಕಿಯೊ ಒಲಿಂಪಿಕ್ಸ್ನಲ್ಲಿ ತನ್ನ ಎರಡನೇ ಗೆಲುವು ದಾಖಲಿಸಿದೆ.
ಕ್ರೀಡಾಕೂಟದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 3–2ರಿಂದ ಗೆಲುವು ಸಾಧಿಸುವ ಮೂಲಕ ಭಾರತ ಶುಭಾರಂಭ ಮಾಡಿತ್ತು. ಭಾರತ ತಂಡದ ಮುಂದಿನ ಪಂದ್ಯವು ಒಲಿಂಪಿಕ್ ಚಾಂಪಿಯನ್ ತಂಡ ಅರ್ಜೆಂಟೀನಾ ವಿರುದ್ಧ ಗುರುವಾರ ನಡೆಯಲಿದೆ.